'ದಿಯಾ' ಸಿನಿಮಾದ ನಾಯಕಿಗೆ ಮದುವೆ ಆಗಿದೆ ರೀ: ಇವರೇ ನೋಡಿ ಖುಷಿ ಪತಿ

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ ದಿಯಾ. ಚಿತ್ರಮಂದಿರಗಳ ಸಮಸ್ಯೆಯ ನಡುವೆಯು ದಿಯಾ ಸಿನಿಮಾ ಗೆದ್ದು ಬೀಗಿದೆ. ಉತ್ತಮ ಪ್ರತಿಕ್ರಿಯೆ ಪಡಿಕೊಳ್ಳುತ್ತಿರುವಾಗಲೆ ಕೊರೊನಾ ಪರಿಣಾಮದಿಂದ ಚಿತ್ರಮಂದಿರಗಳು ಬಂದ್ ಆಗುವ ಮೂಲಕ ದಿಯಾ ಪ್ರದರ್ಶನಕ್ಕೂ ಬ್ರೇಕ್ ಬಿತ್ತು.

ಆದರೆ ಆ ನಂತರ ಆನ್ ಲೈನ್ ನಲ್ಲಿ ರಿಲೀಸ್ ಮಾಡಲಾಯಿತು. ಆನ್ ಲೈನ್ ನಲ್ಲಿ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಎಲ್ಲರ ಮೆಚ್ಚುಗೆ ಪಡೆದ ದಿಯಾ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ನಟಿ ಖುಷಿ. ಚಿತ್ರದಲ್ಲಿ ದಿಯಾ ಸ್ವರೂಪ್ ಆಗಿ ಅದ್ಭುತ ಅಭಿನಯದ ಮೂಲಕ ಚಿತ್ರಪ್ರಿಯರ ಮನಗೆಲ್ಲುವ ಮೂಲಕ ಖುಷಿ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿಸಿದ್ದಾರೆ.

ಯುವಕರ ಹಾರ್ಟ್ ಬ್ರೇಕ್ ಮಾಡಿದ ಖುಷಿ

ಯುವಕರ ಹಾರ್ಟ್ ಬ್ರೇಕ್ ಮಾಡಿದ ಖುಷಿ

ದಿಯಾ ನೋಡಿದ ನಂತರ ಅದೆಷ್ಟೊ ಯುವಕರ ಕನಸಿನ ರಾಣಿಯಾಗಿದ್ದರು ಖುಷಿ. ಯಾವಾಗ ಖುಷಿಗೆ ಮದುವೆ ಆಗಿದೆ ಎನ್ನುವ ವಿಚಾರ ಬಹಿರಂಗವಾಯಿತೊ ಅದಷ್ಟೋ ಯುವಕರ ಹಾರ್ಟ್ ಬ್ರೇಕ್ ಆಗಿದೆ. ದಿಯಾಗೆ ಮದುವೆ ಆಗಿದೆಯಾ ಎಂದು ಅನೇಕರಿಗೆ ಆಶ್ವರ್ಯವುಂಟುಮಾಡಿದ್ದಲ್ಲದೆ ಈ ಸುದ್ದಿ ನಿದ್ದೆಕದ್ದಿದ್ದ ಯುವಕರಿಗಂತು ಆಘಾತ ತಂದಿದೆ.

ಖುಷಿ ಪತಿ ರಾಕೇಶ್, ಮಗಳು ತನಿಶಾ

ಖುಷಿ ಪತಿ ರಾಕೇಶ್, ಮಗಳು ತನಿಶಾ

ದಿಯಾಗೆ ಮದುವೆ ಆಗಿ ಮುದ್ದಾದ ಮಗು ಕೂಡ ಇದೆ. ಇವರೇ ನೋಡಿ ಖುಷಿಯ ಕೈ ಹಿಡಿದ ಪತಿ. ಹೆಸರು ರಾಕೇಶ್. ಸ್ವಂತ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಖುಷಿ ಮತ್ತು ರಾಕೇಶ್ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದ ಖುಷಿ ಮತ್ತು ರಾಕೇಶ್ ಮನೆಯವರ ಒಪ್ಪಿಗೆ ಪಡೆದು ಕಳೆದ ಮೂರು ವರ್ಷಗಳ ಹಿಂದೆ ಹಸೆಮಣೆ ಏರಿದ್ದಾರೆ. ಈ ಜೋಡಿಗೆ ತನಿಶಾ ಎನ್ನುವ ಮುದ್ದಾದ ಒಂದು ಹೆಣ್ಣು ಮಗುವಿದೆ.

