For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾಗೆ ಕಷ್ಟದ ಕೆಲಸ ಕೊಟ್ಟ ಪ್ರೇಮ್; ಕನ್ನಡ ನಟರಲ್ಲಿ ಈ ಕೆಲಸ ಇದೇ ಮೊದಲು

  |

  ಏಕ್ ಲವ್ ಯಾ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಜೋಗಿ ಪ್ರೇಮ್ ಇದೀಗ ತಮ್ಮ ಮುಂದಿನ ಸಿನಿಮಾವನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಮಾಡಲು ಮುಂದಾಗಿರುವುದು ಗೊತ್ತೇ ಇದೆ. ಇನ್ನು ವಿಭಿನ್ನವಾದ ಟೈಟಲ್‌ಗಳಿಂದ ಯಾವಾಗಲೂ ಚಿತ್ರದ ಬಗ್ಗೆ ಜನ ಮಾತನಾಡಿಕೊಳ್ಳುವ ಹಾಗೆ ಮಾಡುವ ಕ್ರಿಯಾಶೀಲತೆ ಇರುವ ಪ್ರೇಮ್ ಧ್ರುವ ಸರ್ಜಾ ಚಿತ್ರದ ಶೀರ್ಷಿಕೆ ಏನು ಎಂಬುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

  ಕೇವಲ ಚಿತ್ರವನ್ನು ಘೋಷಿಸಿ ಏಪ್ರಿಲ್ ತಿಂಗಳಿನಲ್ಲಿ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸಿದ್ದ ಜೋಗಿ ಪ್ರೇಮ್ ಇದೀಗ ಚಿತ್ತದ ಟೈಟಲ್ ರಿವೀಲ್ ಮಾಡಲು ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಹೌದು, ನಿನ್ನೆಯಷ್ಟೇ ( ಸೆಪ್ಟೆಂಬರ್ 23 ) ತನ್ನ ಮತ್ತು ಧ್ರುವ ಸರ್ಜಾ ಕಾಂಬಿನೇಶನ್ ಚಿತ್ರದ ಟೈಟಲ್ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಟೀಸರ್‌ಗಾಗಿ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿರುವ ಚಿತ್ರಗಳನ್ನು ಪ್ರೇಮ್ ಹಂಚಿಕೊಂಡಿದ್ದರು.

  ಆದರೆ ಟೈಟಲ್ ಟೀಸರ್ ಯಾವಾಗ ಬಿಡುಗಡೆಯಾಗಲಿದೆ ಎಂದು ನಿಖರ ದಿನಾಂಕವನ್ನು ಬಿಟ್ಟುಕೊಡದ ಪ್ರೇಮ್ ಇಂದು ಮತ್ತೊಂದು ಪೋಸ್ಟ್ ಹಾಕಿದ್ದು, ಧ್ರುವ ಸರ್ಜಾ ಚಿತ್ರ ಬಿಡುಗಡೆಯಾಗಲಿರುವ ಎಲ್ಲಾ ಭಾಷೆಗಳಿಗೂ ಡಬ್ ಮಾಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಹೌದು, ಚಿತ್ರದ ಟೈಟಲ್ ಟೀಷರ್‌ಗಾಗಿ ಡಬ್ಬಿಂಗ್ ನಡೆಸುತ್ತಿದ್ದ ವೇಳೆಯಲ್ಲಿ ಧ್ರುವ ಸರ್ಜಾ ಜತೆಗಿನ ಸೆಲ್ಫಿಯನ್ನು ಪ್ರೇಮ್ ಹಂಚಿಕೊಂಡಿದ್ದು ಈ ರೀತಿ ಬರೆದುಕೊಂಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ನಟನೋರ್ವ ತನ್ನ ಚಿತ್ರ ಬಿಡುಗಡೆಯಾಗಲಿರುವ ಎಲ್ಲಾ ಭಾಷೆಗಳಿಗೂ ಡಬ್ ಮಾಡಲಿದ್ದಾರೆ.

  ಇನ್ನು ಈ ಚಿತ್ರದ ಟೈಟಲ್ ಟೀಸರ್ ಕೆಲಸ ಭರದಿಂದ ಸಾಗುತ್ತಿರುವುದನ್ನು ಗಮನಿಸಿದರೆ ಟೀಸರ್ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಬಹುದು. ಈಗಾಗಲೇ ಪ್ರೇಮ್ ನಿರ್ದೇಶನದ ಚಿತ್ರಗಳಾದ ದಿ ವಿಲನ್ ಹಾಗೂ ಏಕ್ ಲವ್ ಯಾಗೆ ಒಳ್ಳೆಯ ಮ್ಯೂಸಿಕ್ ನೀಡಿದ್ದ ಅರ್ಜುನ್ ಜನ್ಯಾ ಈ ಚಿತ್ರಕ್ಕೂ ಸಹ ಜನ ಮೆಚ್ಚುವ ಸಂಗೀತ ನೀಡುವ ನಿರೀಕ್ಷೆ ಹೆಚ್ಚಿದೆ.

  English summary
  Dhruva Sarja to dub his voice for all languages in his upcoming movie directing by Jogi Prem. Read on
  Saturday, September 24, 2022, 15:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X