ಅತ್ತಿಗೆ ಸಿನಿಮಾ ನೋಡಿ ಖುಷ್ ಆದ ಧ್ರುವ ಸರ್ಜಾ

Recommended Video

ಅತ್ತಿಗೆ ಸಿನಿಮಾ ನೋಡಿ ಧ್ರುವ ಹೇಳಿದ್ದೇನು..? | Filmibeat Kannada

ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ 'ಇರುವುದೆಲ್ಲವ ಬಿಟ್ಟು' ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಹಾಡುಗಳು, ಟ್ರೈಲರ್, ಪ್ರಮೋಷನ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರವನ್ನ ಧ್ರುವ ಸರ್ಜಾ ನೋಡಿ ಮೆಚ್ಚಿಕೊಂಡಿದ್ದಾರೆ.

ಮೇಘನಾ ರಾಜ್ ಮದುವೆ ಬಳಿಕ ಬಿಡುಗಡೆಯಾಗಿರುವ ಚೊಚ್ಚಲ ಚಿತ್ರ ಇದಾಗಿದ್ದು, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಅವರು ತಾಯಿ ಸೇರಿದಂತೆ ಇಡೀ ಕುಟುಂಬವೇ ಮೊದಲ ಶೋ ಸಿನಿಮಾ ವೀಕ್ಷಿಸಿದ್ದಾರೆ.

ಸಿನಿಮಾ ನೋಡಿದ ನಂತರ ಮಾತನಾಡಿದ ಧ್ರುವ ಸರ್ಜಾ ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ''ಒಳ್ಳೆಯ ಸಿನಿಮಾ, ಇಡೀ ಕುಟುಂಬ ಕೂತು ನೋಡುವಂತಹ ಚಿತ್ರ. ಚಿತ್ರಕಥೆ ತುಂಬಾ ಅಚ್ಚುಕಟ್ಟಾಗಿದೆ. ನಿರ್ದೇಶಕರು ಒಳ್ಳೆ ಸಿನಿಮಾ ಕೊಟ್ಟಿದ್ದಾರೆ. ಇಡೀ ಚಿತ್ರಕ್ಕೆ ಶುಭವಾಗಲಿ'' ಎಂದು ಹಾರೈಸಿದರು.

dhruva sarja watched iruvudellava bittu

ಇನ್ನು 'ಇರುವುದೆಲ್ಲವ ಬಿಟ್ಟು' ಚಿತ್ರದ ವಿಮರ್ಶೆ ಫಿಲ್ಮಿಬೀಟ್ ಕನ್ನಡದಲ್ಲಿ ಪ್ರಕಟವಾಗಿದೆ. '''ಇರುವುದೆಲ್ಲವ ಬಿಟ್ಟು' ಸಿನಿಮಾ ಖಂಡಿತ ನಿರಾಸೆ ಮಾಡುವುದಿಲ್ಲ. ಸ್ವಾಭಿಮಾನ ಎಲ್ಲರಿಗೂ ಇರಬೇಕು. ಆದರೆ 'ಸಂಬಂಧಗಳಿಗಿಂತ ಸ್ವಾಭಿಮಾನ ದೊಡ್ಡದಲ್ಲ' ಎಂಬ ಸತ್ಯವನ್ನು ಈ ಸಿನಿಮಾ ಹೇಳುತ್ತದೆ. ಇದು ಭಾವನೆಗಳ ಮೇಲೆ ನಿಂತಿರುವ ಸಿನಿಮಾ'' ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ....

ಇನ್ನುಳಿದಂತೆ ಕಾಂತಕನ್ನಲ್ಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹದೇವ್ ನಟಿಸಿದ್ದಾರೆ. ದೇವರಾಜ್ ದಾವಣಗೆರೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಒದಗಿಸಿದ್ದಾರೆ.

More from Filmibeat

English summary
Kannada actor dhruva sarja and chiranjeevi sarja watched iruvudellava bittu movie together with meghana raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X