For Quick Alerts
  ALLOW NOTIFICATIONS  
  For Daily Alerts

  ಯಾರ ಮನೆಯಲ್ಲೂ ಸಂಭ್ರಮವಿಲ್ಲ ಈ ನಡುವೆ 'ಪೊಗರು' ಸಂಭ್ರಮ ಬೇಡ: ನಟ ಧ್ರುವ ಸರ್ಜಾ

  |

  ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ವೈಸರ್ ಗೆ ಇಡೀ ದೇಶವೆ ಸ್ತಬ್ದವಾಗಿದೆ. ಜನರು ಮನೆಯಿಂದ ಹೊರ ಬರದ ಸ್ಥಿತಿಯಲ್ಲಿದ್ದಾರೆ. ಏಪ್ರಿಲ್ 14ರ ವರೆಗೂ ಭಾರತ ಸಂಪೂರ್ಣ ಲಾಕ್ ಡೌನ್ ಆಗಿದೆ. ಜನರು ಆತಂಕದಲ್ಲಿ ಬದುವ ಸ್ಥಿತಿ ನಿರ್ಮಾಣವಾಗಿದೆ.

  Karabu song released date postponed | Pogaru | Dhruva sarja | Filmibeat kannada

  ಇಂತಹ ಸಂದರ್ಭದಲ್ಲಿ ಪೊಗರು ಸಿನಿಮಾದ ಸಂಭ್ರಮವನ್ನು ಜನರ ಮೇಲೆ ಹೇರುವುದು ಸರಿಯಲ್ಲ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಹೌದು, ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷೆಯ ಸಿನಿಮಾದ ಒಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೀಗ ಇಂತಹ ಸಮಯದಲ್ಲಿ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂದು ನಟ ಧ್ರುವ ಹೇಳಿದ್ದಾರೆ. ಮುಂದೆ ಓದಿ..

  ಪೊಗರು ಹಾಡು ರಿಲೀಸ್ ಮುಂದಕ್ಕೆ

  ಪೊಗರು ಹಾಡು ರಿಲೀಸ್ ಮುಂದಕ್ಕೆ

  ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಬಹುನಿರೀಕ್ಷೆಯ ಹಾಡನ್ನು ಇದೆ ತಿಂಗಳು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಅಭಿಮಾನಿಗಳು ಸಹ ಹಾಡನ್ನು ಕೇಳಲು ಕಾತರದಿಂದ ಕಾಯುತ್ತಿದ್ದರು. ಆದರೀಗ ಸಿನಿಮಾದ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸುವುದಕ್ಕೆ ಬ್ರೇಕ್ ಹಾಕಿದೆ. ಜನರ ಸಂಭ್ರಮವನ್ನು ಕಿತ್ತುಕೊಂಡಿರುವ ಕೊರೊನಾ ವೈರಸ್ ಹಾವಳಿಯ ಪರಿಣಾಮ ಪೊಗರು ಹಾಡನ್ನು ರಿಲೀಸ್ ಮಾಡದಿರಲು ಸಿನಿಮಾತಂಡ ನಿರ್ಧರಿಸಿದೆ.

