For Quick Alerts
  ALLOW NOTIFICATIONS  
  For Daily Alerts

  'ರಾಮಾರ್ಜುನ' ಚಿತ್ರಕ್ಕೆ ಆನೆಬಲ: ಸಿನಿಮಾ ನೋಡಿ ಮೆಚ್ಚಿದ ಧ್ರುವ ಸರ್ಜಾ

  |

  ಅನಿಶ್ ತೇಜೇಶ್ವರ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ರಾಮಾರ್ಜುನ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿರುವ ರಾಮಾರ್ಜುನ ಎರಡನೇ ವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

  ನನ್ನ ಸಿನಿಮಾ ಉಳಿಸಿಕೊಡಿ ಎಂದು ಬೇಡಿಕೊಂಡ ಅನಿಶ್ | Anish Tejeshwar | Ramarjuna | Filmibeat Kannada

  ಇದೀಗ, ರಾಮಾರ್ಜುನ ಚಿತ್ರಕ್ಕೆ ಆನೆಬಲ ಬಂದಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಾಮಾರ್ಜುನ ಸಿನಿಮಾ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಿಶ್ ನಿರ್ದೇಶನ ಹಾಗೂ ನಟನೆ ಬಗ್ಗೆ ವೈಯಕ್ತಿಕವಾಗಿ ಹಾಡಿಹೊಗಳಿದ್ದಾರೆ.

  ನಮ್ಮ ಒಳ್ಳೆಯ ಕನ್ನಡ ಸಿನಿಮಾ ಉಳಿಸಿಕೊಡಿ: ಕೈಮುಗಿದ ನಟ, ನಿರ್ದೇಶಕನಮ್ಮ ಒಳ್ಳೆಯ ಕನ್ನಡ ಸಿನಿಮಾ ಉಳಿಸಿಕೊಡಿ: ಕೈಮುಗಿದ ನಟ, ನಿರ್ದೇಶಕ

  ಈ ಕುರಿತು ಟ್ವೀಟ್ ಮಾಡಿ ಧ್ರುವ ಸರ್ಜಾ ''ರಾಮಾರ್ಜುನ ಎಂಬ ಅತ್ಯದ್ಭುತ ಸಿನಿಮಾ ನೋಡಿದೆ, ಕಥೆ ಬಹಳ ಚೆನ್ನಾಗಿದೆ. ದಯವಿಟ್ಟು ಸಿನಿಮಾ ನೋಡಿ ಪ್ರೋತ್ಸಾಹಿಸಿ, ನಿಮಗೆ ನಿಜವಾಗಲೂ ಇಷ್ಟ ಆಗುತ್ತೆ ಎಂಬ ಭರವಸೆ ನನಗಿದೆ. ವಿಶೇಷವಾಗಿ ಅನಿಶ್ ಸರ್ ಅವರ ನಟನೆ ಹಾಗೂ ಅವರ ಒಳ್ಳೆಯ ನಿರ್ದೇಶನಕ್ಕೆ ಮೆಚ್ಚುಗೆ ಹೇಳಲೇಬೇಕು. ಇಡೀ ರಾಮಾರ್ಜುನ ಚಿತ್ರತಂಡಕ್ಕೆ ಶುಭಾಶಯ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಧ್ರುವ ಸರ್ಜಾ ಅವರ ಈ ಟ್ವೀಟ್‌ಗೆ ಅನಿಶ್ ತೇಜೇಶ್ವರ್ ಪ್ರತಿಕ್ರಿಯಿಸಿದ್ದು ''ನಮ್ಮ ರಾಮಾರ್ಜುನ ಸಿನಿಮಾ ನೋಡಿ ನೀವು ಆಡಿದ ಮಾತುಗಳಿಗೆ ನಾನು ಹಾಗೂ ನಮ್ಮ ಚಿತ್ರತಂಡ ಎಂದಿಗೂ ಚಿರಋಣಿ.. ನಿಮ್ಮ ಈ ಮಾತುಗಳಿಂದ ನಮ್ಮ ಚಿತ್ರಕ್ಕೆ ಆನೆ ಭಲ ಬಂದಂತಾಗಿದೆ. ಧನ್ಯವಾದಗಳು'' ಎಂದಿದ್ದಾರೆ.

  Ramarjuna Review: ಜನರಿಗಾಗಿ ಧರೆಗಿಳಿದು ಬಂದ 'ರಾಮಾರ್ಜುನ'Ramarjuna Review: ಜನರಿಗಾಗಿ ಧರೆಗಿಳಿದು ಬಂದ 'ರಾಮಾರ್ಜುನ'

  ಇನ್ನು ಎರಡನೇ ವಾರ ರಾಮಾರ್ಜುನ ಸಿನಿಮಾಗೆ ಪ್ರೇಕ್ಷಕರ ಕೊರತೆ ಎದುರಾಗಿದ್ದು, ನಟ-ನಿರ್ದೇಶಕ ಅನಿಶ್ ತೇಜೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ. 'ಕಾಡಿ ಬೇಡಿ ನಮ್ಮ ಸಿನಿಮಾವನ್ನು ಎರಡನೇ ವಾರಕ್ಕೆ ಕೆಲವು ಚಿತ್ರಮಂದಿರಗಳಲ್ಲಿ ಉಳಿಸಿಕೊಂಡಿದ್ದೇನೆ. ದಯವಿಟ್ಟು ಒಂದೊಳ್ಳೆ ಸಿನಿಮಾವನ್ನು ಉಳಿಸಿಕೊಡಿ. ಮೊದಲ ವಾರ ಸಿನಿಮಾ ನೋಡಿದವರನ್ನು ಕೇಳಿಯೇ ಸಿನಿಮಾಕ್ಕೆ ಬನ್ನಿ ಪರವಾಗಿಲ್ಲ. ಆದರೆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಂದು ನೋಡಿ' ಎಂದು ಅನೀಶ್ ಮನವಿ ಮಾಡಿದ್ದಾರೆ.

  Dhruva Sarja Watched Ramarjuna Movie and Praised Anish Tejeshwar

  ಅನಿಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಹರೀಶ್ ರಾಜ್, ಶರತ್ ಲೋಹಿತಾಶ್ವ, ಮಿತ್ರ, ಉಗ್ರಂ ಮಂಜು, ಗಿರಿಶ್ ಶಿವಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ. ಅನಂದ್ ರಾಜವಿಕ್ರಮ್ ಅವರ ಸಂಗೀತವಿದೆ.

  English summary
  Action Prince Dhruva Sarja watched Ramarjuna movie and Praised Anish Tejeshwar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X