ಕಿರಾಣಿ ಅಂಗಡಿ To ಡಿಸೈನರ್ ಸ್ಟುಡಿಯೋ; ಪವಿತ್ರಾ ಗೌಡ ಬದುಕಿನ ಪವಾಡ...?
ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸಂಸಾರವನ್ನ ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿರುವ ಪವಿತ್ರಾ ಗೌಡ ಮೊದಲಿಂದ ಆಗರ್ಭ ಶ್ರೀಮಂತೆ ಏನೂ ಅಲ್ಲ. ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವ್ಳು ಈಕೆ. ಚಾಮರಾಜಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದವಳು. ಆ ಕಾಲಕ್ಕೆ ''ಕಿರಾಣಿ ಅಂಗಡಿ''ಯೇ ಈಕೆ ಕುಟುಂಬಕ್ಕೆ ಆಧಾರವಾಗಿತ್ತು.
ಆದರೆ ಇವತ್ತು ಈ ಮಾಯಾಂಗನೆ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿ. ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುವ ಪವಿತ್ರಾ ಬಳಿ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಹೀಗಾಗಿ ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕೆಂದರೆ.. ಪವಿತ್ರಾ ಗೌಡ ಚಿತ್ರರಂಗದಲ್ಲಿ ಕಿಸಿದಿದ್ದು ..ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲಿಯೇ ಇದೆ. ಮೂರು ಮತ್ತೊಂದು ಸಿನಿಮಾಗಳನ್ನ ಮಾಡಿದಾಕೆ ಈಕೆ. ಅವೆಲ್ಲವೂ ಪರಮತೋಪು ಚಿತ್ರಗಳು ಅನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ.

ಹೀಗಾಗಿಯೇ ಈ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಹಿಂದೆ ದರ್ಶನ್ ಹಣ ಇದೆ ಅನ್ನುವ ಅನುಮಾನ ಈಗ ಅನೇಕರನ್ನ ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಪವಿತ್ರಾ ಗೌಡಳ ಈ ಡಿಸೈನರ್ ಸ್ಟುಡಿಯೋ ಇರುವುದು ದರ್ಶನ್ ಮನೆಯ ಕೂಗಳತೆಯ ಅಂತರದಲ್ಲಿಯೇ. ಇನ್ನೂ ನಿಮಗೆ ನೆನಪಿದ್ದರೆ ..ದರ್ಶನ್ ಅವರ ಕಾನೂನು ಬದ್ಧ ಹೆಂಡತಿ ವಿಜಯಲಕ್ಷ್ಮೀ ದರ್ಶನ್ 2021 ರಲ್ಲಿ 'ಮೈ ಫ್ರೆಶ್ ಬಾಸ್ಕೆಟ್' ಅನ್ನೋ ಆನ್ ಲೈನ್ ಶಾಪಿಂಗ್ ಮಾರುಕಟ್ಟೆ ತೆರೆದಿದ್ದರು. ಗ್ರಾಹಕರಿಗೆ ನೇರವಾಗಿ ಫ್ರೆಶ್ ತರಕಾರಿಗಳನ್ನ ಸೇಲ್ ಮಾಡೋ ಬ್ಯುಸಿನೆಸ್ ಶುರು ಮಾಡಿದ್ರು.
ಈ ವ್ಯಾಪಾರ-ವ್ಯವಹಾರವನ್ನ ವಿಜಯ ಲಕ್ಷ್ಮೀ ಶುರು ಮಾಡಿ ಎರಡೇ ವರ್ಷದೊಳಗೆ ಪವಿತ್ರಾ ಗೌಡ ಈ ಬೂಟಿಕ್ ಬಿಸಿನೆಸ್ ಶುರು ಮಾಡಿದ್ದಳು. ನಿಜಾ.. ಬ್ಯಾಂಕ್‌ನಲ್ಲಿ ಸಾಲ ಪಡೆದು ಕೂಡ ವ್ಯಾಪಾರಕ್ಕಿಳಿದಿರಬಹುದು. ಆ ಸಾಧ್ಯತೆ ಖಂಡಿತ ಇದೆ. ಆದರೆ ಅದಕ್ಕೂ ಕೂಡ ಸಾಲಕ್ಕೆ ಶ್ಯೂರಿಟಿ ಅಗತ್ಯವಿರುತ್ತದೆ. ನಿಯಮಗಳು ಮತ್ತು ನಿರ್ಬಂಧಗಳ ಆಧಾರದ ಮೇಲೆ ಸಾಲದ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಯಾರಾದರೂ ಒಬ್ಬರು ಗ್ಯಾರಂಟಿಯನ್ನೂ ಕೊಡಬೇಕಾಗುತ್ತೆ.
