"ನನ್ನ ಹೊಡಿಬೇಕು ಅಂತ ಮಚ್ಚು ತಟ್ಟೋರಿಗೆಲ್ಲ ಕೆಲ್ಸ ಕೊಡ್ತಿದೀರಾ": ಈ ಡೈಲಾಗ್ ಬಿಟ್ಟು ಟಾಂಗ್ ಕೊಟ್ರಾ ಧ್ರುವ?

By ಫಿಲ್ಮಿಬೀಟ್ ಡೆಸ್ಕ್

ಕಳೆದ ಎರಡು ದಿನಗಳಿಂದ ಧ್ರುವ ಸರ್ಜಾ ವೇದಿಕೆ ಮೇಲೆ ಹೊಡೆದ ಒಂದು ಡೈಲಾಗ್ ವೈರಲ್ ಆಗುತ್ತಿದೆ. ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಆಕ್ಷನ್ ಪ್ರಿನ್ಸ್ ಡೈಲಾಗ್ ಸಂಚಲನ ಸೃಷ್ಟಿಸುತ್ತಿದೆ. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕ್ಷನ್ ಪ್ರಿನ್ಸ್ ಯಾರಿಗೋ ಟಾಂಗ್ ಕೊಟ್ಟಿರಬಹುದು ಅಂತ ಅದೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಅಂದ್ಹಾಗೆ, ಆ ವಿಡಿಯೋದಲ್ಲಿ ಧ್ರುವ ಸರ್ಜಾ ಹೊಡೆದಿರೋದು 'ಕೆಡಿ' ಸಿನಿಮಾದ ಡೈಲಾಗ್. ಸಹಜವಾಗಿಯೇ ಈ ಡೈಲಾಗ್ ಕೇಳಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಧ್ರುವ ಬಾಸ್ ಡೈಲಾಗ್ ಸೂಪರ್ ಅಂತ ಹೊಗಳಿ ಕೊಂಡಾಡುತ್ತಿದ್ದಾರೆ. ಹಾಗೇ ಈ ಡೈಲಾಗ್ ಯಾರಿಗೋ ಟಾಂಗ್ ಕೊಡುವುದಕ್ಕಂತಲೇ ಹೊಡೆದಿದ್ದಾರೆ ಅಂತನೂ ಚರ್ಚೆ ಮಾಡುತ್ತಿದ್ದಾರೆ.

dhruva-sarja-kd-movie-viral-dialogue

ಧ್ರುವ ಸರ್ಜಾ ಇತ್ತೀಚೆಗೆ ಕೋಲಾರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಯಾಗಿ ಹೋಗಿದ್ದರು. ಆ ವೇದಿಕೆ ಮೇಲೆ ಆಕ್ಷನ್ ಪ್ರಿನ್ಸ್ "ನನ್ನ ಹೊಡಿಬೇಕು ಅಂತ ಮಚ್ಚು ತಟ್ಟೋರಿಗೆಲ್ಲ ಕೆಲ್ಸ ಕೊಟ್ಟವ್ರೆ.." ಅಂತ ಡೈಲಾಗ್ ಹೊಡೆದಿದ್ದಾರೆ. ಈ ವಿಡಿಯೋವನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಡೈಲಾಗ್ ವಾರ್ ಶುರುವಾಗಿ ಹೋಯ್ತಾ? ಇಂತಹದ್ದೊಂದು ಅನುಮಾನವಂತೂ ಮೂಡಿದೆ. ಯಾರು ಯಾರಿಗೋ ಗೊತ್ತಾಗದಂತೆ ಡೈಲಾಗ್ ಬಿಡ್ತಿದ್ದಾರೆ. ಈ ಹಿಂದೆ ತಮ್ಮ ಸಿನಿಮಾಗಳಲ್ಲಿ ಡೈಲಾಗ್ ಹೊಡೆದು ಟಾಂಗ್ ಕೊಡುತ್ತಿದ್ದರು. ಆದ್ರೀಗ ವೇದಿಕೆ ಮೇಲೆ ಡೈಲಾಗ್‌ ಹೊಡೆದು ಟಾಂಗ್ ಕೊಡುವವರೆಗೂ ಬಂದಿದೆ.

