ಜೂ.ಚಿರು ಆಗಮನದ ಬಗ್ಗೆ ನಟ ಧ್ರುವ ಸರ್ಜಾ ಪ್ರತಿಕ್ರಿಯೆ

ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೂ.ಚಿರು ಆಗಮನದಿಂದ ಇಡೀ ಕುಟುಂಬ ಸಂತಸದಲ್ಲಿ ಮುಳುಗಿದೆ. ಚಿರಂಜೀವಿ ಸರ್ಜಾ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗೆ ಮಗು ಆಗಮಿಸಿದ ಖುಷಿಯನ್ನು ಕುಟುಂಬದವರು ಆಸ್ಪತ್ರೆಯಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Recommended Video

Dhruva Sarja First Reaction For Chiru Baby | ಅಣ್ಣನ ಮಗು ನೋಡಿ ಧ್ರುವನಿಗೆ ಮೊದಲು ಅನ್ನಿಸಿದ್ದೇನು ಗೊತ್ತಾ

ಅತ್ತಿಗೆಗೆ ಮಗು ಆಗಿದೆ ಎನ್ನುವ ಸುದ್ದಿ ಗೊತ್ತಾಗುತ್ತಿದಂತೆ ಆಸ್ಪತ್ಪೆಗೆ ಬಂದ ಧ್ರುವ ಅಣ್ಣ ಮಗುವನ್ನು ಕೈಯಲ್ಲಿ ಹಿಡಿದು ಸಂತೋಷ ಪಟ್ಟಿದ್ದಾರೆ. ಬಹುದಿನಗಳ ಬಳಿಕ ಧ್ರುವ ಮುಖದಲ್ಲಿ ನಗು, ಸಂತಸ ನೋಡಿ ಅಭಿಮಾನಿಗಳ ಸಹ ಖುಷಿ ಪಡುತ್ತಿದ್ದಾರೆ. ಮನೆಗೆ ಮಗು ಆಗಮಿಸಿದ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಧ್ರುವ ಅಣ್ಣನ ಜೊತೆ ಇದ್ದ ಹಾಗೆ ಫೀಲ್ ಆಯ್ತು ಎಂದಿದ್ದಾರೆ. ಮುಂದೆ ಓದಿ...

ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ

ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ

ಮನೆಗೆ ಜೂ.ಚಿರು ಆಗಮಿಸಿದ ಬಗ್ಗೆ ನಟ ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಅಣ್ಣನಿಗೆ ಅತ್ತಿಗೆಗೆ ಗಂಡು ಮಗುವಾಗಿದೆ. ಅತ್ತಿಗೆ, ಮಗು ಇಬ್ಬರೂ ಸಹ ಆರಾಮಾಗಿದ್ದಾರೆ. ಎಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕೆಂದು ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಖುಷಿ ಹೆಚ್ಚಾಗಿದ್ದರಿಂದ ಮಗುವನ್ನು ಕೈಯಲ್ಲಿ ಹಿಡಿದ ತಕ್ಷಣದ ಅನುಭವ ಹೇಗಾಯಿತು ಎಂದು ಹೇಳಲು ಸಾಧ್ಯವಾಗಲ್ಲ. ಆ ಫೀಲ್ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.

ನಮ್ಮಣ್ಣನ ಜೊತೆ ಇದ್ದ ಫೀಲ್ ಆಯ್ತು

ನಮ್ಮಣ್ಣನ ಜೊತೆ ಇದ್ದ ಫೀಲ್ ಆಯ್ತು

ಇನ್ನೂ ಬೆಳ್ಳಿ ತೊಟ್ಟಿಲು ಖರೀದಿಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಯಾರಿಗೂ ಗೊತ್ತಾಗಬಾರದು ಎಂದುಕೊಂಡಿದೆ. ಆದರೆ ಮಾಧ್ಯಮಗಳ ಮೂಲಕ ವೈರಲ್ ಆಯಿತು ಎಂದಿದ್ದಾರೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆ ಇದ್ದ ಫೀಲ್ ಆಯ್ತು ಎಂದು ಸಂತಸ ವ್ಯಕ್ತಪಡಿಸಿದರು.

ಚಿರುಗೆ ರೇಗಿಸುತ್ತಿದ್ದ ವಿಚಾರ ಹಂಚಿಕೊಂಡ ಧ್ರುವ

ಚಿರುಗೆ ರೇಗಿಸುತ್ತಿದ್ದ ವಿಚಾರ ಹಂಚಿಕೊಂಡ ಧ್ರುವ

ನಾನು ಅಣ್ಣನಿಗೆ ರೇಗಿಸುತ್ತಿದ್ದೆ, ಮಕ್ಕಳಾಗುತ್ತೆ ಎಲ್ಲಾ ಓಕೆ, ನಿನ್ನನ್ನು ಶಾಲೆಯಲ್ಲಿ ಫೋಷಕರ ಮೀಟಿಂಗ್ ಕರೆಯುತ್ತಾರಲ್ಲ. ಶಾಲೆಯಲ್ಲಿ ನಿನ್ನ ಮೇಲೆ ಹೆಚ್ಚು ದೂರುಗಳಿದ್ದವು. ಇನ್ನು ನಿನ್ನ ಮಕ್ಕಳದು ಬೇಜಾನ್ ಇರುತ್ತೆ ಮಚಾ ಎಂದಿದ್ದೆ. ಅವನು ನನಗೆ ಮಗಾನೇ ಆಗೋದು, ಅವನದ್ದು ಸಹ ಶಾಲೆಯಲ್ಲಿ ಬೇಜಾನ್ ದೂರುಗಳಿರುತ್ತವೆ ಎಂದು ಹೇಳಿದ್ದ ವಿಚಾರ ಈಗ ನೆನಪಾಗುತ್ತಿದೆ ಎಂದು ಧ್ರುವ ಹೇಳಿದ್ದಾರೆ.

ಚಿರು ತಾಯಿ ಅಮ್ಮಾಜಿ ಪ್ರತಿಕ್ರಿಯೆ

ಚಿರು ತಾಯಿ ಅಮ್ಮಾಜಿ ಪ್ರತಿಕ್ರಿಯೆ

ಮೊಮ್ಮೊಗ ಹುಟ್ಟಿದ ಸಂತಸವನ್ನು ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ ಮಾಧ್ಯಮದವರ ಜೊತೆ ಹಂಚಿಕೊಂಡಿದ್ದಾರೆ. ತುಂಬಾ ಸಂತೋಷವಾಗುತ್ತಿದೆ. ಮತ್ತೆ ಚಿರಂಜೀವಿಯನ್ನು ನೋಡ್ತಾ ಇದ್ದೀವಿ ನಾವು. ಇಷ್ಟು ದಿವಸ ನೋವು ತಿನ್ನುತ್ತಾ ಇದ್ವಿ. ಇವತ್ತು ಸಂತೋಷ ಆಗಿದೆ. ಚಿರು ಹುಟ್ಟಿದ್ದು ಇದೇ ತಿಂಗಳು. ಅವರ ಎಂಗೇಜ್ ಮೆಂಟ್ ದಿನ ಇವತ್ತು. ಚಿರುನೇ ವಾಪಸ್ ಬಂದ್ಬಿಟ್ಟ" ಎಂದಿದ್ದಾರೆ.

More from Filmibeat

English summary
Actor Dhruva Sarja Talks about Chiranjeevi Sarja and Meghana Raj Baby Boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X