For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ 24ಕ್ಕೆ ಧ್ರುವ ಸರ್ಜಾ 6ನೇ ಸಿನಿಮಾ ಘೋಷಣೆ: ಡೈರೆಕ್ಟರ್ ಅವರೇನಾ?

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಐದನೇ ಸಿನಿಮಾ ಆರಂಭವಾಗಿದೆ. ಎಪಿ ಅರ್ಜುನ್ ನಿರ್ದೇಶನದಲ್ಲಿ 'ಪೊಗರು' ಹುಡುಗ ನಟಿಸುತ್ತಿದ್ದು, ಚಿತ್ರಕ್ಕೆ ಮಾರ್ಟಿನ್ ಎಂದು ಹೆಸರಿಡಲಾಗಿದೆ. ಮಾರ್ಟಿನ್ ಚಿತ್ರದ ಟೈಟಲ್ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದು, ಚಿತ್ರೀಕರಣ ಸಹ ಶುರುವಾಗಿದೆ. ಈ ನಡುವೆ ಮತ್ತೊಂದು ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ ಅದ್ಧೂರಿ ಹೀರೋ. 6ನೇ ಚಿತ್ರ ಓಕೆ ಮಾಡಿದ್ದು, ಈಗ ಅಧಿಕೃತವಾಗಿ ಪ್ರಕಟಿಸುತ್ತಿದ್ದಾರೆ.

  ಧ್ರುವ ಸರ್ಜಾ 6ನೇ ಸಿನಿಮಾದ ಹೆಸರು ಮತ್ತು ನಿರ್ದೇಶಕ ಯಾರು ಎಂದು ಆಗಸ್ಟ್ 24 ರಂದು ಪ್ರಕಟಿಸಲಾಗುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮಾರ್ಟಿನ್ ಚಿತ್ರಕ್ಕೆ ಚಾಲನೆ ಕೊಟ್ಟು ವಾರ ಕಳೆದಿಲ್ಲ. ಅಷ್ಟರಲ್ಲೇ ಹೊಸ ಪ್ರಾಜೆಕ್ಟ್‌ ಅನೌನ್ಸ್ ಮಾಡ್ತಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ. ಇನ್ನು ಧ್ರುವ ಮುಂದಿನ ಚಿತ್ರಕ್ಕೆ ನಿರ್ದೇಶಕ ಯಾರು ಎಂಬ ವಿಚಾರ ಮತ್ತಷ್ಟು ರೋಚಕತೆ ಸೃಷ್ಟಿಸಿದೆ.

  ಪ್ರೇಮ್ ಮುಂದಿನ ಚಿತ್ರ: ಈ ಮೂವರಲ್ಲಿ ಒಬ್ಬರು ಹೀರೋ ಅಂತೆ! ಪ್ರೇಮ್ ಮುಂದಿನ ಚಿತ್ರ: ಈ ಮೂವರಲ್ಲಿ ಒಬ್ಬರು ಹೀರೋ ಅಂತೆ!

  ಕಳೆದ ಒಂದು ತಿಂಗಳಿಂದ ಧ್ರುವ ಸರ್ಜಾ ಜೊತೆ 'ಜೋಗಿ' ಪ್ರೇಮ್ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಈಗ ಧ್ರುವ ಸರ್ಜಾ ಕಡೆಯಿಂದ ಇದಕ್ಕೆ ಪುಷ್ಠಿ ನೀಡುವಂತೆ ಬೆಳವಣಿಗೆ ನಡೆದಿರುವುದನ್ನು ಗಮನಿಸಿದರೆ ಪ್ರೇಮ್ ಸಿನಿಮಾನೇ ಇರಬಹುದು ಎಂಬ ಲೆಕ್ಕಾಚಾರ ಹುಟ್ಟಿಕೊಂಡಿದೆ. ಇದರ ಜೊತೆ ದರ್ಶನ್ ಸಿನಿಮಾ ಮಾಡಿದ್ದ ನಿರ್ದೇಶಕನ ಹೆಸರು ಮುಂಚೂಣಿಯಲ್ಲಿದೆ. ಹಾಗಾದ್ರೆ, ಧ್ರುವ ಸರ್ಜಾ 6ನೇ ಸಿನಿಮಾ ಯಾವುದು? ಯಾರು ನಿರ್ದೇಶಕ?

  ಆಗಸ್ಟ್ 24ಕ್ಕೆ ಧ್ರುವ ಸರ್ಜಾ 6ನೇ ಚಿತ್ರ

  ಆಗಸ್ಟ್ 24ಕ್ಕೆ ಧ್ರುವ ಸರ್ಜಾ 6ನೇ ಚಿತ್ರ

  ಧ್ರುವ ಸರ್ಜಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲಕ್ಕಿಂತ ಈ ಚಿತ್ರಕ್ಕೆ ನಿರ್ದೇಶಕ ಯಾರು ಎನ್ನುವುದೇ ದೊಡ್ಡ ಚರ್ಚೆಯಾಗಿದೆ. ಈ ಹಿಂದೆ ಸುದ್ದಿಯಾದಂತೆ ಪ್ರೇಮ್ ಅವರೇ ಡೈರೆಕ್ಷನ್ ಮಾಡ್ತಾರಾ ಎಂಬ ಮಾತು ಗಟ್ಟಿಯಾಗಿ ಕೇಳಿ ಬರುತ್ತಿದೆ. ಏಕಂದ್ರೆ, ಪ್ರೇಮ್ ಅವರ ಮೂಲಗಳಿಂದ ಹೊರಬಿದ್ದಿದ್ದ ಮಾಹಿತಿ ಪ್ರಕಾರ, 'ದಿ ವಿಲನ್' ನಿರ್ದೇಶಕ ಸಹ ಆಗಸ್ಟ್ 24ರಂದೇ ಹೊಸ ಸಿನಿಮಾ ಪ್ರಕಟಿಸುವ ಸಿದ್ಧತೆ ನಡೆಸಿದ್ದರು. ಈಗ ಧ್ರುವ ಸರ್ಜಾ ಕಡೆಯಿಂದಲೂ ಅದೇ ದಿನಾಂಕ ಬಹಿರಂಗವಾಗಿದೆ. ಹಾಗಾಗಿ, ಇದು ಧ್ರುವ ಸರ್ಜಾ ಮತ್ತು ಪ್ರೇಮ್ ಸಿನಿಮಾ ಎಂದು ಹೇಳಲಾಗುತ್ತಿದೆ.

  ಸ್ಕ್ರಿಪ್ಟ್ ಪೂಜೆ ಮುಗಿಸಿದ ಪ್ರೇಮ್

  ಸ್ಕ್ರಿಪ್ಟ್ ಪೂಜೆ ಮುಗಿಸಿದ ಪ್ರೇಮ್

  ಆಗಸ್ಟ್ 9 ರಂದು ತಮ್ಮ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮುಗಿಸಿದ್ದರು. ಇದು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರಲಿರುವ 9ನೇ ಚಿತ್ರವಾಗಿದ್ದು, ಹೆಚ್ಚಿನ ವಿವರವನ್ನು ಆಗಸ್ಟ್ ತಿಂಗಳ ಅಂತ್ಯದಲ್ಲಿ ನೀಡಲಾಗುವುದು ಎಂದು ಸ್ವತಃ ಪ್ರೇಮ್ ಮಾಹಿತಿ ನೀಡಿದ್ದರು. ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಇದಾಗಿದ್ದು, ಹೀರೋ ಯಾರಾಗ್ತಾರೆ ಎಂಬ ಚರ್ಚೆಯೂ ದೊಡ್ದದಾಗಿಯೇ ನಡೆದಿತ್ತು.

  'ಮಾರ್ಟಿನ್' ಲಾಂಚ್ ವೇಳೆ ಖುಷಿ ಸುದ್ದಿ ಕೊಟ್ಟ ನಂದಕಿಶೋರ್-ಧ್ರುವ ಸರ್ಜಾ'ಮಾರ್ಟಿನ್' ಲಾಂಚ್ ವೇಳೆ ಖುಷಿ ಸುದ್ದಿ ಕೊಟ್ಟ ನಂದಕಿಶೋರ್-ಧ್ರುವ ಸರ್ಜಾ

  'ಜಗ್ಗುದಾದ' ನಿರ್ದೇಶಕ ಜೊತೆ ಸಿನಿಮಾ?

  'ಜಗ್ಗುದಾದ' ನಿರ್ದೇಶಕ ಜೊತೆ ಸಿನಿಮಾ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ 'ಜಗ್ಗುದಾದ' ಸಿನಿಮಾ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಜೊತೆ ಧ್ರುವ ಸರ್ಜಾ ಹೊಸ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಹಲವು ವರ್ಷದಿಂದಲೂ ಚರ್ಚೆಯಲ್ಲಿದೆ. ಈಗ ಧ್ರುವ ಸರ್ಜಾ ಅವರ 6ನೇ ಚಿತ್ರ ಇದೇ ಇರಬಹುದು ಎಂಬ ನಂಬಿಕೆ ಹುಟ್ಟಿಕೊಂಡಿದೆ.

  ಸುದೀಪ್ ಜೊತೆ ಪ್ರೇಮ್ ಸಿನಿಮಾ?

  ಸುದೀಪ್ ಜೊತೆ ಪ್ರೇಮ್ ಸಿನಿಮಾ?

  ಪ್ರೇಮ್ ಘೋಷಣೆ ಮಾಡಲಿರುವ ಹೊಸ ಚಿತ್ರಕ್ಕೆ ಧ್ರುವ ಸರ್ಜಾ ನಾಯಕ ಎನ್ನುವ ಮಾತುಗಳು ಸದ್ದು ಮಾಡ್ತಿದೆ. ಧ್ರುವ ಹೊರತುಪಡಿಸಿದ್ರೆ, ಕಿಚ್ಚ ಸುದೀಪ್ ಅವರ ಜೊತೆಗೆ ಪ್ರೇಮ್ ಸಿನಿಮಾ ಮಾಡಲಿದ್ದಾರೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗ್ನೋಡಿದ್ರೆ, ಸುದೀಪ್ ಅಭಿಮಾನಿಗಳ ಪೋಸ್ಟ್‌ಗಳಿಗೆ ಪ್ರೇಮ್ ರಿ-ಟ್ವೀಟ್ ಮಾಡಿ ಸುಳಿವು ಕೊಟ್ಟಂತಿದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಆಗಸ್ಟ್ 24 ರಂದು, ಅಂದ್ರೆ ಮಂಗಳವಾರ ಸಿಗಲಿದೆ.

  English summary
  Action Prince Dhruva Sarja 's DS06 movie announcement on August 24.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X