ರಶ್ಮಿಕಾ ಜೊತೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಇದೇ ಕ್ರಿಸ್ಮಸ್ ಗೆ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ನಿಯಮಗಳು ಸಡಿಲಿಕೆ ಆಗದ ಕಾರಣ ಸಿನಿಮಾ ರಿಲೀಸ್ ಮಾಡುವ ರಿಸ್ಕ್ ತೆಗೆದುಕೊಂಡಿಲ್ಲ ಸಿನಿಮಾತಂಡ.

ಬಹುನಿರೀಕ್ಷೆಯ ಪೊಗರು ಸಿನಿಮಾ ಮುಂದಿನ ವರ್ಷ ಜನವರಿಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಅಂದಹಾಗೆ ಪೊಗರು ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ ಎನ್ನುವುದು ಹಳೆಯ ವಿಚಾರ. ತೆಲುಗು ವರ್ಷನ್ ಸಾಂಗ್ ಕೂಡ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದೀಗ ಪೊಗರು ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೌದು, ಸಿನಿಮಾ ಕನ್ನಡ, ತೆಲುಗು ಜೊತೆಗೆ ತಮಿಳಿನಲ್ಲೂ ತೆರೆಗೆ ಬರುತ್ತಿದೆ. ಹೌದು, ಪೊಗರು ಸಿನಿಮಾವನ್ನು ತಮಿಳಿನಲ್ಲೂ ರಿಲೀಸ್ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ತಂಡ ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.

Dhruva Sarja starrer Pogaru movie will also be release in Tamil

ತಮಿಳಿನಲ್ಲಿ ಪೊಗರು ಚಿತ್ರಕ್ಕೆ 'ಸೆಮ್ಮಾ ತಿಮಿರು' ಎಂದು ಟೈಟಲ್ ಇಡಲಾಗಿದೆ. ಸದ್ಯ ತಮಿಳು ವರ್ಷನ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ತಮಿಳು ಪ್ರೇಕ್ಷಕರನ್ನು ಸೆಳೆಯಲು ಸಿದ್ಧರಾಗಿದ್ದಾರೆ ಧ್ರುವ ಸರ್ಜಾ ಮತ್ತು ರಶ್ಮಿಕಾ. ಇನ್ನೂ ಹಿಂದಿಯಲ್ಲೂ ಡಬ್ ಆಗಿ ರಿಲೀಸ್ ಆಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಹಿಂದಿ ಡಬ್ಬಿಂಗ್ ರೈಟ್ಸ್7.2 ಕೋಟಿ ರೂ. ಮಾರಾಟವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಅಂದಹಾಗೆ ನಾಯಕಿ ರಶ್ಮಿಕಾ ಈಗಾಗಲೇ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ತಮಿಳಿನ ಮೊದಲ ಸಿನಿಮಾ ರಿಲೀಸ್ ಸುಲ್ತಾನ್ ರಿಲೀಸ್ ಗೆ ಎದುರುನೋಡುತ್ತಿದ್ದಾರೆ. ಇದೀಗ ಸೆಮ್ಮಾ ತಿಮಿರು ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಲು ತಯಾರಾಗಿದ್ದಾರೆ. ಧ್ರುವ ಸರ್ಜಾ ಮೊದಲ ಬಾರಿಗೆ ತಮಿಳು ಪ್ರೇಕ್ಷಕರಿಗೆ ದರ್ಶನ ನೀಡುತ್ತಿದ್ದು, ತಮಿಳು ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದುನೋಡಬೇಕು.

Recommended Video

ಸಲಾರ್ ಸಿನಿಮಾದಲ್ಲಿ ನಟಿಸಲು ಮತ್ತೊಂದು ಅವಕಾಶ ನೀಡಿದ ಪ್ರಶಾಂತ್ ನೀಲ್ | Filmibeat Kannada

More from Filmibeat

English summary
Dhruva Sarja starrer Pogaru movie will also be release in Tamil. Titled as Semma Thimiru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X