ಅಬ್ಬಬ್ಬಾ..ಎಲ್ಲರ ಬುದ್ದಿವಂತಿಕೆಗೆ ಸವಾಲು ಹಾಕಿ, ಜೈಲಿಂದನೇ ತಮ್ಮ ಭಕ್ತಗಣಕ್ಕೆ 04 ಸಂದೇಶ ಕಳುಹಿಸಿದ ದರ್ಶನ್...?
ಜೈಲು ಅನ್ನುವುದು ಕೇವಲ ಹೆಸರಿಗೆ ಮಾತ್ರ. ಕೈಯಲ್ಲಿ ಕಾಸು ಇದ್ದರೆ, ಹೆಸರು ಇದ್ದರೆ.. ಕೊಲೆಗಡುಕನೆಂಬ ಆರೋಪವನ್ನೊತ್ತ ಮತ್ತು ಸೈಕೋಪಾಥ್‌ಗಳಿಗೆ, ಕ್ರಿಮಿನಲ್‌ಗಳಿಗೆ, ಆ ಜೈಲು ಅನ್ನುವುದು ಹೋಮ್ ಸ್ಟೇ ನಂತೆ ಅನ್ನುವುದು ಕಾಲ ..ಕಾಲಕ್ಕೆ .. ಸಾಬೀತಾಗುತ್ತಾನೇ ಬಂದಿದೆ. ಮೊನ್ನೆಯ ದಿನ ಪರಪ್ಪನ ಅಗ್ರಹಾರದಿಂದ ತೇಲಿಕೊಂಡು ಬಂದ ದರ್ಶನ್ ಫೋಟೋ ಇದಕ್ಕೆ ಇನ್ನೊಂದು ನಿದರ್ಶನ.
ಆದರೂ.. ನಮ್ ಬಾಸ್ ಯಾವ ತಪ್ಪು ಮಾಡಿಲ್ಲ ಎಂದು ಮೊಂಡ ವಾದವನ್ನು ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳು ಮಾಡುತ್ತಿದ್ದಾರೆ. ಇರಲಿ.. ತಪ್ಪು ಅವರದ್ದಲ್ಲ. ಯಾಕೆಂದರೆ ''ಯಥಾ ರಾಜಾ ತಥಾ ಪ್ರಜಾ'' ಎಂಬಂತೆ ಹೊಡಿ-ಬಡಿ-ಕಡಿ ಎಂಬ ಸಂಸ್ಕ್ರತಿಯನ್ನು ಅವರ ನೆಚ್ಚಿನ ನಟನೇ ಅನುಸರಿಸಿರುವಾಗ ಅವರ ಅನುಯಾಯಿಗಳು ಕೂಡ ಅದಕ್ಕೆ ಶರಣಾಗುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ . ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡೂವರೆ ತಿಂಗಳಿನಿಂದ ಜೈಲಿನಲ್ಲಿರುವ ದರ್ಶನ್ ಅವರ ಮುಖದಲ್ಲಿ ಕೂಡ ಪಶ್ಚಾತಾಪ ಇಲ್ಲ. ನಮ್ಮ ನಾಯಕನ ಮೇಲೆ ಕೊಲೆ ಆರೋಪ ಇದೆ ಅನ್ನುವ ಬೇಸರ ಕೂಡ ಅವರ ಅಭಿಮಾನಿಗಳಲ್ಲಿ ಇಲ್ಲ.

ಹೀಗಾಗಿಯೇ ರಾಜ ಯಾವತ್ತಿದ್ದರೂ/ ಎಲ್ಲಿದ್ದರೂ ರಾಜಾ ಎಂಬ ಘೋಷವಾಕ್ಯವನ್ನು ಹೇಳುತ್ತಾ ಸನ್ಮಾನ್ಯ ದಾಸನ ಅಭಿಮಾನಿಗಳು ಎಲ್ಲೆಂದರಲ್ಲಿ ತಿರುಗುತ್ತಿದ್ದಾರೆ. ಜೈಲಿನ ಮುಂದೆ ಬಂದು ಬಿಡಾರ ಹೂಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೇರೆಯವರ ಬಗ್ಗೆ ವಿಷ ಕಾರುತ್ತಿದ್ದಾರೆ. ಈ ವಿಚಾರ ದರ್ಶನ್ ಅವರಿಗೆ ಗೊತ್ತೋ, ಗೊತ್ತಿಲ್ಲವೋ ಗೊತ್ತಿಲ್ಲ. ಆದರೆ.. ಮನೆಗೆ ಮಕ್ಕಳಾಗದ, ತಮ್ಮಂತೆಯೇ ದಾರಿ ತಪ್ಪಿದ ತಮ್ಮ ಅಭಿಮಾನಿಗಳಿಗೆ ದರ್ಶನ್ ಬಳ್ಳಾರಿಯ ಜೈಲಿಂದ ಸೀದಾ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ಹೀಗೊಂದು ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ.
ಹೌದು, ಅಸಲಿಗೆ ಪರಪ್ಪನ ಅಗ್ರಹಾರದಲ್ಲಿ ದಿಲ್‌ದಾರ್ ಆಗಿ ಜೀವನವನ್ನು ನಡೆಸಿ ಇಲ್ಲ ಸಲ್ಲದ ವಿವಾದಗಳನ್ನು ಮೈಮೇಲೆ ಎಳೆದುಕೊಂಡು, ಇವತ್ತು ಬಟ್ಟೆ ಬರೇಯ ಸಮೇತ, ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್ ಬೆಳ್ಳಿಗ್ಗೆ ಜೈಲಿನೊಳಗೆ ಬಲಗಾಲಿಡುವ ಮುನ್ನ ಟೀ ಶರ್ಟ್‌ವೊಂದನ್ನು ಧರಿಸಿದ್ದರು. ವಿಪರ್ಯಾಸ ಅಂದರೆ ಆ ಟೀ ಶರ್ಟ್ ಮೇಲೆ ಜಸ್ಟೀಸ್, ಡಿಗ್ನಿಟಿ, ಇಕ್ವಾಲಿಟಿ, ಪೀಸ್ ಎಂದು ಬರೆಯಲಾಗಿತ್ತು.

ಇನ್ನೂ ದುರಂತ ಅಂದರೆ ಯಾರಿಗೆ ಆಗಲಿ ಕೊಲೆ ಆರೋಪವನ್ನೊತ್ತ ಒಬ್ಬ ವ್ಯಕ್ತಿ ನ್ಯಾಯ, ಘನತೆ, ಸಮಾನತೆ, ಮತ್ತು ಶಾಂತಿಯ ಸಂದೇಶವನ್ನೊತ್ತು ತಿರುಗಾಡಿದರೆ ಅದು ಕಾಮಿಡಿ ಎಂಬಂತೆ ಕಾಣುತ್ತೆ. ಆದರೆ ದರ್ಶನ್ ಅವರ ಅಭಿಮಾನಿಗಳಿಗೆ ಇದು ಕಾಮಿಡಿ ಎಂದು ಅನಿಸಲಿಲ್ಲ. ಇದು ನಮ್ಮ ನೆಚ್ಚಿನ ನಾಯಕನ ಬದುಕಿನ ಬಹುದೊಡ್ಡ ಟ್ರ್ಯಾಜಿಡಿ ಎಂಬ ಭಾವನೆ ಕೂಡ ಇವರ ಅಭಿಮಾನಿಗಳಲ್ಲಿ ಮೂಡಿಲ್ಲ.
ಹೀಗಾಗಿಯೇ ಆ ಕಡೆ ದರ್ಶನ್ ಬಳ್ಳಾರಿಯ ಭವ್ಯವಾದ ಜೈಲು ಕಣ್ತುಂಬಿಕೊಂಡ ಕೆಲವೇ ಘಂಟೆಯಲ್ಲಿ, ಬಾಸ್ ಕಳುಹಿಸಿದ ಸಂದೇಶ ತಮಗೆ ತಲುಪಿದೆ ಎಂಬಂತೆ ದರ್ಶನ್ ಅವರ ಅಧಿಕೃತ ಅಭಿಮಾನಿ ಸಂಘವಾದ ಡಿ ಕಂಪನಿ ಇಂದು ಪ್ರಕಣಟೆಯನ್ನು ಹೊರಡಿಸಿದೆ. ಡಿಬಾಸ್ ಸೆಲೆಬ್ರಿಟಿಗಳಲ್ಲಿ ವಿನಂತಿ. ಸಮಸ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳಲ್ಲಿ ವಿನಂತಿ. ನಮ್ಮ ಪ್ರೀತಿಯ ಡಿ ಬಾಸ್ ರವರು ಆರೋಪ ಮುಕ್ತರಾಗಿ ಬರುವವರೆಗೂ ಯಾವೂದೇ ಮಾಧ್ಯಮ, ಹಾಗೂ ಬೇರೆ ನಟರುಗಳ ಅಭಿಮಾನಿಗಳ ಕ್ರಿಯೆಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕಾಗಿ ವಿನಂತಿ. ನಮ್ಮಿಂದ ಬಾಸ್ ಗೆ ಯಾವುದೇ ತೊಂದರೆಯಾಗದಿರಲಿ ಎಂದು ಪೋಸ್ಟ್ ಮಾಡಿದೆ.
ದರ್ಶನ್ ಹಾಕಿಕೊಂಡ ಟೀ ಶರ್ಟ್ ಮತ್ತು ಡಿ ಕಂಪನಿ ಹಂಚಿಕೊಂಡ ಈ ಫೋಸ್ಟ್ ನೋಡಿದರೆ, ಹೇಗೇ ನೋಡಿದರೂ ಕೂಡ ತಾಳೆಯಾಗುತ್ತೆ. ಹೀಗಾಗಿಯೇ ಕೊಲೆ ಆರೋಪವನ್ನೊತ್ತು ರಾಜ್ಯದ ಜೈಲಿನ ದರ್ಶನಗಳನ್ನು ಮಾಡುತ್ತಿರುವ ದರ್ಶನ್ ನ್ಯಾಯ-ನೀತಿ-ಧರ್ಮದ ಪಾಠವನ್ನೂ ಮಾಡಲು ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಬೇಕು ಬೇಕೆಂದೇ ದರ್ಶನ್ ಇವತ್ತು ಈ ಟೀ ಶರ್ಟ್ ಹಾಕಿಕೊಂಡಿರಬಹುದು ಎನ್ನುವ ಅನುಮಾನ ಈಗ ಅನೇಕರಲ್ಲಿ ಮನೆ ಮಾಡಿದೆ. ಇವೆಲ್ಲ ಕಾರಣಗಳಿಂದ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ಮುಂದೊಂದು ದಿನ ರಾಜಕಾರಣಿಯಾದರೂ ಅದರಲ್ಲಿ ಆಶ್ಚರ್ಯ ಇಲ್ಲ ಎನ್ನುವ ಅಭಿಪ್ರಾಯ ಸದ್ಯಕ್ಕೆ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











