For Quick Alerts
  ALLOW NOTIFICATIONS  
  For Daily Alerts

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸದ ಸುದ್ದಿ: ಪೊಗರು ರಿಲೀಸ್ ಡೇಟ್ ಬಹಿರಂಗ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸದ್ಯ ಪೊಗರು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪೊಗರು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಎರಡು ವರ್ಷದ ಮೇಲಾಗಿದೆ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಇನ್ನೂ ಕಾತರದಿಂದ ಕಾಯುತ್ತಿದ್ದಾರೆ. ಧ್ರುವ ಸಹ ಅಭಿಮಾನಿಗಳ ಮುಂದೆ ಬರದೆ ಮೂರು ವರ್ಷಗಳಾಗಿದೆ.

  ಧ್ರುವ ಅಭಿಮಾನಿಗಳಿಗೆ ಜಬರ್ದಸ್ತ್ ಸುದ್ದಿ..! | Dhruva Sarja | Pogaru | Rashmika Mandanna

  ಸಾಕಷ್ಟು ಸಮಯದ ನಂತರ ಪೊಗರು ಮೂಲಕ ತೆರೆಮೇಲೆ ಬರಲು ಸಜ್ಜಾಗಿರುವ ಧ್ರುವ ಸರ್ಜಾರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಯಾವಾಗ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಆದರೀಗ ಈ ಕುತೂಹಲ ತೆರೆ ಬಿದ್ದಿದೆ. ಹೌದು, ಮೂಲಗಳ ಪ್ರಕಾರ ಪೊಗರು ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರುತ್ತಿದೆ. ಮುಂದೆ ಓದಿ..

  ನಟಿ ತಾರಾ ಕೋರಿಕೆ ಈಡೇರಿಸುತ್ತಾರಾ ಯಶ್, ಧ್ರುವ ಸರ್ಜಾನಟಿ ತಾರಾ ಕೋರಿಕೆ ಈಡೇರಿಸುತ್ತಾರಾ ಯಶ್, ಧ್ರುವ ಸರ್ಜಾ

  ಏಪ್ರಿಲ್ 24ಕ್ಕೆ ಪೊಗರು ತೆರೆಗೆ

  ಏಪ್ರಿಲ್ 24ಕ್ಕೆ ಪೊಗರು ತೆರೆಗೆ

  ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷೆಯ ಪೊಗರು ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಯಾವಾಗ ಎನ್ನುವುದು ಬಹಿರಂಗವಾಗಿಲ್ಲ. ಸದ್ಯ 24ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

  ಸೆನ್ಸಾರ್ ಆದ ಮೇಲೆ ಅಧಿಕೃತವಾಗಿ ಅನೌನ್ಸ್

  ಸೆನ್ಸಾರ್ ಆದ ಮೇಲೆ ಅಧಿಕೃತವಾಗಿ ಅನೌನ್ಸ್

  ಸದ್ಯ ಕೊನೆ ಹಂತದ ಚಿತ್ರೀಕರಣದಲ್ಲಿರುವ ಪೊಗರು ಸಿನಿಮಾ, ರಿಲೀಸ್ ಗೂ ತಯಾರಿ ಮಾಡಿಕೊಳ್ಳುತ್ತಿದೆ. ಅಂದ್ಹಾಗೆ ಸಿನಿಮಾ ಸೆನ್ಸಾರ್ ಆದಮೇಲೆ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಮಾಡಲಿದೆಯಂತೆ ಚಿತ್ರತಂಡ. ಸಧ್ಯದಲ್ಲೇ ಚಿತ್ರೀಕರಣ ಮುಗಿಸಿ ಪೊಗರು ಸೆನ್ಸಾರ್ ಪರೀಕ್ಷೆಗೆ ಹೋಗಲಿದೆ.

  ಭವಿಷ್ಯದ 'ಲೀಡರ್ಸ್' ಆಗಲು ಈ ಮೂರು ಯಂಗ್ ಸ್ಟಾರ್ ರೆಡಿ!ಭವಿಷ್ಯದ 'ಲೀಡರ್ಸ್' ಆಗಲು ಈ ಮೂರು ಯಂಗ್ ಸ್ಟಾರ್ ರೆಡಿ!

