ಕೋಲಾರದಲ್ಲಿ ಧ್ರುವ ಸರ್ಜಾ ನೋಡಲು ಮುಗಿಬಿದ್ದ ಜನ: ಪೊಲೀಸರಿಂದ ಲಾಠಿ ಚಾರ್ಜ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ.

Recommended Video

ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು | Dhruva Sarja | Filmibeat Kannada

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕೊಂಡಯ್ಯ ಹಾರ್ಡ್‌ ವೇರ್ ಮಳಿಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಆಗಮಿಸಿದರು. ನೆಚ್ಚಿನ ನಟ ಬಂದ ವಿಷಯ ತಿಳಿದ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಜನರನ್ನು ನಿಯಂತ್ರಿಸಲು ಸ್ಥಳಿಯ ಪೊಲೀಸರು ಹರಸಾಹಸ ಪಟ್ಟಿದ್ದು, ಕೆಲವು ಸಂದರ್ಭದಲ್ಲಿ ಲಾಠಿ ರುಚಿ ಸಹ ತೋರಿಸಬೇಕಾಯಿತು.

 Dhruva Sarja Visit To Kolar For Hardware Shop Inauguration

ಧ್ರುವ ಸರ್ಜಾ ಭೇಟಿ ಹಿನ್ನೆಲೆ ಕೋಲಾರ - ಹೊಸೂರು- ಬೆಂಗಳೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಕಿಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ಹಾರ್ಡ್‌ ವೇರ್ ಮಳಿಗೆ ಉದ್ಘಾಟನೆ ಬಳಿಕ ಮಾತನಾಡಿದ ಧ್ರುವ ಸರ್ಜಾ ''ಕೊರೊನಾ ಸಂಧರ್ಭದಲ್ಲಿ ನಿಮ್ಮನ್ನು ಭೇಟಿ ಮಾಡಿಲ್ಲ, ಇಷ್ಟು ಜನರನ್ನು ನೋಡಿದಕ್ಕೆ ಖುಷಿ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಧ್ರುವ ಸರ್ಜಾ ಅವರನ್ನು ನೋಡಿದ ಖುಷಿಯಲ್ಲಿ ಜನರು ಕೊರೊನಾ ನಿಯಮವನ್ನು ಗಾಳಿಗೆ ತೂರಿದರು. ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ಅನೇಕರ ಮಾಸ್ಕ್ ಧರಿಸಿಲ್ಲ, ಮತ್ತೊಂದೆಡೆ ನಟ ಧ್ರುವ ಸರ್ಜಾ ಫೇಸ್ ಶೀಲ್ಡ್ (ಮುಖ ಗವಸು) ಹಾಕಿಕೊಂಡು ಬಂದರಾದರೂ ನಂತರ ಅವರು ಸಹ ಮಾಸ್ಕ್ ಧರಿಸಿಲ್ಲ.

ಸದ್ಯ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada actor Dhruva Sarja has visit to Kolar for konadayya Hardware Shop Inauguration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X