ಅಣ್ಣನ ಚಿತ್ರ ನೋಡುವಾಗ ಧ್ರುವ ಸರ್ಜಾಗೆ ಕಷ್ಟವೆನಿಸಿದ್ದೇನು.?
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಇದೀಗ, ಅಣ್ಣನ ಸಿನಿಮಾ ನೋಡಿರುವ ನಟ ಧ್ರುವ ಸರ್ಜಾ ಸಹೋದರನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಏನಿಷ್ಟ ಆಯ್ತು, ತೆರೆಮೇಲೆ ಚಿರು ಸರ್ಜಾ ಅವರನ್ನ ನೋಡಿದ ಅನುಭವ ಹೇಗಿತ್ತು ಎಂಬುದನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
'ಅಮ್ಮ ಐ ಲವ್ ಯೂ' ಚಿತ್ರ ತುಂಬಾ ಅದ್ಭುತವಾಗಿದೆ ಎನ್ನುವ ಧ್ರುವ, ಅಣ್ಣನನ್ನ ಭಿಕ್ಷುಕನ ಪಾತ್ರದಲ್ಲಿ ನೋಡುವುದು ಕಷ್ಟವಾಯಿತು. ಇದನ್ನ ಹೊರತುಪಡಿಸಿದ್ರೆ, ಸಿನಿಮಾ ಸೂಪರ್ ಎಲ್ಲರೂ ನೋಡಿ' ಎಂದಿದ್ದಾರೆ.

''ನಮ್ಮ ಅಣ್ಣ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಆದ್ರೆ, ಭಿಕ್ಷುಕನ ಪಾತ್ರದಲ್ಲಿ ನೋಡೋದಕ್ಕೆ ಸ್ಬಲ್ಪ ಕಷ್ಟ ಆಗುತ್ತೆ. ಸೂಟು ಬೂಟು ಹಾಕ್ಕೊಂಡು ಬರ್ತಾರೆ ಅಲ್ವಾ ಅದು ನನ್ನ ಫೆವರೇಟ್ ದೃಶ್ಯ. ಎಲ್ಲ ಫ್ಯಾಮಿಲಿಯೂ ಕೂತು ನೋಡುವಂತಹ ಸಿನಿಮಾ ಅಮ್ಮ ಐ ಲವ್ ಯೂ. ಎಲ್ಲರೂ ನೋಡಿ, ಮಿಸ್ ಮಾಡ್ಬೇಡಿ'' - ಧ್ರುವ ಸರ್ಜಾ, ನಟ
ಇನ್ನುಳಿದಂತೆ ಚಿರು ಸರ್ಜಾ, ನಿಶ್ವಿಕಾ ನಾಯ್ಡು, ಸಿತಾರ ಅಭಿನಯದ 'ಅಮ್ಮ ಐ ಲವ್ ಯೂ' ಸಿನಿಮಾವನ್ನ ಕೆ.ಎಂ ಚೈತನ್ಯ ನಿರ್ದೇಶನ ಮಾಡಿದ್ದು, ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.


Click it and Unblock the Notifications











