'ಮಾರ್ಟಿನ್': ದೈತ್ಯಾಕಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧ್ರುವ ಸರ್ಜಾ

ಧ್ರುವ ಸರ್ಜಾ ವರ್ಷಕ್ಕೆ ಮಾಡುವುದು ಬಹುತೇಕ ಒಂದೇ ಸಿನಿಮಾ. ಆದರೆ ಆ ಸಿನಿಮಾಕ್ಕೆ ತಮ್ಮ ಪರಿಪೂರ್ಣ ಶ್ರಮವನ್ನು ಹಾಕುತ್ತಾರೆ.

Recommended Video

ಅಬ್ಬಬ್ಬಾ ಇದೇನು ತೋಳ, ಮರದ ದಿಮ್ಮಿನಾ..? ಧ್ರುವನ ಪರ್ವತದಂತ ಲುಕ್

ಈಗಾಗಲೇ ಹುರಿಗಟ್ಟಿದ ದೈತ್ಯ ದೇಹ ಹೊಂದಿರುವ ಧ್ರುವ ಸರ್ಜಾ ಇದೀಗ ಆ ದೇಹಕ್ಕೆ ಇನ್ನಷ್ಟು ಸಾಣೆ ಹಿಡಿಯಲು ಜಿಮ್ಮು ಹೊಕ್ಕಿದ್ದಾರೆ.

ಧ್ರುವ ಸರ್ಜಾ ಇದೀಗ ಮಾರ್ಟಿನ್ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಕ್ಕಾಗಿ ತಮ್ಮ ದೇಹ ದಾರ್ಢ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಧ್ರುವ ಸರ್ಜಾ ಮುಂದಾಗಿದ್ದಾರೆ. ಚಂದನವನದ ಮೋಸ್ಟ್ ಫಿಟ್ ನಾಯಕ ನಟ ಧ್ರುವ ಸರ್ಜಾ, ಅಂಥಹುದರಲ್ಲಿ ಅವರು ಇನ್ನಷ್ಟು ದೇಹ ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ ಎಂದರೆ 'ಮಾರ್ಟಿನ್' ಸಿನಿಮಾದಲ್ಲಿ ಪರ್ವತದಂತೆ ಧ್ರುವ ಕಾಣಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಈಗಾಗಲೇ ಖಾತ್ರಿಯಾಗಿದೆ.

Dhruva Sarja Working Out For Martin Kannada Movie

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಧ್ರುವ ಸರ್ಜಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಭಾರಿ ಗಾತ್ರದ ಡಂಬಲ್ಸ್ ಅನ್ನು ಧ್ರುವ ಸರ್ಜಾ ಸರಾಗವಾಗಿ ಎತ್ತುತ್ತಿದ್ದಾರೆ. ಈಗಾಗಲೇ ಅವರ ತಗೋಳಿನ ಗಾತ್ರ ಹರಿ ಹರೆಯದ ಹುಡುಗಿಯ ಸೊಂಟದ ಗಾತ್ರವನ್ನು ದಾಟಿದೆ, ಎದೆಯಂತೂ ಉಬ್ಬಿ ಬಿಟ್ಟಿದೆ. 'ಮಾರ್ಟಿನ್' ನಲ್ಲಿ ಧ್ರುವ ಸರ್ಜಾ ದೈತ್ಯಾಕಾರದಲ್ಲಿ ಕಾಣುವುದಂತೂ ಪಕ್ಕಾ ಎಂಬುದನ್ನು ಈ ವಿಡಿಯೋ ಸಾರಿ ಹೇಳುತ್ತಿದೆ.

ಅಪ್ಪು ನಿಧನದ ಬಳಿಕ ಜಿಮ್‌ ವರ್ಕೌಟ್‌ ಬಗ್ಗೆ ಹಲವು ಅಪನಂಬಿಕೆಗಳು, ಅನುಮಾನಗಳು ಯುವಕರಲ್ಲಿ ಉಂಟಾಗಿವೆ. ಜಿಮ್‌ನಲ್ಲಿ ಬೆವರಿಳಿಸುವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದೆಂಬ ಅನುಮಾನಗಳು ಎದ್ದಿವೆ. ಹೃದಯಾಘಾತದ ಭಯವೂ ಇದೆ. ಈ ಎಲ್ಲ ಅನುಮಾನಗಳ ನಡುವೆ ಜಿಮ್‌ಗೆ ಕಾಲಿಟ್ಟು, ವರ್ಕೌಟ್‌ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಧ್ರುವ ಸರ್ಜಾ ವರ್ಕೌಟ್ ಮಾಡಲು ಪರೋಕ್ಷವಾಗಿ ಪ್ರೇರಣೆಯನ್ನೂ ನೀಡಿದ್ದಾರೆ.

'ಮಾರ್ಟಿನ್' ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಉದಯ್ ಕೆ ಮೆಹ್ತಾ. ಧ್ರುವ ಸರ್ಜಾರ 'ಪೊಗರು' ಸಿನಿಮಾಕ್ಕೂ ಇವರೇ ಬಂಡವಾಳ ಹೂಡಿದ್ದರು. ಸಿನಿಮಾದಲ್ಲಿ ನಾಯಕಿಯಾಗಿ ವೈಭವಿ ಶಾಂಡಿಲ್ಯ ನಟಿಸಲಿದ್ದಾರೆ. ಇದು ಇವರ ಮೂರನೇ ಕನ್ನಡ ಸಿನಿಮಾ, ಶರಣ್-ಚಿಕ್ಕಣ್ಣ ನಟಿಸಿದ್ದ 'ರಾಜ್-ವಿಷ್ಣು' ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಗಾಳಿಪಟ 2' ನಲ್ಲಿ ನಟಿಸಿದ್ದಾರೆ. ಇದೀಗ 'ಮಾರ್ಟಿನ್‌'ನಲ್ಲಿ ನಟಿಸಲಿದ್ದಾರೆ. ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾದ ಬಳಿಕ 'ದುಬಾರಿ' ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ.

More from Filmibeat

English summary
Dhruva Sarja started working out for Martin Kannada movie. Martin is Dhruva Sarja's upcoming movie. Vaibhavi Shandilya is heroine of the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X