ದರ್ಶನ್‌ ಬರ್ತ್‌ಡೇಗೆ ಶುಭ ಕೋರಿದರೇ ಪವಿತ್ರಾ ಗೌಡ?

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರೆಗ್ಯೂಲರ್ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಪವಿತ್ರಾ ಗೌಡ ಟೆಂಪಲ್ ರನ್ ಮಾಡಿದ್ದರು. ಅವರು ನಂಬುವ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರು. ಇತ್ತೀಚೆಗೆ ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೂ ಹೋಗಿ ಬಂದಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಂತೆ ಮತ್ತೆ ಬದುಕಿನ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ರೇಣುಕಾಸ್ವಾಮಿ ಘಟನೆಯ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದು ಇಲ್ಲ. ಇಬ್ಬರ ಸಂಬಂಧ ಇನ್ನೂ ಹಾಗೆ ಉಳಿದುಕೊಂಡಿದೆಯಾ? ಅದರ ಬಗ್ಗೆನೂ ಹರಿದಾಡುವುದು ಕೇವಲ ವದಂತಿಗಳು ಅಷ್ಟೇ. ಇಂದು (ಫೆಬ್ರವರಿ 16) ದರ್ಶನ್ 48ನೇ ಹುಟ್ಟುಹಬ್ಬ. ಆತ್ಮೀಯರು, ಚಿತ್ರರಂಗ ಹಾಗೂ ಅಭಿಮಾನಿಗಳು ದರ್ಶನ್‌ಗೆ ಶುಭ ಕೋರಿತ್ತಿದ್ದಾರೆ. ಆದರೆ, ಪವಿತ್ರಾ ಗೌಡ ಶುಭ ಕೋರಿದರೇ? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

Did Darshan s girlfriend Pavithra Gowda wish him on his 48th birthday

ಪವಿತ್ರಾ ಗೌಡ ಜೈಲಿನಿಂದ ಹೊರ ಬಂದ್ಮೇಲೆ ತಮ್ಮ ವೈಯಕ್ತಿಕ ಬದುಕಿನ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ ಅಂತ ಅನಿಸುತ್ತಿದೆ. ಇಷ್ಟು ಕ್ಲೋಸ್ ಆಗಿದ್ದ ತಮ್ಮ ರೆಡ್ ಕಾರ್ಪೆಟ್ ಸ್ಡುಡಿಯೋಗೆ ಹೊಸ ರೂಪ ಕೊಟ್ಟಿದ್ದಾರೆ. ರೆಡ್ ಕಾರ್ಪೆಟ್‌ ಮತ್ತೆ ಓಪನ್ ಮಾಡಿ ಬ್ಯುಸಿನೆಸ್ ಶುರು ಮಾಡಿರುವ ಪವಿತ್ರಾ ಗೌಡ ದರ್ಶನ್ ಸಾಥ್ ಕೊಟ್ಟಿದ್ದಾರಾ? ಗೊತ್ತಿಲ್ಲ. ಹಾಗಿದ್ದರೆ, ದರ್ಶನ್ ಬರ್ತ್‌ಡೇಗೆ ಪವಿತ್ರಾ ಗೌಡ ವಿಶ್ ಮಾಡಿದ್ರಾ?

ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಜೈಲಿನಿಂದ ಹೊರ ಬಂದ ಬಳಿಕ ತಮ್ಮ ಬದುಕಿನ ಹೊಸ ಅಧ್ಯಾಯಗಳ ಚಿತ್ರಣವನ್ನು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಬೆಂಬಲಿಗರಿಗೆ ತಿಳಿಸುತ್ತಿದ್ದರು. ದೇವಸ್ಥಾನಗಳಿಗೆ ಹೋಗಿದ್ದು, ಮಹಾಕುಂಭ ಮೇಳಕ್ಕೆ ಹೋಗಿದ್ದು, ಅಲ್ಲಿ ಸುಂದರ ಕ್ಷಣಗಳನ್ನು ಕಳೆದಿದ್ದ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇಂದು (ಫೆಬ್ರವರಿ 16) ದರ್ಶನ್ ಬರ್ತ್‌ಡೇ. ಚಾಲೆಂಜಿಂಗ್ ಸ್ಟಾರ್ ದರ್ಶನ್ 48ನೇ ಹುಟ್ಟುಹಬ್ಬಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ರಾ? ಅನ್ನೋ ಸಣ್ಣ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಆದರೆ, ತನ್ನ ಇನ್‌ಸ್ಟಾಗ್ರಾಂನಲ್ಲಿ ಅಮ್ಮ ಐ ಲವ್ ಯು ಅಂತ ವಿಡಿಯೋ ಮಾಡಿ ಪೋಸ್ಟ ಮಾಡಿದ್ದಾರೆ. ಅದಕ್ಕೆ "ಜೀವ ಹೂವಾಗಿದೆ.. ಭಾವ ಜೇನಾಗಿದೆ" ಅಂತ ಹಾಡನ್ನು ಸೇರಿದ್ದಾರೆ. ಫೋಟೊಗಳಿಗೂ ಹಾಡಿಗೂ ಸಿಂಕ್ ಆಗದೆ ಹೋದರೂ, ದರ್ಶನ್‌ಗೆ ನೇರವಾಗಿ ವಿಶ್ ಮಾಡಿಲ್ಲ ಅನ್ನೋದಂತೂ ಗೊತ್ತಾಗಿದೆ.

ಹಾಗಂತ ಪರ್ಸನಲ್ ಆಗಿ ಪೋನ್ ಮಾಡಿ ಶುಭ ಕೋರಿರುವ ಸಾಧ್ಯತೆನೂ ಇದೆ. ಆದರೆ, ತಮ್ಮ ಸಂಬಂಧವನ್ನು ಇನ್‌ಸ್ಟಾಗ್ರಾಂ ಮೂಲಕ ಜಗತ್ತಿಗೆ ಅಧಿಕೃತವಾಗಿ ತಿಳಿಸಿದ್ದ ಪವಿತ್ರಾ ಗೌಡ, ದರ್ಶನ್ ಹುಟ್ಟುಹಬ್ಬಕ್ಕೆ ಇಲ್ಲಿಯೇ ಶುಭ ಕೋರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಲ್ಲಿವರೆಗೂ ಅಂತಹ ಯಾವುದೇ ಪೋಸ್ಟ್‌ಗಳನ್ನು ಪವಿತ್ರಾ ಗೌಡ ಶೇರ್ ಮಾಡಿಕೊಂಡಿಲ್ಲ.

ಪವಿತ್ರಾ ಗೌಡ ಅಮ್ಮನ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಮ್ಮ ಐ ಲವ್ ಯು ಎಂದಿದ್ದಾರೆ. ಆ ರೀಲ್‌ಗೆ "ಜೀವ ಹೂವಾಗಿದೆ.. ಭಾವ ಜೇನಾಗಿದೆ" ಅಂತ ಹಾಡನ್ನೂ ಸೇರಿಸಿ ಖುಷಿ ಪಟ್ಟಿದ್ದಾರೆ. ಇದೇ ಪೋಸ್ಟ್‌ನಲ್ಲಿ" ಅಮ್ಮ ನನಗೆ ದೊಡ್ಡ ಶಕ್ತಿ. ನಾನು ಜೀವನದಲ್ಲಿ ಎಂತಹದ್ದೇ ಏರುಪೇರುಗಳನ್ನು ಕಂಡಾಗಲೂ ಜೊತೆಗಿದ್ದಾರೆ. ನನಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಅವರಿಗಿರುವ ತಾಳ್ಮೆಯ ಶಕ್ತಿ ಅದ್ಭುತ" ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Did Darshan's girlfriend Pavithra Gowda wish him on his 48th birthday?
Read more about: darshan pavithra gowda wish
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X