ಯಾರಿಗೆ ಗೊತ್ತು ದರ್ಶನ್ ಗ್ಯಾರಂಟಿ ಯೋಜನೆ ಅಡಿಯಲ್ಲಿಯೇ ಈ ''ರೆಡ್ ಕಾರ್ಪೆಟ್ 777'' ಶುರುವಾಗಿದ್ದರು ಆಗಿರಬಹುದು. ಹೀಗಾಗಿಯೇ ಪವಿತ್ರಾ ಗೌಡಳ ಈ ರೆಡ್ ಕಾರ್ಪೆಟ್ ಹಿಂದೆ ದಾಸನ ದುಡ್ಡಿದೆ ಎನ್ನುವ ಮಾತುಗಳನ್ನ ಈಗ ಅನೇಕರು ಹೇಳುತ್ತಿದ್ದಾರೆ.
ಅಂದ್ಹಾಗೇ ಪವಿತ್ರಾ ಗೌಡಳ ಈ ಡಿಸೈನರ್ ಸ್ಟುಡಿಯೋದಲ್ಲಿ ಮಹಿಳೆಯರಿಗೆ ಬೇಕಾದ ಇಂಡೋ ವೆಸ್ಟರ್ನ್ ಶೈಲಿಯ ಉಡುಗೆಗಳು ದೊರೆಯುತ್ತದೆ. ಹಬ್ಬ ಹರಿದಿನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಡಿಸೈನರ್ ಸೀರೆ, ಲೆಹಂಗಾ ಸೇರಿದಂತೆ ಬಗೆ ಬಗೆಯ ಉಡುಗೆಗಳು ದೊರೆಯುತ್ತವೆ. ಸ್ಯಾಂಡಲ್‌ವುಡ್ ನಟಿಯರು, ಕನ್ನಡ ಕಿರುತೆರೆಯ ನಟಿಯರು ಇಲ್ಲಿ ಬಟ್ಟೆ ಖರೀದಿಸುತ್ತಾರೆ.
ಇನ್ನೂ ಮೇಘಾ ಶೆಟ್ಟಿ, ಸೋನಲ್ ಮಂಥೆರೋ ಸೇರಿದಂತೆ ಕೆಲ ನಟಿಯರು ರೆಡ್ ಕಾರ್ಪೆಟ್ 777 ಸ್ಟುಡಿಯೋದ ಬ್ರ್ಯಾಂಡ್ ಅಂಬಾಸಿಡರ್ ಅಂದರೆ ತಪ್ಪಾಗಲ್ಲ. ಯಾಕೆಂದರೆ ಹಿಂದೆ ಎಲ್ಲ ಇವರು ಇಬ್ಬರು ವಿಶೇಷವಾಗಿ ಡಿಸೈನ್ ಮಾಡಿರುವ ಕಾಸ್ಟ್ಯೂಮ್ಸ್ ಧರಿಸಿ ಫೋಟೊಶೂಟ್‌ಗಳನ್ನು ಮಾಡಿಸಿದ್ದರು. ಪವಿತ್ರಾ ಗೌಡಳ ಸ್ಟುಡಿಯೋದ ಪ್ರಚಾರವನ್ನೂ ಮಾಡಿದ್ದರು.
ಒಟ್ನಲ್ಲಿ ಸದ್ಯಕ್ಕೆ ಪವಿತ್ರಾ ಗೌಡಳ ಈ ರೆಡ್ ಕಾರ್ಪೆಟ್ ಸ್ಟುಡಿಯೋ ಸುತ್ತ ಮುತ್ತ ದರ್ಶನ್ ಹಣ ಇರುವ ಅನುಮಾನ ರಾಜರಾಜೇಶ್ವರಿ ನಗರದ ಜನರಲ್ಲಿ ಅಷ್ಟೇ ಅಲ್ಲ, ಅನೇಕರಲ್ಲಿದೆ. ಪವಿತ್ರಾ ಗೌಡ ಭವಿಷ್ಯದಲ್ಲಿ ಜೈಲು ಪಾಲಾದರೆ ಈ ಸ್ಟುಡಿಯೋಗೆ ಬೀಗ ಬೀಳುವ ಸಾಧ್ಯತೆಯೂ ಇದೆ.


Click it and Unblock the Notifications











