For Quick Alerts
  ALLOW NOTIFICATIONS  
  For Daily Alerts

  ಮದುವೆ ಸಂಭ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

  |
  ಸರ್ಜಾ ಮನೆಯಲ್ಲಿ ಕಳೆಗಟ್ಟಿದ ಮದುವೆ ಶಾಸ್ತ್ರಗಳು | FILMIBEAT KANNADA

  ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಸಂಭ್ರಮದಲ್ಲಿದ್ದಾರೆ. ಸರ್ಜಾ ಮನೆಯಲ್ಲಿ ಮದುವೆ ಸಂತಸ ಕಳೆಗಟ್ಟಿದ್ದು, ಈಗಾಗಲೆ ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದೆ. ಧ್ರುವ ಸರ್ಜಾ ಸಂತಸದಿಂದ ಶಾಸ್ತ್ರಗಳಲ್ಲಿ ಭಾಗಿಯಾಗಿ ಮದುವೆ ಶಾಸ್ತ್ರಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

  ಧ್ರುವ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ನವೆಂಬರ್ 24ಕ್ಕೆ ಹಸೆಮಣೆ ಏರುತ್ತಿದ್ದಾರೆ. ಧ್ರುವ ಮದುವೆಗೆ ಇನ್ನೊಂದೆ ದಿನ ಭಾಕಿ ಇದೆ. ಇಬ್ಬರು ಮನೆಯಲ್ಲೂ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ಶಾಸ್ತ್ರಗಳಲ್ಲಿ ಧ್ರುವ ಮತ್ತು ಪ್ರೇರಣಾ ಇಬ್ಬರು ಕೊಂಗೊಳಿಸುತ್ತಿದ್ದಾರೆ.

  ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಏನು ಗೊತ್ತಾ?ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಏನು ಗೊತ್ತಾ?

  ಇಬ್ಬರ ಮದುವೆ ಶಾಸ್ತ್ರಗಳು ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಈ ಸಂಭ್ರಮದಲ್ಲಿ ಇಡೀ ಧ್ರುವ ಸರ್ಜಾ ಕುಟುಂಬ, ಸ್ನೇಹಿತರು ಕೂಡ ಭಾಗಿಯಾಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿದ್ದಾರೆ. ಧ್ರುವ ಸರ್ಜಾ ಅತ್ತಿಗೆ ನಟಿ ಮೇಘನಾ ರಾಜ್ ಮೈದುನನ ಮದುವೆ ಸಂಭ್ರಮದಲ್ಲಿ ಕಂಗೊಳಿಸುತ್ತಿದ್ದಾರೆ.

  ನಾಳೆ ಧ್ರುವ ಸರ್ಜಾ ಮತ್ತು ಪ್ರೇರಣ ಮದುವೆ ನಡೆಯಲಿದೆ. ಇಬ್ಬರ ಮದುವೆಗೆ ಬೆಂಗಳೂರಿನ 'ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್' ಸಜ್ಜಾಗಿದೆ. ಬೆಳಗ್ಗೆ 7.15 ರಿಂದ 7.45ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಮತ್ತು ಪ್ರೇರಣಾ ಶಂಕರ್ ಪತಿ-ಪತ್ನಿಯರಾಗಲಿದ್ದಾರೆ.

  ಬೆಳಗ್ಗೆ ಮದುವೆ ನಡೆದರೆ ಅದೆ ದಿನ ಸಂಜೆ 7.30ಕ್ಕೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ. ಅದ್ದೂರಿ ಆರತಕ್ಷತೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಭಾಗಿಯಾಗಿ ಧ್ರುವ ಮತ್ತು ಪ್ರೇರಣಾ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ. ಇನ್ನು ವಿಶೇಷ ಅಂದರೆ 25ರಂದು ಅಭಿಮಾನಿಗಳಿಗಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

  English summary
  Kannada actor Dhruva Sarja will getting marriage to Prerana Shankar on November 23.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X