ತಲೆ ಗಟ್ಟಿಯಾಗಿದೆ ಅಂತ ಬಂಡೆಗೆ ಚಚ್ಚಿಕೊಳ್ಳಬಾರದು!

ದೊಡ್ಡ ಸಿನಿಮಾಗಳು ಬಿಡುಗಡೆ ಆಗುವಾಗ ಸಣ್ಣ ಸಿನಿಮಾಗಳು ತೆರೆಗೆ ಬರದೇ ಇರುವುದೇ ಒಳ್ಳೆಯದು. ಸಾಕಷ್ಟು ಸಂದರ್ಭದಲ್ಲಿ ಹೀಗೆ ದೊಡ್ಡ ಚಿತ್ರಕ್ಕೆ ಹೆದರಿ ಸಣ್ಣ ಸಿನಿಮಾ ರಿಲೀಸ್ ಬದಲಾಯಿಸಿರುವ ಉದಾಹರಣೆಗಳಿವೆ. ಒಂದು ವೇಳೆ ಎರಡೂ ದೊಡ್ಡ ಸಿನಿಮಾಗಳು ಒಟ್ಟಿಗೆ ಬಂದ್ರು ಯಾವುದಾದರೂ ಒಂದು ಚಿತ್ರಕ್ಕೆ ಕೊಂಚ ಹಿನ್ನಡೆ ಆಗುತ್ತದೆ. ಅದೇ ರೀತಿ ಒಳ್ಳೆ ಸಿನಿಮಾ ಮಾಡಿದ್ರೆ ಯಾವುದೇ ದೊಡ್ಡ ಸಿನಿಮಾ ಎದುರು ಗೆಲ್ಲುವುದು ಕಷ್ಟವಾಗಲ್ಲ.

ಸದ್ಯ ಎಲ್ಲೆಲ್ಲೂ 'ಧುರಂಧರ್- 2' ಆರ್ಭಟ ನಡೀತಿದೆ. 3 ದಿನಕ್ಕೆ ಬರೀ ಭಾರೀ ಭಾರತದಲ್ಲಿ 300 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಒಂದು ವಾರ ಧುರಂಧರ್ ದರ್ಬಾರ್ ಕಮ್ಮಿ ಆಗುವ ಸುಳಿವು ಸಿಕ್ತಿಲ್ಲ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಈಗಾಗಲೇ ಕೆಲವರು ಎರಡನೇ ಬಾರಿ ಸಿನಿಮಾ ನೋಡಲು ಮುಂದಾಗಿದ್ದಾರೆ. ಟಿಕೆಟ್ ದರ ಹೆಚ್ಚಾಗಿದ್ದರೂ ಪ್ರೇಕ್ಷಕರ ಉತ್ಸಾಹ ಕಮ್ಮಿ ಆಗಿಲ್ಲ.

Dhurandhar-2 Dominates Box Office as Toxic Delays Ustad Bhagat Singh Struggles and Love Mocktail-3 won

'ಧುರಂಧರ್- 2' ಎದುರು ಕನ್ನಡದ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಎಂದು ಚರ್ಚೆ ನಡೀತಿತ್ತು. ಆದರೆ ಕೊನೆ ಕ್ಷಣದಲ್ಲಿ ಯಶ್ ಸಿನಿಮಾ ರಿಲೀಸ್ ಮುಂದೂಡಿದರು. ಮಾರ್ಚ್ 19ಕ್ಕೆ ಬರಬೇಕಿದ್ದ ಸಿನಿಮಾ ಜೂನ್ 4ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ಸಿನಿಮಾ ಕಲೆಕ್ಷನ್ ಕಮ್ಮಿ ಆಗಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಆದಿತ್ಯಧರ್ ನಿರ್ದೇಶನದ 'ಧುರಂಧರ್- 2' ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡ್ತಿದ್ರೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಮುಂದೂಡಿದ್ದೇ ಒಳ್ಳೆದಾಯ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಟಾಕ್ಸಿಕ್' ಕೂಡ ಅದ್ಭುತವಾಗಿಯೇ ಮೂಡಿ ಬಂದಿರಬಹುದು. ಆದರೂ ಧುರಂಧರ್ ಸೀಕ್ವೆಲ್ ಕ್ರೇಜ್ ಮುಂದೆ ಮಂಕಾಗಿಬಿಡುತ್ತಿತ್ತೋ ಏನೋ ಎನ್ನುವ ಚರ್ಚೆ ನಡೀತಿದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಸದ್ಯ ತೆರೆಗೆ ಬಂದಿರುವ ತೆಲುಗಿನ 'ಉಸ್ತಾದ್ ಭಗತ್ ಸಿಂಗ್' ಹಾಗೂ ಕನ್ನಡದ 'ಲವ್ ಮಾಕ್ಟೇಲ್- 3' ಚಿತ್ರಗಳು ಪ್ರೇಕ್ಷಕರನ್ನು ರಂಜಸುತ್ತಿವೆ.

