ಕೊರೆವ ಚಳಿಯಲಿ, ಉರಿವ ಬೆಂಕಿಯ ಮುಂದೆ ಮಾದೇವನಿಗೆ ಲವ್ವಾಯ್ತು
'ಮಾದೇವ ನಮ್ಮ ಮಾದೇವ..' ಹಾಡು ಹಿಟ್ ಆಗಿದೆ. ಈ ಹಾಡಿನ ಬಳಿಕ ಇದೇ ಸಿನಿಮಾದ ಮತ್ತೊಂದು ಹಾಡು ಗಮನ ಸೆಳೆಯುತ್ತಿದೆ. 'ಡಿಚ್ಕಿ ಡಿಸೈನ್' ಸಿನಿಮಾದ ಲವ್ ಸಾಂಗ್ ಇದಾಗಿದೆ.
'ಕಾಣದ ಊರಿನಾಚೆಯಲಿ..' ಹಾಡಿಗೆ ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಹಾಡಿನ ಸಾಹಿತ್ಯ ತುಂಬ ಚೆನ್ನಾಗಿದೆ. ಕೊರೆವ ಚಳಿಯಲಿ, ಉರಿವ ಬೆಂಕಿಯ ಮುಂದೆ ಮಾದೇವಿಗೆ ಪ್ರೀತಿ ಮೂಡಿದೆ.
ಚೆಂದದ ಹಾಡನ್ನು ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಡಿನಲ್ಲಿ ರಣ ಚಂದು ಹಾಗೂ ನಿಮಿಕಾ ರತ್ನಾಕರ್ ಕಾಣಿಸಿಕೊಂಡಿದ್ದಾರೆ. ಹಾಡಿಗೆ ಅವಿನಾಶ್ ಬಲೆಕ್ಕಲ ಸಾಹಿತ್ಯ ಬರೆದಿದ್ದಾರೆ.

ಜಿಮ್ಮಿ ಫ್ರಾನ್ಸಿಸ್ ಈ ಹಾಡನ್ನು ಹಾಡಿದ್ದಾರೆ. ಕಾರ್ತಿಕ್ ಚೆನ್ನೊಜಿ ಹಾಗೂ ರೋಣದ ಬಕ್ಕೇಶ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿಶೋರ್ ಛಾಯಾಗ್ರಹಣ ಮಾಡಿದ್ದಾರೆ. ನಾಯಕ ರಣ ಚಂದು ಅವರೇ ಚಿತ್ರದ ನಿರ್ದೇಶಕರಾಗಿದ್ದಾರೆ.
ಈಗಾಗಲೇ ಸಿನಿಮಾ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡಿ ಬೀಟ್ಸ್ ನಲ್ಲಿ ಟ್ರೇಲರ್ ಮತ್ತು ಹಾಡುಗಳು ಹೊರಬಂದಿವೆ. ಅಂದಹಾಗೆ, 'ಡಿಚ್ಕಿ ಡಿಸೈನ್' ಸಿನಿಮಾ ಜುಲೈ 19 ರಂದು ಬಿಡುಗಡೆಯಾಗುತ್ತಿದೆ.
ಚಿತ್ರದ ಹಾಡು ನೋಡಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











