ಕ್ರಿಸ್ಮಸ್ ಗೂ ಇಲ್ಲ ಧ್ರುವ ಸರ್ಜಾ 'ಪೊಗರು'; ಯಾವಾಗ ರಿಲೀಸ್ ಆ್ಯಕ್ಷನ್ ಪ್ರಿನ್ಸ್ ಸಿನಿಮಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿಕ್ಷೆಯ ಪೊಗರು ಸಿನಿಮಾ ರಿಲೀಸ್ ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೊಗರು ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಎಂಟ್ರಿ ಕೊಡುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದರು ಚಿತ್ರಪ್ರಿಯರು. ಆದರೀಗ ಅಭಿಮಾನಿಗಳಿಗೀಗ ನಿರಾಸೆಯ ಸುದ್ದಿ ಕೇಳಿಬರುತ್ತಿದೆ.

ಇತ್ತೀಚಿಗಷ್ಟೆ ಸಿನಿಮಾತಂಡದ ಕಡೆಯಿಂದ ರಿಲೀಸ್ ಬಗ್ಗೆ ಅಪ್ ಡೇಟ್ ಹೊರಬಿದ್ದಿತ್ತು. ಪೊಗರು ಸಿನಿಮಾ ಡಿಸೆಂಬರ್ 25 ಕ್ರಿಸ್ಮಸ್ ಸಮಯದಲ್ಲಿ ಅಥವಾ ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಬಹುತೇಕರು ಕ್ರಿಸ್ಮಸ್ ಗೆ ರಿಲೀಸ್ ಆಗುತ್ತೆ ಎಂದು ಉಸಿರು ಬಿಡಿಹಿಡಿದು ಕಾಯುತ್ತಿದ್ದರು. ಆದರೀಗ ಕ್ರಿಸ್ಮಸ್ ಗೆ ಪೊಗರು ರಿಲೀಸ್ ಆಗುತ್ತಿಲ್ಲ ಎನ್ನುವುದು ಅಧಿಕೃತವಾಗಿದೆ. ಮುಂದೆ ಓದಿ..

ಜನವರಿಯಲ್ಲಿ ಪೊಗರು ರಿಲೀಸ್

ಜನವರಿಯಲ್ಲಿ ಪೊಗರು ರಿಲೀಸ್

ಜನವರಿಯಲ್ಲಿ ಪೊಗರು ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಚಿತ್ರಮಂದಿರಗಳು ಓಪನ್ ಆದರೂ ಸಹ ಕೋವಿಡ್ ನಿಯಮದ ಪ್ರಕಾರ ಕೇವಲ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಸಿನಿಮಾ ನೋಡುವ ಅವಕಾಶವಿದೆ. ಹಾಗಾಗಿ ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲ.

ತೆಲುಗು, ತಮಿಳು ಹಿಂದಿಯಲ್ಲೂ ಬರ್ತಿದೆ ಪೊಗರು

ತೆಲುಗು, ತಮಿಳು ಹಿಂದಿಯಲ್ಲೂ ಬರ್ತಿದೆ ಪೊಗರು

ವಿಶೇಷ ಎಂದರೆ ಪೊಗರು ಸಿನಿಮಾವನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಏಕಕಾಲಕ್ಕೆ ರಿಲೀಸ್ ಮಾಡುವ ತಯಾರಿ ನಡೆಸುತ್ತಿದೆ ಚಿತ್ರತಂಡ. ಬೇರೆ ಬೇರೆ ಭಾಷೆಯ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಪೊಗರು ಸಿನಿಮಾದ ಹಿಂದಿ ಡಬ್ಬಿಂಗ್ 7.2 ಕೋಟಿಗೆ ಮಾರಾಟವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಸದ್ಯದಲ್ಲೇ ರಿಲೀಸ್ ಡೇಟ್ ಬಹಿರಂಗ

ಸದ್ಯದಲ್ಲೇ ರಿಲೀಸ್ ಡೇಟ್ ಬಹಿರಂಗ

ಸದ್ಯದಲ್ಲೇ ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸಲು ಸಿನಿಮಾತಂಡ ನಿರ್ಧರಿಸಿದೆ. ಜನವರಿ ಯಾವ ದಿನಕ್ಕೆ ಪೊಗರು ಎಂಟ್ರಿ ಕೊಡುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಧ್ರುವ ಸರ್ಜಾ ಭರ್ಜರಿ ಸಿನಿಮಾ ಬಳಿಕ ಅಭಿಮಾನಿಗಳ ಮುಂದೆ ಬಂದಿಲ್ಲ. ವರ್ಷದ ಬಳಿಕ ಧ್ರುವ ಪೊಗರು ಮೂಲಕ ಚಿತ್ರಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

Recommended Video

Arjun Sarjaಗೆ ಇನ್ನೂ ಮರೆಯಾಗಿಲ್ಲ ಆ ನೋವು | Filmibeat Kannada
ರಶ್ಮಿಕಾ ಮಂದಣ್ಣ ನಾಯಕಿ

ರಶ್ಮಿಕಾ ಮಂದಣ್ಣ ನಾಯಕಿ

ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ಮತ್ತು ಧ್ರುವ ಒಟ್ಟಿಗೆ ನಟಿಸಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಸಿನಿಮಾದಿಂದ ಡೈಲಾಗ್ ಟೀಸರ್ ಮತ್ತು ಒಂದು ಹಾಡು ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

More from Filmibeat

English summary
Dhruva Sarja And Rashmika Mandanna starrer Pogaru Movie To Release in January 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X