ಬೆಂಗಳೂರಿಗೆ ಬಂದು ಹಾಳಾದ ಡಿಸೈನ್ ಮಹಾದೇವ
ಹಳ್ಳಿ ಹೈದ ಮಹಾದೇವನಿಗೆ ಒಂದೇ ಆಸೆ.. ಬೆಂಗಳೂರು ದುನಿಯಾ ನೋಡಬೇಕು ಎನ್ನುವುದು... ಆದರೆ, ಬೆಂಗಳೂರಿಗೆ ಬಂದ ಮೇಲೆ ಅದು ಅವನನ್ನು ಸುಮ್ಮನೆ ಬಿಟ್ಟು ಬಿಡುತ್ತದೆಯೇ...
ಈ ವಿಷಯದ ಬಗ್ಗೆಯೇ ಹೀಗೊಂದು ಸಿನಿಮಾ ಸಿದ್ಧವಾಗಿದೆ ಅದೇ 'ಡಿಚ್ಕಿ ಡಿಸೈನ್'. ಹಳ್ಳಿಯ ಎಷ್ಟೊ ಹುಡುಗರಿಗೆ ಬೆಂಗಳೂರು ನೋಡಬೇಕು ಎನ್ನುವ ಆಸೆ ಇರುತ್ತದೆ. ಆ ರೀತಿ ಬಂದ ಒಬ್ಬ ಹುಡುಗ ಇಲ್ಲಿನ ಡಿಸೈನ್ ಜೀವನಕ್ಕೆ ಹೇಗೆ ಬದಲಾಗುತ್ತಾನೆ ಎಂದು ಮಜವಾಗಿ ಹೇಳಲಾಗಿದೆ.
'ಡಿಚ್ಕಿ ಡಿಸೈನ್' ಸಿನಿಮಾದ ಟ್ರೇಲರ್ ಸದ್ಯ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಫನ್ನಿಯಾಗಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರಭಿಮಾನಿಗಳ ಗಮನ ಸೆಳೆದಿದೆ.

ಮಹದೇವನ ಜೋಡಿಯಾಗಿ ಶ್ರುತಿ ಪಾತ್ರದಲ್ಲಿ ನಿಮಿಕಾ ರತ್ನಾಕರ್ ಕಾಣಿಸಿಕೊಂಡಿದ್ದಾರೆ. ಮಹದೇವನಾಗಿ ನಟಿಸಿರುವ ರಣ ಚಂದು ಅವರೇ ಚಿತ್ರದ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಚಿತ್ರದ ಹಾಡುಗಳು ಗಮನ ಸೆಳೆದಿವೆ. ರೋಣದ ಬಕ್ಕೆಶ್ ಸಂಗೀತ ನೀಡಿದ್ದಾರೆ.
ಅಂಬಿಷನ್, ಕನ್ಪ್ಯೂಷನ್, ಎಮೋಷನ್, ಸ್ಕ್ಯಾಮ್, ಕ್ರೈಮ್ ಇವೆಲ್ಲವನ್ನು ಹೊಂದಿರುವ ಕಥಾಹಂದರ 'ಡಿಚ್ಕಿ ಡಿಸೈನ್'. ಅಂದಹಾಗೆ, ಈ ಸಿನಿಮಾ ಜುಲೈ 19 ರಂದು ಬಿಡುಗಡೆಯಾಗುತ್ತಿದೆ.
ಟ್ರೇಲರ್ ನೋಡಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications