ಜೈಲಿಂದ ಹೊರ ಬಂದ ಬಳಿಕ ಸೆಲೆಬ್ರೇಷನ್ ಮೂಡ್‌ನಲ್ಲಿ ಪವಿತ್ರಾ ಗೌಡ...!
ದರ್ಶನ್ ಪಾಲಿಗೆ ಮಗ್ಗಲ ಮುಳ್ಳು ಆದವರು ಪವಿತ್ರಾ ಗೌಡ. ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿದ ಕುಖ್ಯಾತಿ ಹೊಂದಿರುವ ಪವಿತ್ರಾ ಗೌಡಗೆ ಇಂದು ಜನುಮದಿನದ ಸಂಭ್ರಮ. ಈ ಸಂಭ್ರಮವನ್ನು ಇವರ ಮಗಳು ಇನ್ನೂ ಹೆಚ್ಚಿಸಿದ್ದಾರೆ. ತಮ್ಮ ಅಮ್ಮನಿಗೆ ಶುಭಾಶಯವನ್ನು ಕೋರಿದ್ದಾರೆ.
ಮಗಳು ತಮ್ಮ ಬರ್ತ್‌ಡೇಗೆ ವಿಶ್ ಮಾಡಿದ ವಿಡಿಯೋವನ್ನು ಪವಿತ್ರಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸೆರೆವಾಸ ಮುಗಿಸಿ ಬಂದ ನಂತರ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಮರು ಚಾಲನೆ ನೀಡಿದ್ದಾರೆ. ಇನ್ಸ್ಟಾಗ್ರಾಮ್‌ಗೆ ಮರಳಿ ಬಂದಿದ್ದಾರೆ. ಪವಿತ್ರಾ ಗೌಡಗೆ ಜೈಲಿನ ದರ್ಶನ ಮಾಡಿಸಿದ್ದು ಇದೇ ಇನ್ಸ್ಟಾಗ್ರಾಮ್‌ನ ಸಹವಾಸ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ.

ಹ್ಯಾಪಿ ಬರ್ತ್ ಡೇ ಅಮ್ಮ, ಕಳೆದ ವರ್ಷ ನೀವು ನಿಮ್ಮ ಬದುಕಿನ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದ್ರಿ. ಹೊಸ ವರ್ಷ 2025 ಸಂಪೂರ್ಣ ಭಿನ್ನವಾಗಿರಲಿದೆ. ನಾನು ನಿಮಗೆ ಭರವಸೆ ನೀಡುತ್ತೇನೆ ಮುಂದೊಂದು ದಿನ ನೀವು ಹೆಮ್ಮೆ ಪಡುವಂತೆ ನಾನು ಬೆಳೆಯುತ್ತೇನೆ ಎಂದು ಪವಿತ್ರಾ ಗೌಡ ಅವರ ಮಗಳು ಶುಭಾಶಯವನ್ನು ಕೋರಿದ್ದಾರೆ.
ಇನ್ನು, ಜೈಲಿಂದ ಹೊರ ಬಂದು ಹೊಸ ಬದುಕು ಶುರು ಮಾಡಿರುವ ಪವಿತ್ರಾ ಗೌಡ ಕಳೆದ ವರ್ಷ ಈ ಸಮಯದಲ್ಲಿ ತಮ್ಮ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ತಮ್ಮ ಆಪ್ತರಿಗೆಲ್ಲ ಬರ್ತ್ ಡೇ ಪಾರ್ಟಿಯನ್ನು ನೀಡಿದ್ದರು. ಕಳೆದ ವರ್ಷ ಪವಿತ್ರಾ ಗೌಡ ಅವರ ಈ ಸಂಭ್ರಮ-ಸಡಗರದಲ್ಲಿ ಮೇಘಾ ಶೆಟ್ಟಿ ಸೇರಿ ಚಿತ್ರರಂಗದ ಅನೇಕರು ಭಾಗಿಯಾಗಿದ್ದರು. ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಆದರೆ ಈ ಬಾರಿ ಕಳೆದ ವರ್ಷ ಕಂಡ ಸಂಭ್ರಮದ ವಾತಾವರಣ ಸದ್ಯಕ್ಕಂತೂ ಕಂಡು ಬರುತ್ತಿಲ್ಲ.