  ಮಾರ್ಚ್ 27ಕ್ಕೆ ಬರಬೇಕಿತ್ತು 'ಖರಾಬು' ಸಾಂಗ್

  ಮಾರ್ಚ್ 27ಕ್ಕೆ ಬರಬೇಕಿತ್ತು 'ಖರಾಬು' ಸಾಂಗ್

  ಪೊಗರು ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ದೊಡ್ಡ ಮಟ್ಟಕ್ಕಿದೆ. ಈಗಾಗಲೆ ಚಿತ್ರದಿಂದ ಡೈಲಾಗ್ ಟ್ರೈಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರ ಬೆನ್ನಲೆ ಈಗ ಚಿತ್ರದ ಮೋಸ್ಟ್ ಎಕ್ಸ್ ಪೆಕ್ಟೆಡ್ 'ಖರಾಬು...' ಸಾಂಗ್ ಇದೆ ತಿಂಗಳು ಮಾರ್ಚ್ 27ಕ್ಕೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೀಗ ಮಾರ್ಚ್ 27ಕ್ಕೆ ಸಿನಿಮಾದಿಂದ 'ಖರಾಬು..' ಹಾಡು ತೆರೆಗೆ ಬರುತ್ತಿಲ್ಲ ಎಂದು ನಟ ಧ್ರುವ ಸರ್ಜಾ ಸ್ಪಷ್ಟಪಡಿಸಿದ್ದಾರೆ.

  ಈ ಸಮಯದಲ್ಲಿ ಪೊಗರು ಸಂಭ್ರಮ ಬೇಡ

  ಪೊಗರು ಸಿನಿಮಾ ಹಾಡು ರಿಲೀಸ್ ಮುಂದಕ್ಕೆ ಹೋದ ಬಗ್ಗೆ ನಟ ಧ್ರುವ ಸರ್ಜಾ "ಕೊರೊನಾದಿಂದಾಗಿರುವ ಅವಾಂತರ ಸೂಕ್ಷ್ಮಮಾಗಿ ಗಮನಿಸುತ್ತಲೇ ಬಂದಿದ್ದೀವಿ. ಯಾರೊಬ್ಬರ ಮನೆಯಲ್ಲೂ ಸಂಭ್ರಮವಿಲ್ಲ. ಇಂತ ವಾತಾವರಣದಲ್ಲಿ ನಮ್ಮ ಪೊಗರು ಸಿನಿಮಾದ ಸಂಭ್ರಮ ಹೇರುವುದು ಬೇಡವೆಂದು ನಮ್ಮ ತಂಡ ನಿರ್ಧರಿಸಿದೆ. ಅತೀ ಶೀಘ್ರದಲ್ಲೇ ಖರಾಬು ಹಾಡು ಬಿಡುಗಡೆಯಾಗಲಿದೆ. ಅಲ್ಲಿಯವರೆಗೂ ಅಭಿಮಾನಿಗಳ ಆರೋಗ್ಯವೇ ಮಹಾಭಾಗ್ಯ. ಮನೆಯಲ್ಲಿರಿ ಜೈ ಆಂಜನೇಯ" ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.

  ಪೊಗರು ಸಿನಿಮಾ ರಿಲೀಸ್ ಮುಂದಕ್ಕೆ

  ಪೊಗರು ಸಿನಿಮಾ ರಿಲೀಸ್ ಮುಂದಕ್ಕೆ

  ಪೊಗರು ಹಾಡನ್ನು ಸದ್ಯ ರಿಲೀಸ್ ಮಾಡದಿರಲು ಸಿನಿಮಾ ತಂಡ ನಿರ್ಧರಿಸಿದೆ. ಸದ್ಯ ಏಪ್ರಿಲ್ 14ರ ವರೆಗೂ ಇಡೀ ದೇಶ ಲೈಕ್ ಡೌನ್ ಆಗಿರುವ ಹಿನ್ನಲ್ಲೆ ಸದ್ಯಕ್ಕೆ ಹಾಡು ಬಿಡುಗಡೆಯಾಗುವುದು ಅನುಮಾನ. ಜೊತೆಗೆ ಸಿನಿಮಾ ಕೂಡ ಏಪ್ರಿಲ್ ಕೊನೆಯಲ್ಲಿ ತೆರೆಗೆ ತರುವ ಪ್ಲಾನ್ ಮಾಡಲಾಗಿತ್ತು. ಆದರೀಗ ಸಿನಿಮಾ ರಿಲೀಸ್ ಕೂಡ ಮುಂದಕ್ಕೆ ಹೋಗುವುದು ಪಕ್ಕಾ ಆಗಿದೆ.

  English summary
  Corona Effect Dhruva Sarja starrer Pogaru movie song release postponed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X