ಸೋಡಬುಡ್ಡಿ ಸಿನಿಮಾದಲ್ಲಿ ಮೊದಲ ಅಭಿನಯ

ಸೋಡಬುಡ್ಡಿ ಸಿನಿಮಾದಲ್ಲಿ ಮೊದಲ ಅಭಿನಯ

ಖುಷಿ ಅವರ ತಂದೆ ರವಿ. ತಾಯಿ ಶೋಭ. ಖುಷಿ ದಿಯಾ ಸಿನಿಮಾ ಮಾಡುವ ಮೊದಲೆ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದರು. ದಿ ಗ್ರೇಟ್ ಸೋಡಾಬುಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಗಿಂತ ಮೊದಲು ನಾಟಕ ಮತ್ತು ಕಿರುಚಿತ್ರಗಳಿಯೂ ಅಭಿನಯಿಸಿದ್ದಾರೆ. ಅಭಿನಯದ ಜೊತೆಗೆ ಖುಷಿ ಅದ್ಭುತ ಡ್ಯಾನ್ಸರ್ ಕೂಡ ಹೌದು. ಸಂಗೀತ ಕೂಡ ಕಲಿತ್ತಿದ್ದಾರಂತೆ.

ನಾಯಕಿಯಾಗಿ ಅಭಿನಯದ ಮೊದಲ ಸಿನಿಮಾ 'ದಿಯಾ'

ನಾಯಕಿಯಾಗಿ ಅಭಿನಯದ ಮೊದಲ ಸಿನಿಮಾ 'ದಿಯಾ'

ದಿಯಾ ಸಿನಿಮಾ ಖುಷಿ ನಾಯಕಿಯಾಗಿ ಅಭಿನಯಿಸಿದ ಮೊದಲ ಸಿನಿಮಾ. ಮೊದಲ ಚಿತ್ರದಲ್ಲಿಯೆ ದೊಡ್ಡ ಮಟ್ಟದ ಖ್ಯಾತಿಗಳಿಸಿದ್ದಾರೆ. ಅಂದ್ಹಾಗೆ ದಿಯಾ ನಾಲ್ಕು ವರ್ಷದ ಹಿಂದೆ ಸೆಟ್ಟೇರಿದ ಸಿನಿಮಾ. ಬರೋಬ್ಬರಿ ನಾಲ್ಕು ವರ್ಷದ ಪ್ರಾಜೆಕ್ಟ್ ದಿಯಾ. ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ಖುಷಿ ರಾಕೇಶ್ ಜೊತೆ ಹಸೆಮಣೆ ಏರುತ್ತಾರೆ. ಸಿನಿಮಾ ರಿಲೀಸ್ ಆಗುವಷ್ಟರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಖುಷಿ

ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಖುಷಿ

ದಿಯಾ ಸಿನಿಮಾದ ನಂತರ ನಟಿ ಖುಷಿ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬರುತ್ತಿವೆಯಂತೆ. ಆಧರೆ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಖುಷಿ ಸದ್ಯ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ನಕ್ಷೆ ಎಂದು ಹೆಸರಿಡಲಾಗಿದೆ. ದಿಯಾ ಸಿನಿಮಾದ ನಂತರ ಖುಷಿಯ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ನಕ್ಷೆಯಲ್ಲಿ ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದುನೋಡಬೇಕು.

More from Filmibeat

English summary
Kannada movie Dia fame Actress Kushee husband Photo revealed. Khushee husband name is Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X