  ಹಾಡಿನ ಚಿತ್ರೀಕರಣ ನಡೆಯುತ್ತಿದೆ

  ಹಾಡಿನ ಚಿತ್ರೀಕರಣ ನಡೆಯುತ್ತಿದೆ

  ಪೊಗರು ಸಿನಿಮಾದ ಎರಡು ಪ್ರಮುಖ ಹಾಡಿನ ಚಿತ್ರೀಕರಣ ಬಾಕಿಯುಳಿದಿದೆ. ಈಗಾಗಲೆ ಚೆನ್ನೈನಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಹಾಡಿಗಾಗಿ ಅದ್ಧೂರಿ ಸೆಟ್ ಕೂಡ ಹಾಕಲಾಗಿದೆ. ಇನ್ನು ಮಾರ್ಚ್ 10ರಿಂದ ಧ್ರುವ ಸರ್ಜಾ ಇಂಟ್ರುಡಕ್ಷನ್ ಹಾಡನ್ನು ಸೆರೆಹಿಡಿಯಲಾಗುತ್ತಿದೆ. ಧ್ರುವ ಸರ್ಜಾ ಇಂಟ್ರುಡಕ್ಷನ್ ಹಾಡು ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ.

  'ಪೊಗರು' ಬಿಡುಗಡೆ ದಿನಾಂಕದ ಬಗ್ಗೆ ಧ್ರುವ ಸರ್ಜಾ ಮಾತು'ಪೊಗರು' ಬಿಡುಗಡೆ ದಿನಾಂಕದ ಬಗ್ಗೆ ಧ್ರುವ ಸರ್ಜಾ ಮಾತು

  ತಿಂಗಳ ಕೊನೆಯಲ್ಲಿ ಆಡಿಯೋ ರಿಲೀಸ್ ಸಾಧ್ಯತೆ

  ತಿಂಗಳ ಕೊನೆಯಲ್ಲಿ ಆಡಿಯೋ ರಿಲೀಸ್ ಸಾಧ್ಯತೆ

  ಇದೆ ತಿಂಗಳು ಮಾರ್ಚ್ ಕೊನೆಯಲ್ಲಿ ಚಿತ್ರದ ಆಡಿಯೋವನ್ನು ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಪೊಗರು ಸಿನಿಮಾಗೆ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ. ಹರಿಕೃಷ್ಣ ಬ್ಯಾಗ್ರೌಂಡ್ ಸ್ಕೋರ್ ಮಾಡಿದ್ದಾರೆ. ಚಿತ್ರದ ಹಾಡುಗಳ ಮೇಲೆಯೂ ನಿರೀಕ್ಷೆ ಸಾಕಷ್ಟಿದೆ.

  ಧ್ರುವ ಸರ್ಜಾಗೆ ರಶ್ಮಿಕಾ ನಾಯಕಿ

  ಧ್ರುವ ಸರ್ಜಾಗೆ ರಶ್ಮಿಕಾ ನಾಯಕಿ

  ನಟಿ ರಶ್ಮಿಕಾ ಮಂದಣ್ಣ ಧ್ರುವ ಸರ್ಜಾಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಯಜಮಾನ ಸಿನಿಮಾ ನಂತರ ರಶ್ಮಿಕಾ ಕನ್ನಡದಲ್ಲಿ ಅಭಿನಯಿಸುತ್ತಿರುವ ಸಿನಿಮಾವಿದು. ಧ್ರುವ ಮತ್ತು ರಶ್ಮಿಕಾ ಕಾಂಬಿನೇಷನ್ ನ ಮೊದಲು ಸಿನಿಮಾ ಇದಾಗಿದ್ದು ಇಬ್ಬರನ್ನು ತೆರೆಮೇಲೆ ನೋಡಲು ಚಿತ್ರಪ್ರೀಯರು ಕಾತರರಾಗಿದ್ದಾರೆ. ಇನ್ನು ಈಗಾಗಲೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಹೆಚ್ಚಿಸಿದೆ.

  English summary
  Kannada Actor Dhruva Sarja starrer Pogaru film will release on April 24th date.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X