»   » ನಟಿ ಪ್ರಿಯಾಮಣಿ 'ಧ್ವಜ' ಹಾರಿಸಲು ರೆಡಿಯಾಗಿದ್ದಾರೆ

ನಟಿ ಪ್ರಿಯಾಮಣಿ 'ಧ್ವಜ' ಹಾರಿಸಲು ರೆಡಿಯಾಗಿದ್ದಾರೆ

Posted By:
Subscribe to Filmibeat Kannada

ನಟಿ ಪ್ರಿಯಾಮಣಿ ಈಗ 'ಧ್ವಜ' ಹಾರಿಸಲು ಸಿದ್ಧವಾಗಿದ್ದಾರೆ. ಅವರ ಹೊಸ ಸಿನಿಮಾ 'ಧ್ವಜ' ಚಿತ್ರದ ಬಿಡುಗಡೆಯ ದಿನಾಂಕ ಇದೀಗ ನಿಗದಿ ಆಗಿದೆ. ಧ್ವಜ' ತಮಿಳಿನ 'ಕೋಡಿ' ಚಿತ್ರದ ರೀಮೇಕ್ ಆಗಿದೆ ಅಲ್ಲಿನ ಧನುಷ್ ಮತ್ತು ತ್ರಿಷಾ ಅಭಿನಯಿಸಿದ್ದ ಪಾತ್ರವನ್ನ ಇಲ್ಲಿ ರವಿ ಮತ್ತು ಪ್ರಿಯಾಮಣಿ ನಿರ್ವಹಿಸಿದ್ದಾರೆ.

'ಧ್ವಜ' ಒಂದು ರಾಜಕೀಯ ಹಿನ್ನಲೆಯ ಕಥೆ ಹೊಂದಿದೆ. ಕನ್ನಡದ ಜನಪ್ರಿಯ ಸಿನಿಮಾಟೋಗ್ರಾಫರ್ ಆಗಿರುವ ಅಶೋಕ್ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಸುಧಾ ಬಸವೇಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರವಿ ಗೌಡ ಚಿತ್ರದ ನಾಯಕ ಆಗಿದ್ದಾರೆ. ರವಿ ನಟ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ 'ಹುಲಿರಾಯ' ಸಿನಿಮಾ ಮಾಡಿದ್ದ ದಿವ್ಯ ಹುರುಡುಗ ಈ ಸಿನಿಮಾದ ಮತ್ತೊಬ್ಬ ನಾಯಕಿ ಆಗಿದ್ದಾರೆ. ಪ್ರಿಯಾಮಣಿ ರಮ್ಯಾ ಎಂಬ ಪಾತ್ರ ಮಾಡುತ್ತಿದ್ದು, ದಿವ್ಯ ಬಜಾರಿ ಮೊಟ್ಟೆ ಮಹಾಲಕ್ಷ್ಮಿ ಎಂಬ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ.

Dhwaja kannada movie will be released on april 27

ಪ್ರಿಯಾಮಣಿ 'ಧ್ವಜ' ಚಿತ್ರಕ್ಕೂ ರಮ್ಯಾ ಜೀವನ ಚರಿತ್ರೆಗೂ ಸಂಬಂಧ ಇದ್ಯಾ.?

'ಧ್ಜಜ' ಒಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾವಾಗಿದೆ. ಟಿ.ಎನ್.ಸೀತಾರಾಮ್, ತಬಲನಾಣಿ, ವೀಣ ಸುಂದರ್ ಚಿತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣ್ ಸಿನಿಮಾಗೆ ಸಂಗೀತ ನೀಡಿದ್ದಾರೆ. 'ಮಾಸ್ಟರ್ ಫೀಸ್' ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ, 'ಧ್ವಜ' ಸಿನಿಮಾದ ರಿಲೀಸ್ ಡೇಟ್ ಇದೀಗ ಫಿಕ್ಸ್ ಆಗಿದೆ. ಸಿನಿಮಾ ಎಪ್ರಿಲ್ 27ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.

English summary
Actress Priyamani's Dhwaja kannada movie will be released on april 27. The movie directed by cinematographer Ashok Cashyap.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X