»   » ನಾನವನಲ್ಲ.. ನಾನವನಲ್ಲ.. ಅಂತಿದ್ದಾರೆ ಧ್ರುವ ಸರ್ಜಾ

ನಾನವನಲ್ಲ.. ನಾನವನಲ್ಲ.. ಅಂತಿದ್ದಾರೆ ಧ್ರುವ ಸರ್ಜಾ

Posted By:
Subscribe to Filmibeat Kannada
ದ್ರುವ ಸರ್ಜಾ ಅಕೌಂಟ್ ನಿಂದ ಅಶ್ಲೀಲಾ ಮೆಸೇಜ್ ಗಳು ಬರ್ತಿರೋದು ನಿಜಾನಾ ?| Oneindia Kannada

'ಭರ್ಜರಿ' ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕಾರಣ ಇಷ್ಟೇ ಧ್ರುವ ಸರ್ಜಾ 'ಪೊಗರು' ಸಿನಿಮಾಗಾಗಿ ಹೊಸ ಲುಕ್ ಟ್ರೈ ಮಾಡಿದ್ದು ಅದು ರಿವಿಲ್ ಆಗಬಾರದು ಅನ್ನುವ ಕಾರಣಕ್ಕಾಗಿ ಧ್ರುವ ಸರ್ಜಾ ಸೈಲೆಂಟಾಗಿ ತಮ್ಮ ಪಾಲಿನ ಚಿತ್ರೀಕರಣ ಮಾಡಿ ಮುಗಿಸುವಲ್ಲಿ ಬ್ಯುಸಿ ಆಗಿದ್ದಾರೆ.

ಆದರೆ ಸಾಕಷ್ಟು ದಿನದ ನಂತರ ಧ್ರುವ ಸರ್ಜಾ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ನಾನವನಲ್ಲ, ನಾನವನಲ್ಲ ಅಂತಿದ್ದಾರೆ. ಹೌದು ಧ್ರುವ ಅವನು ನಾನಲ್ಲ ಅಂತ ಹೇಳುತ್ತಿರುವು ಅವರ ಅಭಿಮಾನಿಗಳಿಗೆ. ಕಾರಣ ಏನಪ್ಪಾ ಅಂದರೆ ಧ್ರುವ ಸರ್ಜಾ ಹೆಸರಿನಲ್ಲಿ ಯಾರೋ ಇನ್‌ಸ್ಟಾಗ್ರಾಂ ಅಕೌಂಟ್ ಕ್ರಿಯೇಟ್ ಮಾಡಿದ್ದಾರಂತೆ. ಅಷ್ಟೇ ಅಲ್ಲದೆ ಅವರ ಹೆಸರಿನಲ್ಲೇ ಹೆಣ್ಣುಮಕ್ಕಳಿಗೆ ಕೆಟ್ಟದಾಗಿ ಮೆಸೆಜ್ ಮಾಡುತ್ತಿದ್ದಾರಂತೆ.

Dhura Sarja says I do not have Facebook and Instagram account.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?

ಇದೇ ಕಾರಣದಿಂದ ಟ್ವಿಟ್ಟರ್ ನಲ್ಲಿ ಮಾತ್ರ ಅಕೌಂಟ್ ಹೊಂದಿರುವ ಧ್ರುವ ಸರ್ಜಾ "ನಾನು ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಂ ನಲ್ಲಿ ಇಲ್ಲ. ಹಾಗಾಗಿ ಅದು ನನ್ನ ಅಕೌಂಟ್ ಅಲ್ಲ. ನಿಮಗೆ ನನ್ನ ಹೆಸರಿನ ಅಕೌಂಟ್ ನಿಂದ ಮೆಸೆಜ್ ಬಂದರೆ ಸೈಬರ್ ಕ್ರೈಂ ಅವರಿಗೆ ದೂರು ನೀಡಿ" ಎಂದಿದ್ದಾರೆ.

ಅದರ ಜೊತೆಯಲ್ಲಿ ಯಾರೆಲ್ಲಾ ಧ್ರುವ ಸರ್ಜಾ ಹೆಸರಿನಲ್ಲಿ ಅಕೌಂಟ್ ಫಾಲೋ ಮಾಡುತ್ತಿದ್ದೀರೋ ಅವರೆಲ್ಲರೂ ಅನ್ ಫಾಲೋ ಮಾಡಿ ಎಂದು ಮನವಿ ಮಾಡಿದ್ದಾರೆ. ಸ್ಟಾರ್ ಗಳ ಹೆಸರನ್ನ ಬಳಸಿಕೊಂಡು ಈ ರೀತಿಯ ಕೆಲಸಗಳನ್ನ ಮಾಡುವುದು ಇದೇ ಮೊದಲಲ್ಲ. ಆದರೆ ಈ ಬಗ್ಗೆ ಕಲಾವಿದರು ಆದಷ್ಟು ಬೇಗ ಎಚ್ಚೆತ್ತುಕೊಳ್ಳುವುದು ತುಂಬಾ ಮುಖ್ಯ.

English summary
Kannada actor Dhruva Sarja says I do not have Facebook and Instagram account. If there is any message from my name account, please file a complaint to the cybercrime.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X