ನಾಲ್ಕೂವರೆ ತಿಂಗಳ ಬಳಿಕ ಮಗಳೊಂದಿಗೆ ಕಾಣಿಸಿಕೊಂಡ ಧ್ರುವ ಸರ್ಜಾ ಪತ್ನಿ: ಪ್ರಿನ್ಸ್ ಫ್ಯಾನ್ಸ್ ದಿಲ್ ಖುಷ್!

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪೊಗರು' ಬಳಿಕ ಆಕ್ಷನ್ ಪ್ರಿನ್ಸ್‌ಗೆ ಬೇಡಿಕೆ ಹೆಚ್ಚಾಗಿದ್ದು, ಫ್ಯಾನ್ ಇಂಡಿಯಾ ಸ್ಟಾರ್‌ ಆಗಿ ಅಖಾಡಕ್ಕೆ ಇಳಿಯುವುದಕ್ಕೆ ರೆಡಿಯಾಗಿದ್ದಾರೆ.

ಧ್ರುವ ಸರ್ಜಾ ವೃತ್ತಿ ಜೀವನ ಅದ್ಭುತವಾಗಿ ನಡೆಯುತ್ತಿದೆ. ಹಾಗೇ ವೈಯಕ್ತಿಕ ಬದುಕಿನಲ್ಲೂ ಒಂದಿಷ್ಟು ನೋವುಗಳನ್ನು ಕಂಡ ಬಳಿಕ ಸಂತಸ ಮನೆ ಮಾಡಿದೆ. ಧ್ರುವ ಹಾಗೂ ಪ್ರೇರಣಾ ದಂಪತಿಗೆ ನಾಲ್ಕೂವರೆ ತಿಂಗಳ ಹಿಂದೆ ಹೆಣ್ಣು ಮಗುವಿನ ಜನನ ಆಗಿತ್ತು. ಅಂದಿನಿಂದ ಇಬ್ಬರಲ್ಲೂ ಸಂತಸವೇ ಮನೆ ಮಾಡಿದೆ.

ಧ್ರುವ ಸರ್ಜಾ ಹಾಗೂ ಪ್ರೇರಣಾ, ಮನೆಗೆ ಮಹಾಲಕ್ಷ್ಮಿ ಬಂದ ಸಂತಸದಲ್ಲಿದ್ದರು. ಆದರೆ, ಎಂದಿಗೂ ಮಗಳೊಂದಿಗೆ ಕಾಣಿಸಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಧ್ರುವ ಪತ್ನಿ ಪ್ರೇರಣಾ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಮಗಳೊಂದಿಗೆ ಕಾಣಿಸಿಕೊಂಡ ಪ್ರೇರಣಾ ಸರ್ಜಾ

ಮಗಳೊಂದಿಗೆ ಕಾಣಿಸಿಕೊಂಡ ಪ್ರೇರಣಾ ಸರ್ಜಾ

ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ನಿನ್ನೆ(ಫೆಬ್ರವರಿ 12) ಇನ್‌ಸ್ಟಾಗ್ರಾಂನಲ್ಲಿ ಮಗುವಿನೊಂದಿಗಿರುವ ಫೋಟೊ ಶೇರ್ ಮಾಡಿಕೊಂಡಿದ್ದರು. ಅದೇ ಫೋಟೊ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದು ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಆದರೆ, ಈ ಬಾರಿಗೂ ಮಗುವಿನ ಮುಖವನ್ನು ತೋರಿಸಿಲ್ಲ.

