Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು ಸ್ಟಾರ್ ನಾನಿ ಸಿನಿಮಾದಲ್ಲಿ 'ದಿಯಾ' ಹೀರೋ ದೀಕ್ಷಿತ್
ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಗೆದ್ದ ದೀಕ್ಷಿತ್ ಶೆಟ್ಟಿ ಇದೀಗ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿಯಾ ಸಿನಿಮಾ ಬಳಿಕ ದೀಕ್ಷಿತ್ ಶೆಟ್ಟಿಗೆ ಸಿನಿಮಾ ಅವಕಾಶಗಳು ಹೆಚ್ಚಾಗಿದ್ದು, ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ದಿಯಾ ಬಳಿಕ ದೀಕ್ಷಿತ್ ಶೆಟ್ಟಿ ತೆಲುಗು ಪ್ರೇಕ್ಷಕರ ಮುಂದೆ ಹೋಗಿದ್ದರು. ತೆಲುಗಿನಲ್ಲಿ ದೀಕ್ಷಿತ್ ಮೊದಲ ಬಾರಿಗೆ ಮುಗ್ಗುರು ಮೊನಗಲ್ಲು ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದರು.
ದಿಯಾ ಚಿತ್ರ ಕನ್ನಡದ ಜೊತೆಗೆ ಪರಭಾಷೆಯ ಪ್ರೇಕ್ಷಕರನ್ನು ಸೆಳೆದ ಸಿನಿಮಾ. ಹಾಗಾಗಿ ದೀಕ್ಷಿತ್ ಶೆಟ್ಟಿ ತೆಲುಗಿನಲ್ಲಿ ಫೇಮಸ್ ಆಗಿದ್ದಾರೆ. ಇದು ಅವರಿಗೆ ತೆಲುಗಿನಿಂದ ಆಫರ್ ಹುಡುಕಿ ಬರಲು ಕಾರಣವಾಯಿತು. ಮುಗ್ಗುರು ಮೊನಗಲ್ಲು ಸಿನಿಮಾದ ಬಳಿಕ ದೀಕ್ಷಿತ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಖ್ಯಾತ ನಟ ನಾನಿ ನಟನೆಯ ಮುಂದಿನ ಸಿನಿಮಾದಲ್ಲಿ ಎನ್ನುವುದೇ ವಿಶೇಷ.
ನಟ ನಾನಿ 'ಮೀಟ್ ಕ್ಯೂಟ್' ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ನಾನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಕ್ಕೆ ದೀಕ್ಷಿತ್ ಆಯ್ಕೆ ಮಾಡಿಕೊಳ್ಳಲಾಗಿದೆ. ದೀಕ್ಷಿತ್ಗೆ ಜತೆಯಾಗಿ ಆಕಾಂಕ್ಷಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಕ್ಷಿತ್ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸಲಿದೆಯಂತೆ.
ನಾನಿ ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟ. ಅವರ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇರುತ್ತದೆ. ಇನ್ನು, ನಾನಿ ಸಿನಿಮಾದಲ್ಲಿ ದೀಕ್ಷಿತ್ ನಟಿಸಿದರೆ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಸಿಗಲಿದೆ. ಈ ಸಿನಿಮಾವನ್ನು ನಾನಿ ನಿರ್ಮಾಣ ಮಾಡಿದರೆ, ಅವರ ಸಹೋದರಿ ದೀಪ್ತಿ ಗಂಟಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇನ್ನೂ ಕೆಲ ಖ್ಯಾತ ಕಲಾವಿದರು ನಟಿಸುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಿಲ್ಲ.
ನಟ ದೀಕ್ಷಿತ್ ಶೆಟ್ಟಿ ಮೊದಲ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದರು. ಬಳಿಕ 'ದಿಯಾ' ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದ್ದರು. ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತು. ದಿಯಾ ಸಿನಿಮಾ 2020ರ ಆರಂಭದಲ್ಲಿ ತೆರೆಕಂಡಿತ್ತು. ಕೆ.ಎಸ್. ಅಶೋಕ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ರವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕನ್ನಡದಲ್ಲಿ ಸೂಪರ್ ಸಕ್ಸಸ್ ಆದ ಬಳಿಕ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಯಿತು. ಇದೀಗ ದಿಯಾ ಹಿಂದಿಗೆ ರಿಮೇಕ್ ಆಗುತ್ತಿದೆ. ತೆಲುಗಿನಲ್ಲೂ ಈ ಸಿನಿಮಾ ರಿಮೇಕ್ ಆಗಿ ತೆರೆಕಂಡಿದೆ.