»   » ಧ್ರುವನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾದ ಅಭಿಮಾನಿ

ಧ್ರುವನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾದ ಅಭಿಮಾನಿ

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾ ಅನೌನ್ಸ್ ಆಗಿದೆ. ಸ್ಯಾಂಡಲ್ ವುಡ್ ಗೆ 'ಅಯೋಗ್ಯ'ನನ್ನ ಕರೆತಂದಿರುವ ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ನಲ್ಲಿ ಧ್ರುವ ಅಭಿನಯಿಸಲು ಓಕೆ ಎಂದಿದ್ದಾರೆ. ಭರ್ಜರಿ ಶತದಿನೋತ್ಸವದ ಖುಷಿಯಲ್ಲಿ ಈ ವಿಚಾರವನ್ನ ಖುದ್ದು ಆಕ್ಷನ್ ಪ್ರಿನ್ಸ್ ಹೇಳಿಕೊಂಡಿದ್ದಾರೆ.

ಅಯೋಗ್ಯ ಸಿನಿಮಾದಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ಮಹೇಶ್ ಕುಮಾರ್ ಮುಂದಿನ ವರ್ಷ ಧ್ರುವ ಸರ್ಜಾ ಅಭಿನಯಿಸಲಿರುವ ಚಿತ್ರದ ಕೆಲಸವನ್ನ ಶುರು ಮಾಡಲಿದ್ದಾರೆ. ಚಿತ್ರಕ್ಕೆ 'ಮದಗಜ' ಎಂದು ಟೈಟಲ್ ಇಡಬೇಕೆಂದು ನಿರ್ಧಾರ ಮಾಡಿದ್ದಾರೆ.

ಭರ್ಜರಿ ಯಶಸ್ಸಿನಲ್ಲಿ ಹೊಸ ಚಿತ್ರಗಳನ್ನ ಅನೌನ್ಸ್ ಮಾಡಿದ ಆಕ್ಷನ್ ಪ್ರಿನ್ಸ್:

Dhruva Sarja will be acting in Mahesh's directorial film

ಮಹೇಶ್ ನಿರ್ದೇಶನದ ಚಿತ್ರವನ್ನ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅಥವಾ ಉದಯ್ ಕೆ ಮೆಹ್ತಾ ಇಬ್ಬರಲ್ಲಿ ಯಾರಾದರೂ ಒಬ್ಬರು ನಿರ್ಮಾಣ ಮಾಡುವ ಸಾಧ್ಯತೆಗಳಿದೆ.

ಧ್ರುವ ಅಭಿಮಾನಿ ಆಗಿರುವ ಮಹೇಶ್ ಮೂರು ವರ್ಷದ ಹಿಂದೆಯೇ ಧ್ರುವ ಸರ್ಜಾ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಚಿತ್ರದಲ್ಲಿ ಯಾರಿಗೂ ಡೋಂಟ್ ಕೇರ್ ಮಾಡದ ಪಾತ್ರದಲ್ಲಿ ಆಕ್ಷನ್ ಪ್ರಿನ್ಸ್ ಅಭಿನಯಿಸಲಿದ್ದಾರೆ.

ಹ್ಯಾಟ್ರಿಕ್ ಹಿಟ್‌ ಮೂಲಕ ಶತದಿನೋತ್ಸವ ಪೂರೈಸಿದ 'ಭರ್ಜರಿ'ಯ ಧ್ರುವ ಸರ್ಜಾ

Dhruva Sarja will be acting in Mahesh's directorial film

ಸದ್ಯ ಒನ್ ಲೈನ್ ಸ್ಟೋರಿ ಮಾಡಿಕೊಂಡಿರುವ 'ಮದಗಜ' ಚಿತ್ರಕ್ಕೆ ಕೀರ್ತಿ ಸುರೇಶ್ ರನ್ನ ನಾಯಕಿಯಾಗಿ ಕರೆಸುವ ಪ್ಲಾನ್ ಇದೆಯಂತೆ. ಒಟ್ಟಾರೆ ಪೊಗರು ಚಿತ್ರದ ನಂತದ ಧ್ರುವ ಸರ್ಜಾ ಮಹೇಶ್ ಡೈರೆಕ್ಷನ್ ನಲ್ಲಿ ಅಭಿನಯಿಸುವುದು ಗ್ಯಾರೆಂಟಿ ಆಗಿದೆ.

English summary
Kannada actor Action Prince Dhruva Sarja will be acting in Mahesh's directorial film, which is named as 'Madagaja'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X