For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಮೊತ್ತಕ್ಕೆ ಟಿವಿಗೆ ಸೇಲ್ ಆಯ್ತು 'ಪೊಗರು'; ಯಾವಾಗ ಪ್ರಸಾರ ಆಗ್ತಿದೆ ಸಿನಿಮಾ

  |

  ಸ್ಯಾಂಡಲ್ ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯ ಪೊಗರು ಸಿನಿಮಾ ರಿಲೀಸ್ ಆಗಿ ತಿಂಗಳ ಮೇಲಾಗಿದೆ. ಕೊರೊನಾ ಬಳಿಕ ಸ್ಯಾಂಡಲ್ ವುಡ್‌ನಲ್ಲಿ ತೆರೆಗೆ ಬಂದ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ.

  ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಪೊಗರು ಸಿನಿಮಾ | Filmibeat Kannada

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 4ನೇ ಸಿನಿಮಾ ಪೊಗರು ಈಗಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಕಿರುತೆರೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪೊಗರು ಸಿನಿಮಾದ ಸ್ಯಾಟಲೈಟ್ ರೈಟ್ಸ್ ದೊಡ್ಡ ಮೊತ್ತಕ್ಕೆ ಟಿವಿಗೆ ಸೇಲ್ ಆಗಿದೆ.

  ಬಿಡುಗಡೆಯಾದ ಒಂದೇ ತಿಂಗಳಲ್ಲೇ ಕಿರುತೆರೆಗೆ ಬಂದ ಪೊಗರುಬಿಡುಗಡೆಯಾದ ಒಂದೇ ತಿಂಗಳಲ್ಲೇ ಕಿರುತೆರೆಗೆ ಬಂದ ಪೊಗರು

  ಕನ್ನಡದ ಅತೀ ದೊಡ್ಡ ಮನರಂಜನಾ ವಾಹಿನಿ ಉದಯ ಟಿವಿಗೆ ಪೊಗರು ರೈಟ್ಸ್ ಮಾರಾಟವಾಗಿದೆ. ಅಂದ್ಮೇಲೆ ಪೊಗರು ಟಿವಿಯಲ್ಲಿ ಪ್ರಸಾರವಾಗುವ ದಿನಾಂಕ ಕೂಡ ಸಮೀಪಿಸುತ್ತಿದೆ. ವಿಶೇಷ ದಿನದಂದು ಪೊಗರು ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

  ಸದ್ಯ ಸಮೀಪಿಸುತ್ತಿರುವ ದೊಡ್ಡ ಹಬ್ಬವೆಂದರೆ ಯುಗಾದಿ. ಈ ಬಾರಿಯ ಯುಗಾದಿಗೆ ಪೊಗರು ಟಿವಿಯಲ್ಲಿಅಬ್ಬರಿಸಿದರೂ ಅಚ್ಚರಿ ಇಲ್ಲ. ಚಿತ್ರಮಂದಿರಗಳಲ್ಲಿ ನೋಡಲು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಟುಂಬದವರ ಜೊತೆ ಕುಳಿತು ಪೊಗರು ವೀಕ್ಷಿಸಬಹುದು.

  ಪೊಗರು ನಂದ ಕಿಶೋರ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗೀತಾ ಟೀಚರ್ ಆಗಿ ರಶ್ಮಿಕಾ ಗಮನ ಸೆಳೆದಿದ್ದಾರೆ. ಇನ್ನು ಚಿತ್ರದ ಖರಾಬು ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.

  English summary
  Dhruva Sarja starrer Pogaru satellite rights sale for Udaya TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X