For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾದ 'ದಿಯಾ' ಹೀರೋಗಳು: ದೀಕ್ಷಿತ್ ಶೆಟ್ಟಿಗೆ ವಿಲನ್ ಆಗ್ತಾರಾ ಪೃಥ್ವಿ?

  |

  ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ ಸಿನಿಮಾ 'ದಿಯಾ'. ಈ ವರ್ಷದ ಪ್ರಾರಂಭದಲ್ಲಿ ರಿಲೀಸ್ ಆದ 'ದಿಯಾ' ಸಿನಿಮಾ ನೋಡಿ ಪ್ರೇಕ್ಷಕರು ಹಾಡಿಹೊಗಳಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಇಬ್ಬರ ಪಾತ್ರಗಳು ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿದೆ. ಈ ಸಿನಿಮಾದ ಸಕ್ಸಸ್ ಬಳಿಕ ದೀಕ್ಷಿತ್ ಮತ್ತು ಪೃಥ್ವಿ ಅವರ ಮುಂದಿನ ಸಿನಿಮಾಗಳ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ. ಸದ್ಯ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಇಬ್ಬರೂ ಹೀರೋಗಳು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ನಟ ಪೃಥ್ವಿ ಅಂಬರ್ 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅಲ್ಲದೆ ನಟ ದೀಕ್ಷಿತ್ ಶೆಟ್ಟಿ ಸಹ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ.

  'ದಿಯಾ' ಸಿನಿಮಾ ಬಳಿಕ ಪೃಥ್ವಿ ಅಂಬರ್ ಹೊಸ ಸಿನಿಮಾ ಅನೌನ್ಸ್: ಡಾಲಿ ಧನಂಜಯ್ ಸಾಥ್

  ಈ ನಡುವೆ ಇಬ್ಬರು ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 'ದಿಯಾ' ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಬಿಟ್ಟರೆ ಸಿನಿಮಾದ ಬೇರೆ ಯಾವ ದೃಶ್ಯಗಳಲ್ಲಿಯೂ ದೀಕ್ಷಿತ್ ಮತ್ತು ಪೃಥ್ವಿ ಮುಖಾಮುಖಿಯಾಗಿರಲಿಲ್ಲ. ಆದರೀಗ ಹೊಸ ಸಿನಿಮಾ ಮೂಲಕ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರ.

  ವಿಶೇಷ ಅಂದರೆ ದೀಕ್ಷಿತ್ ಮತ್ತು ಪೃಥ್ವಿ ಸಿನಿಮಾಗೆ 'ದಿಯಾ' ಸಿನಿಮಾದ ಸಹ ನಿರ್ದೇಶಕ ಪ್ರವೀಣ್ ಚನ್ನಪ್ಪ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಮರ್ಡರ್ ಮಿಸ್ಟ್ರಿ ಸಿನಿಮಾವಾಗಿದ್ದು, ಚಿತ್ರದಲ್ಲಿ ಪೃಥ್ವಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ದೀಕ್ಷಿತ್ ಪೊಲೀಸ್ ಆಗಿ ಬಣ್ಣ ಹಚ್ಚುತ್ತಿದ್ದಾರೆ.

  ಕೊರೊನಾ ವೈರಸ್ ಹಾವಳಿ ಪರಿಣಾಮ ಸಿನಿಮಾ ತಡವಾಗಿದ್ದು, ಅಕ್ಟೋಬರ್ ನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ. 'ದಿಯಾ' ಮೂಲಕ ಮೋಡಿ ಮಾಡಿದ್ದ ದೀಕ್ಷಿತ್ ಮತ್ತು ಪೃಥ್ವಿ ಮೇಲೆ ನಿರೀಕ್ಷೆ ಹೆಚ್ಚಾಗಿರುವ ಕಾರಣ, ಇನ್ನೂ ಹೆಸರಿಡದ ಹೊಸ ಸಿನಿಮಾದ ಮೇಲೆ ಕುತೂಹಲ ಮೂಡಿಸಿದೆ.

  English summary
  Dia fame Actor Deekshit Shetty team up with Pruthvi Ambar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X