ಅಣ್ಣ - ಅತ್ತಿಗೆ ಜೋಡಿ ನೋಡಿ ನಟ ಧ್ರುವ ಸರ್ಜಾ ಹೀಗೆ ಹೇಳುತ್ತಾರೆ!
'ಭರ್ಜರಿ' ಸಿನಿಮಾದ ಯಶಸ್ಸಿನ ನಂತರ ಇದೀಗ ಧ್ರುವ ಸರ್ಜಾ ಸಖತ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಅಣ್ಣನ ನಿಶ್ಚಿತಾರ್ಥ. ಹೌದು, ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ನಿಶ್ಚಿತಾರ್ಥ ಇಂದು ನಡೆದಿದ್ದು ಅದು ಧ್ರುವ ಮುಖದಲ್ಲಿ ನಗು ಮೂಡಿಸಿದೆ.
ನಿಶ್ಚಿತಾರ್ಥದ ಸಂಭ್ರಮದಲ್ಲಿ ಭಾಗಿಯಾಗಿದ್ದ ಧ್ರುವ ''ತುಂಬ ಸಂತೋಷ ಆಗುತ್ತಿದೆ. ಇವತ್ತು ನಮ್ಮ ಅಣ್ಣ ಹಾಗೂ ಮೇಘನಾ ಅವರ ಇಬ್ಬರ ಎಂಗೇಜ್ ಮೆಂಟ್ ಆಯ್ತು. ಅವರಿಗೆ ಎಲ್ಲರ ಆಶೀರ್ವಾದ ಇರಲಿ. ಇಬ್ಬರ ಪ್ರೇಮದ ವಿಷಯ ನನಗೆ ಮುಂಚೆಯೇ ಗೊತ್ತಿತ್ತು. ಆ ನಂತರ ಅಪ್ಪ ಅಮ್ಮನಿಗೆ ಗೊತ್ತಾಯಿತು. ಆಮೇಲೆ ಅಂಕಲ್ ಗೆ (ಅರ್ಜುನ್ ಸರ್ಜಾ) ಸಹ ತಿಳಿಯಿತು. ಗುಡ್... ಇದು ಅವರ ಎಲ್ಲರ ವೈಯಕ್ತಿಕ ಆಯ್ಕೆ'' ಎಂದು ಹೇಳಿ ತಮ್ಮ ಅಣ್ಣ ಮತ್ತು ಅತ್ತಿಗೆಗೆ ಶುಭ ಕೋರಿದ್ದಾರೆ.

ಅಂದಹಾಗೆ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ನಿಶ್ಚಿತಾರ್ಥ ಇಂದು ಮಧ್ಯಾಹ್ನ 12 ಗಂಟೆಗೆ ಜೆ.ಪಿ.ನಗರದ ಮೇಘನಾ ನಿವಾಸದಲ್ಲಿ ನಡೆಯಿತು. ನಟ ಅರ್ಜುನ್ ಸರ್ಜಾ ಅವರ ಪತ್ನಿ ಆಶಾ ರಾಣಿ ಹಾಗೂ ಪುತ್ರಿ ಐಶ್ವರ್ಯ ಅರ್ಜುನ್, ಜೊತೆಗೆ ಚಿರಂಜೀವಿ ಸರ್ಜಾ ಸಹೋದರ ಧ್ರುವ ಸರ್ಜಾ ಹಾಗೂ ಸುಂದರ್ ರಾಜ್ ದಂಪತಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ತೊಡಗಿದ್ದರು.


Click it and Unblock the Notifications











