ಹೊಂಬಾಳೆ ಫಿಲ್ಮ್ಸ್- ರಿಷಬ್ ಶೆಟ್ಟಿ ಮಧ್ಯೆ ಬಿರುಕು? ಅನ್‌ಫಾಲೋ ಮಾಡಿದ ಡಿವೈನ್ ಸ್ಟಾರ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ' ಸರಣಿ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ರಿಷಬ್ ಶೆಟ್ಟಿ ಜೀವನ ಬದಲಿಸಿದ ಸಿನಿಮಾಗಳಿವು. ಕೋವಿಡ್ ಸಮಯದಲ್ಲಿ ಶುರುವಾಗಿದ್ದ 'ಕಾಂತಾರ' ಸಿನಿಮಾ ಹಿಟ್ ಆಗಿ ಬಳಿಕ ಚಾಪ್ಟರ್-1 ಮಾಡುವಂತಾಯಿತು. ಹೊಂಬಾಳೆ ಸಂಸ್ಥೆ ಇದಕ್ಕೆ ಬೆನ್ನೆಲುಬಾಗಿ ನಿಂತಿತ್ತು.
ವಿಜಯ್ ಕಿರಗಂದೂರ್ ನಿರ್ಮಾಣದ 'ಕಾಂತಾರ' ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆದವು. ವಿದೇಶದ ಭಾಷೆಗಳಿಗೆ ಡಬ್ ಆಗಿತ್ತು. ವಿಜಯ್ ಕಿರಗಂದೂರ್ ಹಾಗೂ ರಿಷಬ್ ಶೆಟ್ಟಿ ನಡುವೆ ಆತ್ಮೀಯ ಸ್ನೇಹ ಇದೆ. ಅಣ್ಣ ತಮ್ಮಂದಿರಂತೆ ಇದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಾಗೂ ಕಾಂತಾರ ಚಿತ್ರದ ಅಕೌಂಟ್‌ಗಳನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ ಎಂದು ಚರ್ಚೆ ಆಗ್ತಿದೆ.

ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ನಡುವೆ ಎಲ್ಲವೂ ಚೆನ್ನಾಗಿದೆ ಅಲ್ವಾ? ಹಾಗಿದ್ರೆ ಯಾಕೆ ಅನ್‌ಫಾಲೋ ಮಾಡಿದ್ರು ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ರಿಷಬ್ ಶೆಟ್ಟಿಗೆ 1.7 ಮಿಲಿಯನ್ ಫಾಲೊವರ್ಸ್ ಇದ್ದಾರೆ. ಆದರೆ ಅವರು 140 ಮಂದಿ ಅಕೌಂಟ್ ಫಾಲೋ ಮಾಡುತ್ತಿದ್ದಾರೆ. ಸದ್ಯ ಅದರಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರು ಕಾಣಿಸ್ತಿಲ್ಲ.
ಸದ್ಯ ರಿಷಬ್ ಶೆಟ್ಟಿ ಅವರ ಡಿಜಿಟಲ್ ಟೀಂ ಇನ್‌ಸ್ಟಾಗ್ರಾಮ್ ಅಕೌಂಟ್ ಹ್ಯಾಂಡಲ್ ಮಾಡ್ತಿದೆ. ಪ್ರಗತಿ ಶೆಟ್ಟಿ ಕೂಡ ಹೊಂಬಾಳೆ ಫಿಲ್ಮ್ಸ್ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಫೇಸ್‌ಬುಕ್‌ನಲ್ಲಿ ವಿಜಯ್ ಕಿರದಂಗೂರ್ ಅವರ ಅಕೌಂಟ್ ಅನ್ನು ರಿಷಬ್ ಶೆಟ್ಟಿ ಫಾಲೋ ಮಾಡುತ್ತಿದ್ದಾರೆ. ಹಾಗಾಗಿ ಭಿನ್ನಾಭಿಪ್ರಾಯ ಎನ್ನುವುದೆಲ್ಲಾ ಸುಳ್ಳು ಎನ್ನಲಾಗ್ತಿದೆ.

ಇತ್ತ ಹೊಂಬಾಳೆ ಫಿಲ್ಮ್ಸ್ ಇನ್‌ಸ್ಟಾಗ್ರಾಮ್ ಅಕೌಂಟ್ ಕೂಡ ರಿಷಬ್ ಶೆಟ್ಟಿ ಅಕೌಂಟ್ ಅನ್ನು ಫಾಲೋ ಮಾಡ್ತಿದೆ. ಹಾಗಾಗಿ ಭಿನ್ನಾಭಿಪ್ರಾಯ ಎನ್ನುವುದೆಲ್ಲಾ ಸುಳ್ಳು ಎನ್ನುವುದು ಸ್ಪಷ್ಟವಾಗುತ್ತಿದೆ. ಅದೇ ರೀತಿ 'ಕಾಂತಾರ ಫಿಲ್ಮ್' ಅಕೌಂಟ್ ಕೂಡ ರಿಷಬ್ ಶೆಟ್ಟಿ ಅಕೌಂಟ್ ಫಾಲೋ ಮಾಡ್ತಿದೆ. ರಿಷಬ್ ಆಪ್ತ ಪ್ರಮೋದ್ ಶೆಟ್ಟಿ ಕೂಡ ಹೊಂಬಾಳೆ ಫಿಲ್ಮ್ಸ್ ಅಕೌಂಟ್ ಫಾಲೋ ಮಾಡ್ತಿದ್ದಾರೆ. ಹಾಗಾಗಿ ಈ ಮುನ್ನ ಹೊಂಬಾಳೆ ಅಕೌಂಟ್ ಅನ್ನು ರಿಷಬ್ ಶೆಟ್ಟಿ ಫಾಲೋ ಮಾಡ್ತಿದ್ರಾ? ಇಲ್ವಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲೇ 'ಕಾಂತಾರ- 2' ಸಿನಿಮಾ ಮಾಡುವುದಾಗಿ ರಿಷಬ್ ಸುಳಿವು ಕೊಟ್ಟಿದ್ದಾರೆ. ಆದರೆ ಯಾವಾಗ ಎನ್ನುವುದು ಮಾತ್ರ ಗೊತ್ತಿಲ್ಲ. ಅಂದಹಾಗೆ ಚಾಪ್ಟರ್-1 ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದೆ.
'ಜೈ ಹನುಮಾನ್' ಬಳಿಕ ಒಂದು ಪೌರಾಣಿಕ ಚಿತ್ರವನ್ನು ನಿರ್ದೇಶನ ಮಾಡಲು ರಿಷಬ್ ಶೆಟ್ಟಿ ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮಲಯಾಳಂ ಭಾಷೆಯ 'ರಾಂಡಾಮೂಳಂ' ಕಾದಂಬರಿಯನ್ನು ರಿಷಬ್ ಶೆಟ್ಟಿ ಸಿನಿಮಾ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ. ಕೆಲ ವರ್ಷಗಳ ಹಿಂದೆ 1000 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಘೋಷಣೆ ಆಗಿತ್ತು. ಬಳಿಕ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿತ್ತು. ಅದೇ ಚಿತ್ರಕ್ಕೆ ರಿಷಬ್ ಜೀವ ಕೊಡುತ್ತಾರೆ ಎನ್ನಲಾಗ್ತಿದೆ. ಆದರೆ ಇದೆಲ್ಲ ಸುಳ್ಳು ವದಂತಿ ಎಂದು ಪ್ರಮೋದ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











