'ಪೊಗರು' ಸಿನಿಮಾಗಾಗಿ ಧ್ರುವ ಸರ್ಜಾ ಮೂರು ತಿಂಗಳು ಊಟ ಬಿಟ್ಟಿದ್ರಂತೆ

ಸ್ಯಾಂಡಲು ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಮೂರು ವರ್ಷದ ಬಳಿಕ ಧ್ರುವ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದು, ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ನಿಂದ ಗಮನ ಸೆಳೆದಿರುವ ಪೊಗರು ನೋಡಲು ಅಭಿಮಾನಿಗಳು ಉಸಿರು ಬಿಡಿಹಿಡಿದು ಕಾಯುತ್ತಿದ್ದಾರೆ.

Recommended Video

ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada

ಫೆಬ್ರವರಿ 19ರಂದು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಮೂರು ವರ್ಷದಿಂದ ಪೊಗರು ಸಿನಿಮಾಗಾಗಿ ಇಡೀ ತಂಡ ಶ್ರಮಿಸಿದೆ. ಚಿತ್ರಕ್ಕಾಗಿ ಧ್ರುವ ಸರ್ಜಾ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ದೇಹ ಹುರಿಗೊಳಿಸಿ, ಕಟ್ಟುಮಸ್ತಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ 17 ವರ್ಷದ ಯುವಕನ ಪಾತ್ರಕ್ಕಾಗಿ ಧ್ರುವ ತೂಕ ಇಳಿಸಿಕೊಂಡು ಸಿಕ್ಕಾಪಟ್ಟೆ ಸಣ್ಣ ಆಗಿದ್ದರು.

ಮೂರು ತಿಂಗಳು ಊಟ ಬಿಟ್ಟಿದ್ದ ಧ್ರುವ

ಮೂರು ತಿಂಗಳು ಊಟ ಬಿಟ್ಟಿದ್ದ ಧ್ರುವ

ತೂಕ ಇಳಿಸಿ ಮತ್ತೆ ತೂಕ ಹೆಚ್ಚಿಸಿಕೊಂಡು, ದೇಹ ಹುರಿಗೊಳಿ ಪಾತ್ರಕ್ಕಾಗಿ ಧ್ರುವ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಸಣ್ಣ ಆಗಲು ಧ್ರುವ ಮೂರು ತಿಂಗಳು ಊಟ ಬಿಟ್ಟಿದ್ದರಂತೆ. ಕೇವಲ ಲಿಕ್ವಿಡ್ ಪದಾರ್ಥ ಮತ್ತು ತರಕಾರಿಗಳನ್ನು ಮಾತ್ರ ತಿಂದು, ಸಣ್ಣಗಾಗಿ ಪೊಗರು ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಕೆಲವೇ ನಿಮಿಷದ ದೃಶ್ಯಕ್ಕಾಗಿ ಧ್ರುವ ಮೂರು ತಿಂಗಳು ಶ್ರಮಿಸಿದ್ದಾರೆ.

ಅಣ್ಣನ ಬೆಂಬಲವಿತ್ತು

ಅಣ್ಣನ ಬೆಂಬಲವಿತ್ತು

ಈ ಬಗ್ಗೆ ಮಾತನಾಡಿರುವ ಧ್ರುವ, 'ಸಣ್ಣ ಆಗಲು ಕಾರ್ಡಿಯೋ ಮಾಡುತ್ತಿದ್ದೇನೆ ಎಂದು ಅಣ್ಣನ ಬಳಿ ಹೇಳಿದೆ. ಅಣ್ಣ ಸಣ್ಣ ಆಗಬೇಕಾ ಅಥವಾ ಫುಲ್

ಸಣ್ಣ ಆಗಬೇಕಾ ಅಂತ ಕೇಳಿದ. ನಾನು ಫುಲ್ ಸಣ್ಣ ಆಗಬೇಕು ಅಂತ ಹೇಳಿದೆ. ಅಣ್ಣನ ಸಹಾಯ ಇತ್ತು. ಕೇವಲ ಬೀನ್ಸ್, ಕ್ಯಾರೆಟ್, ಲಿಕ್ವಿಡ್ ಪದಾರ್ಥಗಳನ್ನು ಮಾತ್ರ ತಿನ್ನುತ್ತಿದ್ದೆ. ಸಂಪೂರ್ಣವಾಗಿ ಊಟನೇ ಬಿಟ್ಟಿದ್ದೆ' ಎಂದಿದ್ದಾರೆ.

