ಹೊಸ ಕ್ಲೈಮ್ಯಾಕ್ಸ್‌ನಲ್ಲಿ 'ದಿಯಾ' ಸಿನಿಮಾ ರಿ-ರಿಲೀಸ್

2020ರಲ್ಲಿ ತೆರೆಕಂಡ ಚಿತ್ರಗಳ ಪೈಕಿ 'ದಿಯಾ' ಮತ್ತು 'ಲವ್‌ ಮಾಕ್ಟೈಲ್' ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿತ್ತು. ಪಕ್ಕಾ ಲವ್ ಸ್ಟೋರಿ ಕಥೆಗಳನ್ನು ಹೊಂದಿದ್ದ ಈ ಚಿತ್ರಗಳಲ್ಲಿ ಹ್ಯಾಪಿ ಎಂಡಿಂಗ್ ಇರಲಿಲ್ಲ. ಹಾಗಾಗಿ, ಚಿತ್ರಪ್ರೇಮಿಗಳು ಕೊಂಚ ನಿರಾಸೆಯಾಗಿದ್ದು ಉಂಟು.

ಇದೀಗ, ದಿಯಾ ಸಿನಿಮಾ ರಿ ರಿಲೀಸ್ ಆಗುತ್ತಿದೆ. ಇಂದಿನಿಂದ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಟ್ಟಿರುವ ಹಿನ್ನೆಲೆ ಹಿಟ್ ಚಿತ್ರಗಳನ್ನು ಮತ್ತೆ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ದಿಯಾ ಸಿನಿಮಾ ಅಕ್ಟೋಬರ್ 23 ರಂದು ಪುನಃ ಥಿಯೇಟರ್‌ಗೆ ಬರ್ತಿದೆ.

ಆದರೆ, ಈ ಸಲ ಸರ್ಪ್ರೈಸ್ ಜೊತೆ ದಿಯಾ ಬಿಡುಗಡೆಯಾಗುತ್ತಿದೆ. ದಿಯಾ ಕ್ಲೈಮ್ಯಾಕ್ಸ್ ಬಗ್ಗೆ ನಿರಾಸೆಯಾಗಿದ್ದ ಪ್ರೇಕ್ಷಕರಿಗಾಗಿ ಮತ್ತೆ ಕ್ಲೈಮ್ಯಾಕ್ಸ್ ಶೂಟ್ ಮಾಡಲಾಗುತ್ತಿದೆ. ಕ್ಲೈಮ್ಯಾಕ್ಸ್ ಬದಲಾಯಿಸಿದ್ದು, ಹೊಸ ಟ್ವಿಸ್ಟ್ ಸೇರಿಸಲಾಗಿದೆ. ಅದೇನು ಎಂಬುದನ್ನು ಚಿತ್ರಮಂದಿರಲ್ಲಿ ನೋಡಬೇಕು.

Dia movie to Re release with new climax and soulful song on october 23

ಈ ಹಿಂದೆ ದಿಯಾ ಸಿನಿಮಾ ನೋಡಿದವರು ಆದಿ ಮತ್ತು ದಿಯಾ ಇಬ್ಬರು ಕ್ಲೈಮ್ಯಾಕ್ಸ್‌ನಲ್ಲಿ ಒಂದಾಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಸಿನಿಮಾ ಕೊನೆಯಲ್ಲಿ ಅದು ಆಗಿರಲಿಲ್ಲ. ರೈಲಿಗೆ ಸಿಕ್ಕಿ ಆದಿ ಸಾಯುತ್ತಾನೆ. ಹೊಸದಾಗಿ ರಿಲೀಸ್ ಆಗುವ ಚಿತ್ರದಲ್ಲಿ ಅದೇನ್ ಟ್ವಿಸ್ಟ್ ಕೊಡ್ತಾರೋ ಕುತೂಹಲ ಹುಟ್ಟುಹಾಕಿದೆ.

ಇನ್ನುಳಿದಂತೆ ಅಶೋಕ್ ಈ ಚಿತ್ರ ನಿರ್ದೇಶಿಸಿದ್ದರು. ಖುಷಿ ರವಿ ದಿಯಾ ಪಾತ್ರದಲ್ಲಿ ನಟಿಸಿದ್ದರು. ಪೃಥ್ವಿ ಅಂಬಾರ್ ಆದಿಯಾಗಿ ಕಾಣಿಸಿಕೊಂಡಿದ್ದರು. ದೀಕ್ಷೀತ್ ಶೆಟ್ಟಿ ರೋಹಿತ್ ಆಗಿ ಬಣ್ಣ ಹಚ್ಚಿದ್ದರು. ಫೆಬ್ರವರಿ 7 ರಂದು ದಿಯಾ ಸಿನಿಮಾ ಮೊದಲ ಬಾರಿಗೆ ಬಿಡುಗಡೆಯಾಗಿತ್ತು.

Recommended Video

ನಮ್ಮ ಜನ ಏನು ಅಂತ ಅವತ್ತು ಪ್ರೂವ್ ಮಾಡಿದ್ರು | Filmibeat Kannada

More from Filmibeat

English summary
Kannada Superhit movie Dia to release with new climax and soulful song, releasing in theatres from october 23.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X