ಮಗಳು ಬೇಕೆಂದು ಇಷ್ಟ ಪಟ್ಟಿದ್ದ ಧ್ರುವ

ಧ್ರುವ ಸರ್ಜಾಗೆ ಮನೆಗೆ ಮಗಳು ಬರಬೇಕು ಅನ್ನೋ ಆಸೆಯಿತ್ತು. ಆ ಆಸೆಯಂತೆಯೇ ಧ್ರುವ ಸರ್ಜಾಗೆ ಹೆಣ್ಣು ಮಗು ಜನಿಸಿತ್ತು. ಆ ವೇಳೆ ಆಕ್ಷನ್ ಪ್ರಿನ್ಸ್ ಈ ರೀತಿ ಹರ್ಷ ವ್ಯಕ್ತಪಡಿಸಿದ್ದರು. "ನಿಮ್ಮೆಲ್ಲರ ಆಶೀರ್ವಾದದಿಂದ ಇವತ್ತು ನನಗೆ ಒಂದು ಮುದ್ದಾದ, ಬ್ಯೂಟಿಫುಲ್.. ನಾನು ಅಂದುಕೊಂಡ ಹಾಗೇ ಹೆಣ್ಣು ಮಗು ಆಗಿದೆ. ತುಂಬಾನೇ ಖುಷಿಯಾಗುತ್ತಿದೆ. ನಮ್ಮ ಇಡೀ ಫ್ಯಾಮಿಲಿ ಖುಷಿಯಾಗಿದೆ. ಈ ಸಂದರ್ಭದಲ್ಲಿ ನಾನು ನಮ್ಮ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಮ್ಮ ಅಜ್ಜಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ." ಎಂದು ಧ್ರುವ ಸರ್ಜಾ ಹೇಳಿದ್ದರು.

ಹೆಣ್ಣಿನ ಮೇಲೆ ಮರ್ಯಾದೆ ಹೆಚ್ಚಾಯ್ತು

ಹೆಣ್ಣಿನ ಮೇಲೆ ಮರ್ಯಾದೆ ಹೆಚ್ಚಾಯ್ತು

ಇದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಮೇಲೆ ಇರುವ ಮರ್ಯಾದೆ ಮತ್ತಷ್ಟು ಹೆಚ್ಚಾಯ್ತು ಎಂದು ಧ್ರುವ ಸರ್ಜಾ ಅಭಿಮಾನಿ ವ್ಯಕ್ತಪಡಿಸಿದ್ದರು. "ಸಾಮಾನ್ಯವಾಗಿ ಹುಡುಗಿಯರು ಅಂದ್ರೇನೆ ಒಂದು ಮರ್ಯಾದೆ ಇತ್ತು. ಇವತ್ತು ಪ್ರೊಸಿಜರ್ಸ್ ಎಲ್ಲಾ ನೋಡಿ ಆದ್ಮೇಲೆ ಆ ಮರ್ಯಾದೆ ಇನ್ನಷ್ಟು ಜಾಸ್ತಿ ಆಯ್ತು. ಹೆಣ್ಣು ಮಕ್ಕಳ ಮೇಲೆ ಗೌರವ ಜಾಸ್ತಿ ಆಯ್ತು. ಎಲ್ಲರ ಲೈಫ್‌ನಲ್ಲೂ ಅಪ್ಸ್‌ ಅಂಡ್ ಡೌನ್ಸ್ ಇದ್ದೇ ಇರುತ್ತೆ. ನಮ್ಮಲ್ಲೂ ಇತ್ತು. ಕೆಲವೊಮ್ಮೆ ಮಿಸ್‌ ಕ್ಯಾರಿಯೇಜ್ ಆಗಿರುತ್ತೆ. ಹೆಣ್ಣು ಮಕ್ಕಳು ಕಾನ್ಫಿಡೆನ್ಸ್ ಕಳೆದುಕೊಳ್ಳಬೇಡಿ. ಗಂಡು ಮಕ್ಕಳು ಕಾನ್ಫಿಡೆನ್ಸ್ ಕಳೆದುಕೊಳ್ಳಬೇಡಿ. ಇದಕ್ಕೆ ನಾವೇ ಉತ್ತಮ ಉದಾಹರಣೆ." ಎಂದು ಧ್ರುವ ಸರ್ಜಾ ಹೇಳಿದ್ದರು.

ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ

ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಯಲ್ಲಿ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಿವೆ. ಎ ಪಿ ಅರ್ಜುನ್ ನಿರ್ದೇಶಿಸಿದ 'ಮಾರ್ಟಿನ್' ಸಿನಿಮಾ ಈಗಾಗಲೇ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲಿಯೇ ಸಿನಿಮಾ ಟೀಸರ್ ರಿಲೀಸ್ ಆಗಲಿದೆ. ಇದರ ಜೊತೆಗೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಸಿನಿಮಾ ಪ್ರಿಪ್ರೊಡಕ್ಷನ್ ಕೆಲಸ ಕೂಡ ಆರಂಭ ಆಗಿದೆ. ಇನ್ನೇನು ಶೂಟಿಂಗ್ ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ.

More from Filmibeat

English summary
Dhruva Sarja's wife, Prerana, shared a photo of her daughter four and a half months after she was born, know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X