ಬೇರೆ ಭಾಷೆಯವರು ನೋಡಿ ನಮ್ಮವರ ಬಗ್ಗೆ ಹೆಮ್ಮೆ ಪಡಬೇಕು

ಬೇರೆ ಭಾಷೆಯವರು ನೋಡಿ ನಮ್ಮವರ ಬಗ್ಗೆ ಹೆಮ್ಮೆ ಪಡಬೇಕು

ಈಗ ಏನೆ ಹೇಳಿದ್ರು ಜಾಸ್ತಿ ಅಂತ ಅನಿಸಬಹುದು. ಆದರೆ ಸಿನಿಮಾದಲ್ಲಿ ನೋಡಿ ಗೊತ್ತಾಗುತ್ತೆ. ನಮ್ಮಲ್ಲೂ ಇದ್ದಾರಾ ಎನಿಸುತ್ತೆ ಎಂದು ಧ್ರುವ ಹೇಳಿದ್ದಾರೆ. 'ಈ ದೃಶ್ಯವನ್ನು ಸಿಜಿಯಲ್ಲೂ ಮಾಡಿಸಬಹುದಿತ್ತು, ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಆದರೆ ಬೇರೆ ಭಾಷೆಯಲ್ಲೂ ಸಿನಿಮಾ ಬರ್ತಿದೆ, ಅಲ್ಲಿ ಸಿನಿಮಾ ನೋಡಿದವರೂ ಹೀಗೂ ಮಾಡಿದ್ರಾ ನಮ್ಮವರೂ ಅಂತ ಅವರು ಅಂದುಕೊಳ್ಳಬೇಕು' ಹಾಗಾಗಿ ಕಷ್ಟಪಟ್ಟು ಮಾಡಿದ್ದೀವಿ ಎನ್ನುತ್ತಾರೆ ಧ್ರುವ ಸರ್ಜಾ.

ಆಕ್ಷನ್ ದೃಶ್ಯದಲ್ಲಿ ನಿಜವಾಗಿ ಹೊಡೆತ ತಿಂದಿರುವ ಧ್ರುವ

ಆಕ್ಷನ್ ದೃಶ್ಯದಲ್ಲಿ ನಿಜವಾಗಿ ಹೊಡೆತ ತಿಂದಿರುವ ಧ್ರುವ

ಪೊಗರು ಚಿತ್ರದಲ್ಲಿ ಅಂತರಾಷ್ಟ್ರೀಯ ಬಾಡಿಬಿಲ್ಡರ್ಸ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ನಲ್ಲಿ ನಟಿಸಿದ್ದಾರೆ. ಸುಮಾರು 8 ದಿನಗಳ ನಡೆದ ಕ್ಲಮಾಕ್ಸ್ ಶೂಟ್ ನಡೆದಿದ್ದು, ಫೈಟ್ ನಲ್ಲಿ ಧ್ರುವ ನಿಜವಾಗಿ ಹೊಡೆತ ತಿಂದಿದ್ದಾರಂತೆ. ಆಕ್ಷನ್ ದೃಶ್ಯ ನೈಜವಾಗಿ ಮೂಡಿಬಂದಿದೆ ಎಂದು ಧ್ರುವ ಹೇಳಿದ್ದಾರೆ.

More from Filmibeat

English summary
Kannada Actor Dhruva Sarja talks about his body transformation for Pogaru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X