ಇನ್ನು, ಜೈಲಿನ ದರ್ಶನ ಪಡೆದು ಪವಿತ್ರಾ ಹೊರ ಬಂದ ನಂತರ ಒಮ್ಮೆಯೂ ಪವಿತ್ರಾ ಗೌಡಗೆ ಅವರ ಪ್ರೀತಿಯ ಸುಬ್ಬ ದರ್ಶನವನ್ನು ನೀಡಿಲ್ಲ. ಬಹುಶಃ ಅಪವಿತ್ರ ಸಂಬಂಧವನ್ನು ಮೊದಲಿನಂತೆ ನಿಭಾಯಿಸಿಕೊಂಡು ಬಂದಿದ್ದರೆ ಇಷ್ಟೊತ್ತಿಗೆಲ್ಲ ಪವಿತ್ರಾ ಗೌಡ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್ ಭಾಗಿಯಾದ ಫೋಟೊಗಳು ಟ್ರೋಲಿಗರಿಗೆ ಕಾಲೆಳೆಯುವರಿಗೆ ಆಹಾರವಾಗಿರುತ್ತಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗಿರುತ್ತಿದ್ದವು. ಆದರೆ ಈಗ ಸಮಯ ಮತ್ತು ಸಂದರ್ಭ ಬದಲಾಗಿದೆ. ಈ ಕಾರಣಕ್ಕೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಬ್ಬನನ್ನು ಸುಬ್ಬಿ ಮಿಸ್ ಮಾಡಿಕೊಳ್ಳುತ್ತಿರಬಹುದು ಎನ್ನುವ ಮಾತು ಸದ್ಯ ಪವಿತ್ರಾ ಗೌಡ ನಿವಾಸದ ಸುತ್ತ ಮುತ್ತ ಕೇಳಿ ಬರುತ್ತಿದೆ. ಯಾರಿಗೆ ಗೊತ್ತು, ವಿಜಯಲಕ್ಷ್ಮಿ ಅವರಿಗೆ ಗೊತ್ತಾಗದಂತೆ ಪವಿತ್ರಾ ಗೌಡ ಅವರಿಗೆ ದರ್ಶನ್ ಶುಭ ಕೋರಿದ್ದರು ಕೋರಿರಬಹುದು.
ಅಂದ್ಹಾಗೇ ಈ ಜನವರಿ 24ಕ್ಕೆ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂಧಕ್ಕೆ ಹನ್ನೊಂದು ವರ್ಷಗಳಾಗಲಿವೆ. ಕಳೆದ ವರ್ಷ ಜನವರಿ 24ರಂದು ತಮ್ಮ ರಿಲೇಶನ್ ಶಿಪ್‌ಗೆ ಹತ್ತು ವರ್ಷ ತುಂಬಿದ್ದ ಹಿನ್ನೆಲೆ ಇನ್ಸ್ಟಾಗ್ರಾಮ್‌ನಲ್ಲಿ ಪವಿತ್ರಾ ಗೌಡ ಸಂಭ್ರಮವನ್ನು ವ್ಯಕ್ತಪಡಿಸಿದ್ದರು. ದರ್ಶನ್ ಜೊತೆ ತಾವು ಇರುವ ಫೋಟೊಗಳನ್ನ ಕೊಲಾಜ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ಪವಿತ್ರಾ ಗೌಡ ಅವರ ಈ ಫೋಸ್ಟ್ ದರ್ಶನ್ ಅವರ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಅವರನ್ನು ಕೆರಳಿಸಿತ್ತು. ಪವಿತ್ರಾ ಗೌಡ ಮತ್ತು ವಿಜಯಲಕ್ಷ್ಮಿ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಮರ ಕೂಡ ನಡೆದಿತ್ತು.


Click it and Unblock the Notifications











