ಸೂಪರ್ ಹಿಟ್ 'ದಿಯಾ' ಸಿನಿಮಾಗೆ ವರ್ಷದ ಸಂಭ್ರಮ

ಸ್ಯಾಂಡಲ್ ವುಡ್ ನಲ್ಲಿ ಕಳೆದ ವರ್ಷ, 2020ರಲ್ಲಿ ರಿಲೀಸ್ ಆದ ದಿಯಾ ಸಿನಿಮಾ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೊಮ್ಯಾಂಟಿಕ್ ಫೀಲಿಂಗ್ ಸಿನಿಮಾಗೆ ಚಿತ್ರಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ ದಿಯಾ ಗೆಲುವಿನ ನಗೆ ಬೀರಿತ್ತು.

ದಿಯಾ, ಆದಿ ಮತ್ತು ರೋಹಿತ್ ಪಾತ್ರಗಳು ಇನ್ನು ಪ್ರೇಕ್ಷಕರನ್ನು ಕಾಡುತ್ತಿದ್ದು, ನೋಡುಗರ ಮನದಲ್ಲಿ ಹಸಿರಾಗೆ ಇದೆ. ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ನಾಯಕರಾಗಿ ಕಾಣಿಸಿಕೊಂಡರೇ, ನಾಯಕಿಯಾಗಿ ಖುಷಿ ರವಿ ಮಿಂಚಿದ್ದಾರೆ. ದಿಯಾ ಸಿನಿಮಾ ಅಶೋಕ್ ಸಾರಥ್ಯದಲ್ಲಿ ಮೂಡಿಬಂದಿದೆ.

ವರ್ಷದ ಸಂಭ್ರಮದಲ್ಲಿ ದಿಯಾ ಸಿನಿಮಾ

ವರ್ಷದ ಸಂಭ್ರಮದಲ್ಲಿ ದಿಯಾ ಸಿನಿಮಾ

ಅಂದಹಾಗೆ ದಿಯಾ ಸಿನಿಮಾದ ಬಗ್ಗೆ ಈಗ್ಯಾಕೆ ಮಾತು ಅಂತಿರಾ. ದಿಯಾ ಸಿನಿಮಾ ರಿಲೀಸ್ ಆಗಿ 1 ವರ್ಷ ಆಗಿದೆ. 2020 ಫೆಬ್ರವರಿ 7ರಂದು ದಿಯಾ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿತ್ತು. ಆದರೆ ಚಿತ್ರಮಂದಿರಗಳ ಸಮಸ್ಯೆಯಿಂದ ಸಿನಿಮಾವನ್ನು ತೆಗೆದುಹಾಕಲಾಗಿತ್ತು. ಆದರೆ ಚಿತ್ರರಂಗದ ಕೆಲವು ಗಣ್ಯರ ಬೆಂಬಲ ಮತ್ತು ಪ್ರೇಕ್ಷಕರು ತೋರಿಸಿದ ಪ್ರೀತಿ ದಿಯಾ ಸೂಪರ್ ಹಿಟ್ ಗೆ ಕಾರಣವಾಯಿತು.

ಆನ್ ಲೈನ್ ನಲ್ಲೂ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದ ಪ್ರೇಕ್ಷಕರು

ಆನ್ ಲೈನ್ ನಲ್ಲೂ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದ ಪ್ರೇಕ್ಷಕರು

ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಕೊರೊನಾ ವೈರಸ್ ಲಾಕ್ ಡೌನ ಕಾರಣ ಚಿತ್ರಮಂದಿರಗಳನ್ನು ರದ್ದು ಮಾಡಬೇಕಾಯಿತು. ಉತ್ತಮ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗಳ ಪ್ರದರ್ಶನ ಕೂಡ ನಿಲ್ಲಿಸ ಬೇಕಾಯಿತು. ಬಳಿಕ ದಿಯಾ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆನ್ ಲೈನ್ ನಲ್ಲೂ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು.

ಹಿಂದಿಗೆ ರಿಮೇಕ್ ಆಗುತ್ತಿದೆ ಸಿನಿಮಾ

ಹಿಂದಿಗೆ ರಿಮೇಕ್ ಆಗುತ್ತಿದೆ ಸಿನಿಮಾ

ದಿಯಾ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಸಿನಿಮಾ ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಸದ್ಯ ದಿಯಾ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಹಿಂದಿ ರಿಮೇಕ್ ನಲ್ಲಿ ಆದಿ ಪಾತ್ರದಲ್ಲಿ ನಟ ಪೃಥ್ವಿ ಅಂಬರ್ ಅವರೇ ನಟಿಸುತ್ತಿದ್ದಾರೆ. ಉಳಿದಂತೆ ಕಲಾವಿದರ ಬಗ್ಗೆ ರಿವೀಲ್ ಮಾಡಿಲ್ಲ ಸಿನಿಮಾತಂಡ.

Recommended Video

ಕಬ್ಜ ಚಿತ್ರತಂಡ ಸೇರಿಕೊಂಡ ಕನ್ನಡದ ಯುವ ನಟ | Filmibeat Kannada
ಚಿತ್ರತಂಡದ ಸಂತಸ

ಚಿತ್ರತಂಡದ ಸಂತಸ

ಚಿತ್ರಕ್ಕೆ ಒಂದು ವರ್ಷ ತುಂಬಿದ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ನೋಡಿ ಹರಿಸಿ, ಹಾರೈಸಿ, ಪ್ರೀತಿ ತೋರಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಈ ತಂಡ ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿ, ದಿಯಾ ಅಂಥ ಅದ್ಭುತ ಸಿನಿಮಾ ನೀಡಲಿ ಎಂದು ಪ್ರೇಕ್ಷಕರು ಕೇಳಿಕೊಳ್ಳುತ್ತಿದ್ದಾರೆ.

More from Filmibeat

English summary
Deekshith shetty, Pruthvi Ambar and Khushi starrer Super hit Dia movie Completes 1 Year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X