ಪವಿತ್ರಾ ಗೌಡ ಮಾಜಿ ಪತಿಗೆ ದರ್ಶನ್ ವಾರ್ನಿಂಗ್ ಕೊಟ್ಟಿದ್ದು ನಿಜವೇ? ಸಂಜಯ್ ಸಿಂಗ್ ಪ್ರತಿಕ್ರಿಯೆ ಏನು?
ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಈಗ ಜಗತ್‌ಜಾಹೀರಾಗಿದೆ. ಕಳೆದ ಒಂದು ದಶಕದಿಂದ ದರ್ಶನ್ ಜೊತೆಗೆ ಸಂಬಂಧದಲ್ಲಿ ಇರುವುದಾಗಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇಷ್ಟೆಲ್ಲ ರಾದ್ಧಾಂತಕ್ಕೆ ಕಿಡಿ ಬಿದ್ದಿದ್ದು ಅಲ್ಲಿಂದಲೇ. ದರ್ಶನ್ ಹಾಗೂ ಪವಿತ್ರಾ ಗೌಡ ಜಗತ್ತಿಗೆ ರಿವೀಲ್ ಆಗಿತ್ತು.
ಅದೇ ಸಮಯದಲ್ಲಿ ಇನ್ನೊಂದು ಹೆಸರು ಕೂಡ ಸುದ್ದಿ ಮಾಡಿತ್ತು. ಅದು ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್. ಇವರಿಬ್ಬರ ಫೋಟೊಗಳನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ, ಪವಿತ್ರಾ ಗೌಡ ಮಾಜಿ ಪತಿಯ ಬಗ್ಗೆ ರಿವೀಲ್ ಮಾಡಿದ್ದರು.

ಅಲ್ಲಿಂದ ಸಂಜಯ್ ಸಿಂಗ್ ಅವರ ಹೆಸರು ದರ್ಶನ್ ಹಾಗೂ ಪವಿತ್ರಾ ಗೌಡ ಹೆಸರಿನಲ್ಲಿ ಓಡಾಡುತ್ತಿದೆ. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಹೆಸರು ಹೊರಬೀಳುತ್ತಿದ್ದಂತೆ ಸಂಜಯ್ ಸಿಂಗ್ ಆಕ್ಟಿವ್ ಆಗಿದ್ದಾರೆ. ಮಾಧ್ಯಮಗಳೊಂದಿಗೆ ಓಪನ್ ಆಗಿ ಮಾತಾಡುತ್ತಿದ್ದಾರೆ. ಇತ್ತೀಚೆಗೆ ಮಗಳನ್ನು ಕಸ್ಟಡಿಗೆ ಪಡೆಯುವ ವಿಚಾರದಲ್ಲಿ ಸಂಜಯ್ ಸಿಂಗ್‌ಗೆ ದರ್ಶನ್ ಕಡೆಯಿಂದ ಪವಿತ್ರಾ ಗೌಡಗೆ ಅವಾಜ್ ಹಾಕಿದ್ದರು ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆ ವಿಷಯ ವೈರಲ್ ಆಗುತ್ತಿದ್ದಂತೆ ಸಂಜಯ್ ಸಿಂಗ್ ನಟ ದರ್ಶನ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂಜಯ್ ಸಿಂಗ್ ಹಾಗೂ ಪವಿತ್ರಾ ಗೌಡ ಇಬ್ಬರೂ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದರು. ಐಟಿ ನೌಕರನಾಗಿದ್ದ ಸಂಜಯ್ ಸಿಂಗ್ ಜೊತೆಗೆ ಪವಿತ್ರಾಗೆ ಲವ್ ಆಗಿತ್ತು. ಬಳಿಕ ಎರಡೂ ಮನೆಯವರನ್ನು ಒಪ್ಪಿಸಿ ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಮದುವೆ ಆಗಿದ್ದರು. ಮದುವೆ ಬಳಿಕ ಇಬ್ಬರು ಮಗಳು ಹುಟ್ಟಿದ್ದಳು. ತದನಂತರ ಪವಿತ್ರಾ ಗೌಡ ಸಿನಿಮಾಗೆ ಹೋಗಬೇಕು ಅಂತ ನಿರ್ಧರಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಭಿನ್ನಾಬಿಪ್ರಾಯ ಮೂಡಿತ್ತು.
ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಮಗಳನ್ನು ಪವಿತ್ರಾ ಗೌಡ ಕಸ್ಟಡಿಗೆ ನೀಡಿದ್ದರು. ಅಲ್ಲಿಂದ ಸಂಜಯ್ ಸಿಂಗ್‌ಗೆ ಮಗಳನ್ನು ಭೇಟಿ ಮಾಡುವ ಅವಕಾಶ ಹೆಚ್ಚಾಗಿ ಸಿಕ್ಕಿರಲಿಲ್ಲ. ಹೀಗಾಗಿ ಹಲವು ಬಾರಿಗೆ ಮಗಳನ್ನು ಅವರ ಕಸ್ಟಡಿಗೆ ಕೊಡುವಂತೆ ಕೇಳಿದ್ದು ಇದೆ ಎಂದು ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ.

ಆದರೆ, ಮಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ಹಲವು ಬಾರಿ ಕೇಳಿದ್ದ ಸಂಜಯ್ ಸಿಂಗ್‌ಗೆ ದರ್ಶನ್ ಕಡೆಯಿಂದ ಮಾಜಿ ಪತ್ನಿ ಪವಿತ್ರಾ ಗೌಡ ವಾರ್ನಿಂಗ್ ಕೊಡಿಸಿದ್ದರು. ಇದರಿಂದ ಸಂಜಯ್ ಸಿಂಗ್ ದೂರವೇ ಉಳಿದಿದ್ದರು ಎಂಬ ಸುದ್ದಿಯನ್ನು ಮಾಧ್ಯಮ ಬಿತ್ತರಿಸಿತ್ತು. ಅದಕ್ಕೆ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸಂಜಯ್ ಸಿಂಗ್ ಹೇಳಿಕೊಂಡಿದ್ದಾರೆ.
"ದರ್ಶನ್ ಅವರು ದೊಡ್ಡ ಮನುಷ್ಯ. ಅವರು ತನ್ನ ಹತ್ತಿರ ಯಾಕೆ ಬರುತ್ತಾರೆ? ಅವರನ್ನು ಎಂದಿಗೂ ಭೇಟಿ ಮಾಡಿಲ್ಲ. ನೈಸ್ ರೋಡ್‌ನಲ್ಲಿ ಒಮ್ಮೆ ಅವರ ಸಿನಿಮಾದ ಶೂಟಿಂಗ್ ನಡೆಯುವ ನೋಡಿದ್ದೆ ಅಷ್ಟೆ. ಆದರೆ, ಅವರನ್ನು ಎಂದಿಗೂ ಭೇಟಿ ಮಾಡುವುದಕ್ಕೆ ಆಗಿಲ್ಲ." ಎಂದು ಪವಿತ್ರಾ ಗೌಡ ಮಾಜಿ ಪತ್ನಿ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಪವಿತ್ರಾ ಗೌಡ ಬಗ್ಗೆ ಪಾಸಿಟಿವ್ ಆಗಿಯೇ ಮಾತಾಡಿದ್ದಾರೆ.


Click it and Unblock the Notifications











