»   » ವೈರಲ್ ಆಯ್ತು ಧ್ರುವ ಸರ್ಜಾರ 'ಪೊಗರು' ಚಿತ್ರದ ಮಾಸ್ ಡೈಲಾಗ್

ವೈರಲ್ ಆಯ್ತು ಧ್ರುವ ಸರ್ಜಾರ 'ಪೊಗರು' ಚಿತ್ರದ ಮಾಸ್ ಡೈಲಾಗ್

Posted By:
Subscribe to Filmibeat Kannada

''ಚಿರತೆ ಬಂದ್ರೆ ವೇಗ ಇರುತ್ತೆ, ಹುಲಿ ಬಂದ್ರೆ ಗಾಂಭೀರ್ಯ, ಸಿಂಹ ಬಂದ್ರೆ ಘರ್ಜನೆ ಇರುತ್ತೆ. ಈ ಸೂರ್ಯ ಬಂದ್ರೆ ಈ ಮೂರು ಇರುತ್ತೆ''....ಹೀಗೆ ಡೈಲಾಗ್ ಗಳ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಹೊಸ ಮಾಸ್ ಇಮೇಜ್ ಹೊಂದಿರುವ ಧ್ರುವ ಸರ್ಜಾ, ತಮ್ಮ ಮುಂದಿನ ಚಿತ್ರದಲ್ಲೂ ತಮ್ಮ ಅಭಿಮಾನಿಗಳಿಗೆ ಫುಲ್ ಮಿಲ್ಸ್ ಕೊಡ್ತಿದ್ದಾರೆ.

ಹೌದು, ಧ್ರುವ ಅಭಿನಯಿಸುತ್ತಿರುವ 'ಪೊಗರು' ಚಿತ್ರದ ಎರಡು ಡೈಲಾಗ್ ಈಗ ರಿವಿಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತಿಚೆಗಷ್ಟೇ ಭರ್ಜರಿ ಸಿನಿಮಾ ಶತದಿನ ಆಚರಿಸಿಕೊಂಡಿತ್ತು. ಈ ಸಂಭ್ರಮವನ್ನ ಆಚರಿಸಲು ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರಕ್ಕೆ ಧ್ರುವ ಮತ್ತು ಚಿತ್ರತಂಡ ಆಗಮಿಸಿತ್ತು. ಈ ವೇಳೆ ಅಭಿಮಾನಿಗಳ ಬೇಡಿಕೆಯ ಮೆರೆಗೆ ಪೊಗರು ಚಿತ್ರದ ಡೈಲಾಗ್ ಹೊಡೆದಿದ್ದಾರೆ.

ನಾಲ್ಕು ನಿಮಿಷಕ್ಕಾಗಿ ಧ್ರುವ ಸರ್ಜಾ ತೆಗೆದುಕೊಂಡು ರಿಸ್ಕ್ ತುಂಬಾ ದೊಡ್ಡದು

dhruva sarjas pogaru movie dialogues

ಡೈಲಾಗ್ 1: ''ತೋಳ್ ತುಂಬ ತಾಕತ್ತಿದ್ರು ತಕರಾರ್ ಮಾಡಲ್ಲ. ಎದೆ ತುಂಬ ನಿಯತ್ತಿದ್ರೂ ಗುಲಾಮ ಆಗಿರಲ್ಲ. ಗೂಳಿ ಸೈಲಾಂಟ್ ಆಗಿದೆ ಅಂತ ಗಾಂಚಲಿ ಮಾಡಿದ್ರೆ, ಗುದ್ದೋ ಏಟಿಗೆ ಗೂಗಲ್ ನಲ್ಲಿ ಹುಡುಕಿದ್ರು ಟ್ರೀಟ್ ಮೆಂಟ್ ಸಿಗಲ್ಲ''

ಡೈಲಾಗ್ 2: ''ನನ್ನೆದೆ ಗಟ್ಟಿಯಾಗೈತೆ ಅಂತ ಟಚ್ ಮಾಡೋಕೆ ಹೋಗ್ಬೇಡ. ನನ್ ಮೈಯಾಗೆಷ್ಟು ಪೊಗರೈತೆ ಅಂತ ಚೆಕ್ ಮಾಡೋಕೆ ಹೋಗ್ಬೇಡ. ಶೇಕ್ ಆಗೋತಿಯಾ''

ಭರ್ಜರಿ ಯಶಸ್ಸಿನಲ್ಲಿ ಹೊಸ ಚಿತ್ರಗಳನ್ನ ಅನೌನ್ಸ್ ಮಾಡಿದ ಆಕ್ಷನ್ ಪ್ರಿನ್ಸ್

ಅಂದ್ಹಾಗೆ, 'ಪೊಗರು' ಚಿತ್ರಕ್ಕೆ ನಿರ್ದೇಶಕ ನಂದಕಿಶೋರ್ ಆಕ್ಷನ್ ಕಟ್ ಹೇಳ್ತಿದ್ದು, ಸಿನಿಮಾ ಸೆಟ್ಟೇರಿದೆ. ಇದರ ಬೆನ್ನಲ್ಲೆ ಹೊಸ ಚಿತ್ರಗಳನ್ನ ಕೂಡ ಘೋಷಣೆ ಮಾಡಿರುವ ಧ್ರುವ ಸದ್ಯ, ಕನ್ನಡದ ಯಶಸ್ವಿ ನಟ. ಇದು ಬರಿ ಟ್ರೈಲರ್ ಅಷ್ಟೇ, ಫುಲ್ ಹಂಗಾಮ ಸಿನಿಮಾದಲ್ಲಿ ನೋಡಬಹುದು.

ಧ್ರುವ ಹೊಡೆದ ಡೈಲಾಗ್ ಕೇಳಲು ಮುಂದಿರುವ ವಿಡಿಯೋ ನೋಡಿ

English summary
Action Prince, kannada actor Dhuva Sarja has revealed his upcomeing movie pogaru dialogues in front of fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X