ಧ್ರುವ ಸರ್ಜಾ 'ಖರಾಬು' ಹಾಡನ್ನು ತೆಲುಗಿನಲ್ಲಿಯೂ ಕೇಳಲು ರೆಡಿಯಾಗಿ
ಅಣ್ಣನ ಅಗಲಿಕೆ, ಕೊರೊನಾ ಪಾಸಿಟಿವ್ ಒಂದರಮೇಲೊಂದು ಸಂಕಷ್ಟ ಎದುರಿಸುತ್ತಿರುವ ನಟ ಧ್ರುವ ಸರ್ಜಾ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬೇಸರದ ನಡುವೆಯು ಕೊಂಚ ಸಂತೋಷ ಪಡುವ ವಿಚಾರ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಕ್ಕಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಈಗ ಮತ್ತೆ ಸದ್ದು ಮಾಡುತ್ತಿದೆ.
Recommended Video
ಬಹುನಿರೀಕ್ಷೆಯ ಪೊಗರು ಸಿನಿಮಾದ ಖರಾಬು ಹಾಡು ಈಗಾಗಲೆ ರಿಲೀಸ್ ಆಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಸದ್ದು ಮಾಡುತ್ತಿರುವ ಖರಾಬು ಹಾಡು ಈಗ ತೆಲುಗಿನಲ್ಲೂ ಅಬ್ಬರಿಸಲು ಸಜ್ಜಾಗಿದೆ. ಹೌದು, ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಖರಾಬು ಹಾಡಿನ ತೆಲುಗು ವರ್ಷನ್ ರಿಲೀಸ್ ಆಗುತ್ತಿದೆ. ಮುಂದೆ ಓದಿ..

ತೆಲುಗಿನಲ್ಲಿ ನಿರೀಕ್ಷೆ ಹೆಚ್ಚಿಸಿದ ಪೊಗರು
ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಪೊಗರು ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಮುಖ್ಯ ಕಾರಣ ರಶ್ಮಿಕಾ ಮಂದಣ್ಣ. ಧ್ರುವ ಸರ್ಜಾ ಜೊತೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಸಖತ್ ಫೇಮಸ್. ಹಾಗಾಗಿ ಪೊಗರು ಸಿನಿಮಾದ ಮೇಲೆ ತೆಲುಗಿನಲ್ಲಿಯೂ ನಿರೀಕ್ಷೆ ಹೆಚ್ಚಾಗಿದೆ.

ಆಗಸ್ಟ್ ನಲ್ಲಿ ಬರ್ತಿದೆ ತೆಲುಗು ಪೊಗರು
ಅಂದ್ಹಾಗೆ ಪೊಗರು ಹಾಡು ಮುಂದಿನ ತಿಂಗಳು ಆಗಸ್ಟ್ 6ಕ್ಕೆ ರಿಲೀಸ್ ಆಗುತ್ತಿದೆ. ತೆಲುಗು ವರ್ಷನ್ ಪೊಗರು ಹಾಡಿಗೆ ಭಾಸ್ಕರಭಟ್ಲ ರವಿ ಕುಮಾರ್ ಸಾಹಿತ್ಯ ಬರೆಯುತ್ತಿದ್ದಾರೆ. ತೆಲುಗಿನಲ್ಲಿ ಈಗಾಗಲೆ 125ಕ್ಕು ಹೆಚ್ಚು ಹಾಡುಗಳನ್ನು ಬರೆದಿರುವ ಭಾಸ್ಕರಭಟ್ಲ ಪೊಗರು ಹಾಡಿಗೆ ಸಾಹಿತ್ಯ ರಚಿಸುತ್ತಿದ್ದಾರೆ. ಈ ಹಾಡನ್ನು ಆಲ ವೈಕುಂಟಪುರಂಲೋ ಸಿನಿಮಾ ಖ್ಯಾತಿಯ ಗಾಯಕ ಅನುರಾಗ್ ಸಿಂಗ್ ಹಾಡಿದ್ದಾರೆ.

ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಹಾಡು
ಕನ್ನಡದಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿರುವ ಪೊಗರು ಹಾಡು 90 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಖರಾಬು ಹಾಡಿಗೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿ, ಬರೆದು ಹಾಡಿದ್ದಾರೆ. ಸಿನಿಮಾದಿಂದ ಬಂದಿರುವ ಬಂದಿರುವ ಮೊದಲ ಹಾಡು ಈ ಮಟ್ಟಿಗೆ ಸಕ್ಸಸ್ ಕಂಡಿದೆ ಅಂದ್ಮೇಲೆ ಇನ್ನೂ ಸಿನಿಮಾ ನಿರೀಕ್ಷೆಯೂ ಅಷ್ಟೆ ದೊಡ್ಡ ಮಟ್ಟದಲ್ಲಿ ಇದೆ.

ಆಗಸ್ಟ್ 15ರಿಂದ ಚಿತ್ರೀಕರಣ ಪ್ರಾರಂಭ
ಪೊಗರು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮುಗಿಸಿದೆ. ಆದರೆ ಇನ್ನೂ ಎರಡು ಹಾಡಿನ ಚಿತ್ರೀಕರಣ ಭಾಗಿಯುಳಿಸಿಕೊಂಡಿದೆ. ಲಾಕ್ ಡೌನ್ ಪರಿಣಾಮ ಚಿತ್ರೀಕರಣ ಮುಂದ್ಕಕೆ ಹೋಗಿದೆ. ಆದರೆ ಮೂಲಗಳ ಪ್ರಕಾರ ಮುಂದಿನ ತಿಂಗಳು ಆಗಸ್ಟ್ 15ಕ್ಕೆ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