ಅಷ್ಟಕ್ಕೂ ಧ್ರುವ ಸರ್ಜಾ ಹೇಳಿದ ಕೆಡಿ ಸಿನಿಮಾದ ಡೈಲಾಗ್ ಹೀಗಿದೆ. "ನನ್ನ ಹೊಡಿಬೇಕು ಅಂತ ಮಚ್ಚು ತಟ್ಟೋರಿಗೆಲ್ಲ ಕೆಲ್ಸ ಕೊಟ್ಟವ್ರೆ.. ಆದರೆ, ನಾನ್ ಒಂದ್ ಸಲ ಮಚ್ಚ್ ಹಿಡುದ್ರೆ ಈ ಊರಲ್ಲಿ ಹೆಣ ಸುಡೋರೆಲ್ಲಾ ಬ್ಯೂಸಿ ಆಗೋಗ್ತಾರೆ ಅಣ್ಣಾ... " ಇದು ಧ್ರುವ ವೇದಿಕೆ ಮೇಲೆ ಬಿಟ್ಟು ಪವರ್‌ಫುಲ್ ಡೈಲಾಗ್. ಇದೇ ಡೈಲಾಗ್ ಇಟ್ಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸೋಕೆ ಶುರು ಮಾಡಿದ್ದಾರೆ.

ಧ್ರುವ ಸರ್ಜಾ ಅಭಿಮಾನಿಗಳ ಖುಷಿಗೆ ಅಂತ ಹೇಳಿದ ಡೈಲಾಗ್ ಈಗ ತೆರೆ ಮರೆಯಲ್ಲಿ ಚರ್ಚೆ ಆಗುವಂತೆ ಮಾಡುತ್ತಿದೆ. ಕಳೆದ ಎರಡು ದಿನಗಳಿಂದ ವೈರಲ್ ಆಗುತ್ತಿರುವ ಈ ಡೈಲಾಗ್ ಅನ್ನು ಧ್ರುವ ತಮ್ಮ ಎದುರಾಳಿಗೆ ಹೇಳಿದ್ದು ಅಂತ ವಾದ ಮಾಡುವ ವರ್ಗವೂ ಸಿಗುತ್ತಿದೆ.

ಇನ್ನೊಂದು ಕಡೆ ಡೈರೆಕ್ಟರ್ ಜೋಗಿ ಪ್ರೇಮ್ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ತಮಗೆ ಆಗದವರಿಗೆ ಟಾಂಗ್ ಕೊಡುವುದಕ್ಕಂತಲೇ ಈ ಡೈಲಾಗ್ ಇಟ್ಟಿರಬಹುದು ಎಂದು ಅಂದಾಜು ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಧ್ರುವ ಹಾಗೂ ಪ್ರೇಮ್ ಇಬ್ಬರಿಗೂ ಒಂದು ಕಾಲದಲ್ಲಿ ವೈರಿಯಾಗಿದ್ದವರಿಗೆ ಈ ಡೈಲಾಗ್ ಇಟ್ಟಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಆದ್ರೀಗ ಪ್ರೇಮ್ ಕಾಂಪ್ರಮೈಸ್ ಆಗಿರೋದ್ರಿಂದ ಸಿನಿಮಾದಲ್ಲಿ ಇರುತ್ತಾ? ಇದು ನಿಜಕ್ಕೂ ಈಗಾಗಲೇ ಮಚ್ಚು ಹಿಡಿದು ಹೀರೊಗೆ ಬಿಟ್ಟ ಡೈಲಾಗಾ? ಇಲ್ಲಾ ಇತ್ತೀಚೆಗೆ ಮಚ್ಚು ಹಿಡಿಯುತ್ತಿರುವ ಹೀರೊಗಳಿಗೆ ಬಿಟ್ಟಿರೋ ಡೈಲಾಗಾ? ಧ್ರುವ ಫ್ಯಾನ್ಸ್ ಗೆಸ್ ಮಾಡಿದ್ದು ನಿಜನಾ? ಈ ಪ್ರಶ್ನೆಗೆ ನೇರವಾಗಿ ಉತ್ತರ ಖಂಡಿತಾ ಸಿಗೋದಿಲ್ಲ..

More from Filmibeat

English summary
Viral: Dhruva Sarja give a tucker to someone through the KD dialogue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X