ರಶ್ಮಿಕಾ ಜೊತೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ
Recommended Video
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದ್ದೂರಿ, ಬಹುದ್ದೂರ್, ಭರ್ಜರಿ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಹ್ಯಾಟ್ರಿಕ್ ಗೆಲುವು ಪಡೆದಿರುವ ಧ್ರುವ ಸರ್ಜಾ, ಈಗ ಮತ್ತೊಂದು ಹಿಟ್ ಎದುರು ನೋಡುತ್ತಿದ್ದಾರೆ. ಪೊಗರು ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳಿಂದ ಶ್ರಮಿಸಿರುವ ಧ್ರುವ ಚಿತ್ರದಲ್ಲಿ ನಟೋರಿಯಸ್ ಆಗಿ ಕಾಣಿಸಿಕೊಂಡಿದ್ದಾರೆ.
ಭರ್ಜರಿ ಸಿನಿಮಾದ ನಂತರ ಧ್ರುವ ಅಭಿನಯದ ಸಿನಿಮಾ ತೆರೆಗೆ ಬಂದಿಲ್ಲ. ಸುಮಾರು ಎರಡು ವರ್ಷಗಳಿಂದ ಅಭಿಮಾನಿಗಳು ಧ್ರುವನ ಪೊಗರು ಅವತಾರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೆ ಭಯಾನಕ ಲುಕ್ ಮೂಲಕ ಚಿತ್ರಪ್ರಿಯರ ನಿರೀಕ್ಷೆ ಹೆಚ್ಚಿಸಿದ್ದಾರೆ. ಇದರ ನಡುವೆ ಆಕ್ಷನ್ ಪ್ರಿನ್ಸ್ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

ತೆಲುಗಿನಲ್ಲಿ ತೆರೆಗೆ ಬರ್ತಿದೆ ಪೊಗರು
ಪೊಗರು ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. ಪೊಗರು ಔಟ್ ಅಂಡ್ ಔಟ್ ಮಾಸ್ ಸಿನಿಮಾವಾದ್ದರಿಂದ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ಕಾರಣಕ್ಕೆ ತೆಲುಗಿನಲ್ಲೂ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ ಚಿತ್ರತಂಡ. ಈ ಮೂಲಕ ಧ್ರುವ ತೆಲಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

ಧ್ರುವ ಸರ್ಜಾಗೆ ರಶ್ಮಿಕಾ ನಾಯಕಿ
ಪೊಗರು ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಈಗಾಗಲೆ ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸುವ ಮೂಲಕ ತೆಲುಗು ನಟಿಯಾಗಿದ್ದಾರೆ. ಹಾಗಾಗಿ ಪೊಗರು ಸಿನಿಮಾ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ರಶ್ಮಿಕಾ ಯಜಮಾನ ಚಿತ್ರದ ನಂತರ ಕನ್ನಡದಲ್ಲಿ ಪೊಗರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಟಾಕಿ ಭಾಗ ಮುಗಿಸಿರುವ ಚಿತ್ರತಂಡ
ಪೊಗರು ಚಿತ್ರದ ಟಾಕಿ ಭಾಗ ಈಗಾಗಲೆ ಮುಕ್ತಾಯವಾಗಿದೆ. ಆದರೆ ಹಾಡಿನ ಚತ್ರೀಕರಣ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ಧ್ರುವ ಸರ್ಜಾ ಸದ್ಯ ಸಿನಿಮಾ ಜೊತೆಗೆ ಮದುವೆ ತಯಾರಿಯಲ್ಲಿದ್ದಾರೆ. ಮುಂದಿನ ತಿಂಗಳು ನವೆಂಬರ್ ನಲ್ಲಿ ಧ್ರುವ ಹಸೆಮಣೆ ಏರಲಿದ್ದಾರೆ. ಹಾಗಾಗಿ ಸಿನಿಮಾಗಳು ಕೆಲಸಗಳನ್ನು ಬೇಗ ಬೇಗ ಮುಗಿಸುತ್ತಿದ್ದಾರೆ ಧ್ರುವ.

ಅಕ್ಟೋಬರ್ 24 ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್
ಬಹು ನಿರೀಕ್ಷೆಯ ಪೊಗರು ಚಿತ್ರದ ಟ್ರೈಲರ್ ಅಕ್ಟೋಬರ್ 24ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. ವಿಶೇಷವಾಗಿ ಇದು ಡೈಲಾಗ್ ಟ್ರೈಲರ್ ಆಗಿರಲಿದೆಯಂತೆ. ಇನ್ನು ತೆಲುಗಿನಲ್ಲಿ ವಿಭಿನ್ನವಾದ ಟ್ರೈಲರ್ ರಿಲೀಸ್ ಮಾಡಲಿದೆ ಚಿತ್ರತಂಡ. ಆದ್ರೆ ತೆಲುಗು ಟ್ರೈಲರ್ ಕೆಲವು ದಿನಗಳು ತಡವಾಗಿ ಬಿಡುಗಡೆಯಾಗಲಿದೆ.

ಡಿಸೆಂಬರ್ ನಲ್ಲಿ ಚಿತ್ರ ರಿಲೀಸ್ ಸಾಧ್ಯತೆ
ಪೊಗರು ಸಿನಿಮಾ ಡಿಸೆಂಬರ್ ನಲ್ಲಿ ರಿಲೀಸ್ ಮಾಡುವ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಮೂಲಗಳ ಪ್ರಕಾರ ಚಿತ್ರ ಡಿಸೆಂಬರ್ 27ಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಎದುರು ಡಾಲಿ ಧನಂಜಯ್ ಮತ್ತು ರವಿಶಂಕರ್ ಅಬ್ಬರಿಸಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ರಾಜವೇಂದ್ರ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಕ್ಲೈಮ್ಯಾಕ್ಸ್ ನಲ್ಲಿ ಅಂತರಾಷ್ಟ್ರೀಯ ಬಾಡಿಬಿಲ್ಡರ್ಸ್ ಮೋರ್ಗನ್ ಅಷ್ಟೆ, ಕಾಯ್ ಗ್ರೀನ್, ಜಾನ್ ಲೂಕಸ್, ಜೋ ಲಿಂಡರ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











