For Quick Alerts
  ALLOW NOTIFICATIONS  
  For Daily Alerts

  ಪ್ರೇಮಕತೆ ಬಿಟ್ಟು ಮತ್ತೆ ಥ್ರಿಲ್ಲರ್ ಹಾದಿ ಹಿಡಿದ 'ದಿಯಾ' ನಿರ್ದೇಶಕ

  |

  'ದಿಯಾ' ಸಿನಿಮಾ ಮೂಲಕ ಭಾರಿ ಭರವಸೆ ಮೂಡಿಸಿರುವ ನಿರ್ದೇಶಕ ಕೆ.ಎಸ್.ಅಶೋಕ್ ಇದೀಗ ತಮ್ಮ ಮುಂದಿನ ಸಿನಿಮಾದ ಕತೆ, ಚಿತ್ರಕತೆ ರಚನೆಯಲ್ಲಿ ಬ್ಯುಸಿಯಾಗಿದ್ದಾರೆ.

  'ದಿಯಾ' ಎಂಬ ಅಪ್ಪಟ ಪ್ರೇಮಕತೆ ಹೆಣೆಯುವ ಮುನ್ನ ಅಶೋಕ್ ಅವರು ಅದ್ಭುತವಾದ ಹಾರರ್ ಥ್ರಿಲ್ಲರ್ ಸಿನಿಮಾವನ್ನು ನೀಡಿದ್ದರು. ಸಿನಿಮಾದ ಹೆಸರು '6-5=2'. ಆ ಸಿನಿಮಾ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರಮಂದಿರಗಳಲ್ಲಿಯೂ ಹಿಟ್ ಆಗಿತ್ತು. ಇದೀಗ ತಮ್ಮ ಮೂರನೇ ಕನ್ನಡ ಸಿನಿಮಾ ನಿರ್ದೇಶಿಸುವ ತಯಾರಿಯಲ್ಲಿರುವ ಅಶೋಕ್, ಮೂರನೇ ಸಿನಿಮಾಕ್ಕೆ ಥ್ರಿಲ್ಲರ್ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  'ಕತೆ ಈಗಾಗಲೇ ನನ್ನ ತಲೆಯಲ್ಲಿದೆ. ಕೆಲವು ವಾರಗಳಿಂದ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ನಾನು ಕತೆಯನ್ನು ಅಕ್ಷರಕ್ಕೆ ಇಳಿಸುತ್ತಿದ್ದೇನೆ. ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರಾದ ನಂತರ ನಟರ ಆಯ್ಕೆ ಮಾಡಲಿದ್ದೇನೆ' ಎಂದಿದ್ದಾರೆ ಅಶೋಕ್.

  ಪ್ರಸ್ತುತ 'ದಿಯಾ' ಸಿನಿಮಾದ ಹಿಂದಿ ರೀಮೇಕ್ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅಶೋಕ್. ಆ ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾ ಪ್ರಾರಂಭವಾಗಲಿದೆ ಎಂದಿದ್ದಾರೆ. ಹೊಸ ಥ್ರಿಲ್ಲರ್ ಸಿನಿಮಾವನ್ನು ಚಿತ್ರಮಂದಿರ ಹಾಗೂ ಒಟಿಟಿ ಎರಡಕ್ಕೂ ಹೊಂದಿಕೊಳ್ಳುವಂತೆ ನಿರ್ದೇಶಿಸಲಿದ್ದೇನೆ ಎಂದಿದ್ದಾರೆ.

  'ದಿಯಾ' ಸಿನಿಮಾದ ಹಿಂದಿ ರೀಮೇಕ್‌ಗಾಗಿ ಮೂಲ ಕತೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಹೊಸ ಮುಖಗಳನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ. ಹೊಸ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಿದ್ದೇನೆ. ಹಿಂದಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ಸಂಸ್ಥೆಯು ಎಲ್ಲವನ್ನೂ ಚೆನ್ನಾಗಿ ವ್ಯವಸ್ಥೆ ಮಾಡಿಕೊಟ್ಟಿದೆ ಎಂದಿದ್ದಾರೆ ಅಶೋಕ್.

  'ದಿಯಾ' ಸಿನಿಮಾವು 2020 ರ ಫೆಬ್ರವರಿ 7 ರಂದು ಬಿಡುಗಡೆ ಆಗಿತ್ತು. ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿದ್ದವಾದರೂ ಚಿತ್ರಮಂದಿರದಲ್ಲಿ ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗಲಿಲ್ಲ. ಆದರೆ ಲಾಕ್‌ಡೌನ್ ಸಮಯದಲ್ಲಿ ಇದೇ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಯಿತು.

  Yash ಗೆ ತುಂಬಾ Attitude‌ ಸಿನಿಮಾದಲ್ಲಿ ಯಶಸ್ಸು ಸಿಗಲ್ಲ ಅಂದಿದ್ರು Ramya | Fillmibeat Kannada

  'ದಿಯಾ' ಸಿನಿಮಾಕ್ಕೂ ಮುನ್ನ '6-5=2' ಎಂಬ ಬಹಳ ಭಿನ್ನವಾದ ಹಾರರ್ ಸಿನಿಮಾವನ್ನು ಕೆ.ಎಸ್.ಅಶೋಕ್ ನಿರ್ದೇಶನ ಮಾಡಿದ್ದರು. ಕತೆ ಹೇಳುವ ಕ್ರಮ, ಸಿನಿಮಾವನ್ನು ಚಿತ್ರೀಕರಣ ಮಾಡಿರುವ ಕ್ರಮ ಎಲ್ಲ ವಿಧದಲ್ಲೂ ಭಿನ್ನವಾಗಿದ್ದ ಆ ಸಿನಿಮಾ ಹಿಟ್ ಆಗಿತ್ತು ಜೊತೆಗೆ ಬಹಳ ಮೆಚ್ಚುಗೆಗೂ ಪಾತ್ರವಾಯಿತು.

  English summary
  Dia Kannada movie director KS Ashok writing new movie which will be a thriller movie. He is now directing Dia movie's Hindi remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X