For Quick Alerts
  ALLOW NOTIFICATIONS  
  For Daily Alerts

  'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಫಸ್ಟ್ ಲುಕ್ ಬಿಡುಗಡೆ ಮಾಡಿದ ಡಿ ಬಾಸ್

  |

  ಮೈಸೂರು ಪ್ರತಿಭೆ ಧ್ರುವನ್ ನಟಿಸುತ್ತಿರುವ ಚೊಚ್ಚಲ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಹಾಗೂ ಯುವ ನಟ ಧ್ರುವನ್ ಅವರಿಗೆ ಶುಭಕೋರಿದ್ದಾರೆ.

  ''ನಮ್ಮ ಕನ್ನಡ ಚಿತ್ರರಂಗದ ಯುವಪ್ರತಿಭೆ ಧೃವನ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಹೊಸ ತಂಡದ 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ನಿಮಗಾಗಿ'' ಎಂದು ಟ್ವಿಟ್ಟರ್‌ನಲ್ಲಿ ಶುಭಹಾರೈಸಿರುವ ದರ್ಶನ್ ಪೋಸ್ಟರ್ ಹಂಚಿಕೊಂಡಿದ್ದಾರೆ.

  ಡ್ರೀಮ್ ಕಾರಿನಲ್ಲಿ ದರ್ಶನ್ ಜೊತೆ ರೌಂಡ್ಸ್ ಹಾಕಿದ ರಿಷಬ್ ಶೆಟ್ಟಿ ಹೇಳಿದ್ದೇನು?

  ಧ್ರುವನ್ ಈ ಮೊದಲು ಸೂರಜ್ ಕುಮಾರ್ ಎಂದು ಹೆಸರಿಟ್ಟಿಕೊಂಡಿದ್ದರು. ರಘು ಕೋವಿ ನಿರ್ದೇಶನದಲ್ಲಿ ಚೊಚ್ಚಲ ಸಿನಿಮಾ ಸೆಟ್ಟೇರಿತ್ತು. ನಟ ದರ್ಶನ್ ಮತ್ತು ಶಿವರಾಜ್ ಕುಮಾರ್ ಸಿನಿಮಾಗೆ ಚಾಲನೆ ನೀಡಿದ್ದರು. ಆಮೇಲೆ ಕಾರಣಾಂತರಗಳಿಂದ ಈ ಚಿತ್ರ ಮುಂದುವರಿಯಲಿಲ್ಲ.

  ನಂತರ, ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರವನ್ನು ಕೈಗೆತ್ತಿಕೊಂಡು ಶೂಟಿಂಗ್ ಆರಂಭಿಸಿದ್ದಾರೆ. ಭರತ್ ವಿಷ್ಣುಕಾಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಪ್ರಸಾದ್ ಬಿಎನ್ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

  ಇದು ನನ್ನ ಬಹು ದಿನದ ಕನಸು ಎಂದ ಪಂಕಜ್ ತ್ರಿಪಾಠಿ | Pankaj Tripathi | Filmibeat Kannada

  ಅಂದ್ಹಾಗೆ, ಧ್ರುವನ್ ಅವರು ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರನ ಮಗ. ಶಿವರಾಜ್ ಕುಮಾರ್ ಸಂಬಂಧದಲ್ಲಿ ಮಾವ. ಮೈಸೂರು ಹುಡುಗ ಎಂಬ ಕಾರಣಕ್ಕೆ ಡಿ ಬಾಸ್ ಸಹ ಧ್ರುವನ್ ವೃತ್ತಿ ಜೀವನಕ್ಕೆ ಜೊತೆಯಾಗಿ ನಿಂತಿದ್ದಾರೆ.

  English summary
  Dhruwan Debut Movie Bhagwan Shrikrishna Paramathma First Look Poster Released By D Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X