Dhurandhar-2 Dominates Box Office as Toxic Delays Ustad Bhagat Singh Struggles and Love Mocktail-3 won

ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಮಾರ್ಚ್ 28ಕ್ಕೆ ತೆರೆಗೆ ಬರಬೇಕಿತ್ತು. ಆದರೆ 'ಟಾಕ್ಸಿಕ್' ರಿಲೀಸ್ ಮುಂದೂಡಿದ್ದರಿಂದ ಒಂದು ವಾರ ಮುನ್ನ ಸಿನಿಮಾ ರಿಲೀಸ್ ಮಾಡುವ ಸಾಹಸಕ್ಕೆ ಕೈಹಾಕಿದ್ದರು. ಅದು ಉಲ್ಟಾ ಹೊಡೆದಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳು ಪವರ್ ಸ್ಟಾರ್ ಆರ್ಭಟ ಮೆಚ್ಚಿಕೊಂಡರೂ ಸಾಮಾನ್ಯ ಪ್ರೇಕ್ಷಕರು ಬೇಸರಗೊಂಡಿದ್ದಾರೆ. 'ಧುರಂಧರ್- 2' ಅಬ್ಬರದ ನಡುವೆ ಉಸ್ತಾದ್ ಆಟ ನಡೀತಿಲ್ಲ. ಮೊದಲ ದಿನಕ್ಕೆ ಹೋಲಿಸಿದರೆ ಎರಡು ಹಾಗೂ ಮೂರನೇ ದಿನ ಪವನ್ ಸಿನಿಮಾ ಕಲೆಕ್ಷನ್ ಬಿದ್ದು ಹೋಗಿದೆ.

ಅಧಿಕೃತವಾಗಿ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. Sacnilk.com ವರದಿ ಪ್ರಕಾರ ಮೊದಲ ದಿನ ಭಾರತದಲ್ಲಿ 34 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ 2 ಹಾಗೂ 3ನೇ ದಿನ ತಲಾ 9 ಕೋಟಿ ರೂ. ಮಾತ್ರ ಗಳಿಸಿರುವುದಾಗಿ ವರದಿಯಾಗಿದೆ. ಅಲ್ಲಿಗೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ. ಒಂದು ವಾರ ತಡವಾಗಿ ಬಂದಿದ್ದರೂ ಪವನ್ ಚಿತ್ರಕ್ಕೆ ಲಾಭ ಆಗುತ್ತಿತ್ತು ಎನ್ನುವ ವಾದ ಕೆಲವರದ್ದು.

ಮತ್ತೊಂದು ಕಡೆ ಕನ್ನಡದ 'ಲವ್ ಮಾಕ್ಟೇಲ್'-3 ಸಿನಿಮಾ ತೆರೆಕಂಡು ಗೆದ್ದಿದೆ. ಬಜೆಟ್, ಸ್ಟಾರ್ ಕಾಸ್ಟ್ ವಿಚಾರದಲ್ಲಿ ಇದು ಚಿಕ್ಕ ಸಿನಿಮಾ ಇರಬಹುದು. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿದೆ. ಸೀಕ್ವೆಲ್ ಚಾಲೆಂಜ್‌ನಲ್ಲಿ ಡಾರ್ಲಿಂಗ್ ಕೃಷ್ಣ ಗೆಲುವಿನ ನಗೆ ಬೀರಿದ್ದಾರೆ. ಫೀಲ್ ಗುಡ್ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಏಪ್ರಿಲ್‌ನಲ್ಲಿ 'ಲವ್ ಮಾಕ್ಟೇಲ್'-3 ಸಿನಿಮಾ ಬಿಡುಗಡೆ ಆಗಬೇಕಿತ್ತು. 'ಟಾಕ್ಸಿಕ್' ರಿಲೀಸ್ ತಡವಾಗಿ ರಂಜಾನ್, ಯುಗಾದಿ ಹಬ್ಬದ ರಜೆ ಬೇಗ ಸಿನಿಮಾ ರಿಲೀಸ್ ಮಾಡಲು ಧೈರ್ಯ ತುಂಬಿತ್ತು.

ಕರ್ನಾಟಕದಲ್ಲಿ 'ಧುರಂಧರ್- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಆದರೂ ಕನ್ನಡ ಸಿನಿರಸಿಕರು 'ಲವ್ ಮಾಕ್ಟೇಲ್'- 3 ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಕನ್ನಡದ ಮೊದಲ ಹಿಟ್ ಸಿನಿಮಾ ಲಿಸ್ಟ್ ಸೇರಿದೆ. ಒಳ್ಳೆ ಸಿನಿಮಾ ಮಾಡಿದ್ರೆ ಪ್ರೇಕ್ಷಕರ ಕೈಬಿಡಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಅಷ್ಟೇ ಅಲ್ಲ ಸಿನಿಮಾ ಚೆನ್ನಾಗಿದ್ದರೆ ಬೇರೆ ಚಿತ್ರಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಸಾರಿ ಹೇಳಿದೆ.

More from Filmibeat

Read more about: toxic yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X