"ಮೆಸೇಜ್ ಕೊಟ್ಟೆ ಮನೆಗೆ ಕಳಿಸಿದ್ರು.. ಮಚ್ಚು ಹಿಡಿದವ್ರನ್ನು ನಂ 1, ನಂ 2 ಮಾಡಿದ್ರು"; ದರ್ಶನ್‌ಗೆ ಕಿಚ್ಚ ಸ್ಟ್ರೈಟ್ ಹಿಟ್?
ಡಿಸೆಂಬರ್ ತಿಂಗಳು ಕನ್ನಡ ಚಿತ್ರರಂಗಕ್ಕೆ ಅದೃಷ್ಟದ ತಿಂಗಳು ಆಗಬಹುದಾ? ಈ ಪ್ರಶ್ನೆಗೆ ಎರಡು ಸಿನಿಮಾಗಳಿಂದ ಉತ್ತರ ಸಿಗಬೇಕಿದೆ. ರಿಯಲ್‌ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ 'ಯುಐ' ಸಿನಿಮಾ ಇದೇ ಡಿಸೆಂಬರ್‌ಗೆ ರಿಲೀಸ್ ಆಗುತ್ತಿದೆ. 'ಯುಐ' ರಿಲೀಸ್ ಆದ ಐದು ದಿನಗಳ ಅಂತರದಲ್ಲಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.
ಕನಿಷ್ಟ ಎರಡು ವಾರಗಳ ಅಂತರ ಕೊಟ್ಟು ಸ್ಟಾರ್‌ಗಳ ಸಿನಿಮಾ ಬಿಡುಗಡೆಯಾಗಬೇಕು ಅನ್ನುವುದು ಚಿತ್ರರಂಗವೇ ಮಾಡಿಕೊಂಡಿರುವ ಒಡಂಬಡಿಕೆ. ಇದು 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾ ವಿಚಾರದಲ್ಲಿ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಿಂಗಳ ಕೊನೆಯಲ್ಲಿ ಎರಡು ಸೂಪರ್‌ಸ್ಟಾರ್‌ಗಳನ್ನು ನೋಡುವುದಕ್ಕೆ ಕನ್ನಡ ಸಿನಿಪ್ರಿಯರಿಗೆ ಸಿಗಲಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಡಬಲ್ ಧಮಾಕಾ ಸಿಗೋದು ಗ್ಯಾರಂಟಿ.

ಈ ಮಧ್ಯೆ 'ಮ್ಯಾಕ್ಸ್' ಸಿನಿಮಾದಲ್ಲಿ ರಕ್ತಪಾತ, ಹಿಂಸಾಚಾರದಂತಹ ದೃಶ್ಯಗಳಿವೆ. ಇದು ಸಮಾಜಕ್ಕೆ ಮಾರಕ ಅಲ್ಲವೇ ಅನ್ನುವಂತಹ ಪ್ರಶ್ನೆಗಳು ಕಿಚ್ಚನಿಗೆ ಎದುರಾಗಿತ್ತು. ಈ ಪ್ರಶ್ನೆಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರ ಪರೋಕ್ಷವಾಗಿ ದರ್ಶನ್‌ಗೆ ಕೊಟ್ಟಿದ್ದು ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಪತ್ರಕರ್ತರು ಕೇಳಿದ ಪ್ರಶ್ನೆ ಏನು? ಅದಕ್ಕೆ ಕಿಚ್ಚ ಕೊಟ್ಟ ಉತ್ತರವೇನು? ದರ್ಶನ್‌ಗೆ ಲಿಂಕ್ ಆಗಿದ್ದು ಹೇಗೆ? ತಿಳಿಯಲು ಮುಂದೆ ಓದಿ..
ಮಚ್ಚು, ರಕ್ತಪಾತ ಸಿನಿಮಾದಲ್ಲಿ ಯಾಕಿದೆ? ಅನ್ನೋ ಪ್ರಶ್ನೆಗೆ ಕಿಚ್ಚ ಸುದೀಪ್ ತನ್ನದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಸಂದೇಶ ಕೊಟ್ಟ ಓಡಲಿಲ್ಲ. ಕತ್ತಿ ಮಚ್ಚು ಕೊಟ್ಟವರನ್ನು ನಂ 1, ನಂ 2 ಮಾಡಿದ್ದರು ಎಂದಿದ್ದಾರೆ. ಇದು ದರ್ಶನ್‌ಗೆ ಟಾಕ್ ಕೊಡುವುದಕ್ಕೆ ಹೇಳಿದ್ದು ಎಂದು ಹೇಳಲಾಗುದೆ. "ನಾವು ಸ್ವಾತಿಮುತ್ತು ಮಾಡಿದ್ದೇನೆ. ಮೈ ಆಟೋಗ್ರಾಫ್ ಮಾಡಿದ್ದೀನಿ. ಮುಸ್ಸಂಜೆ ಮಾತು ಮಾಡಿದ್ದೀನಿ. ಒಳ್ಳೊಳ್ಳೆ ಸಿನಿಮಾ ಮಾಡಿ ಮೆಸೇಜ್ ಕೊಟ್ಟೆ. ಎಲ್ಲರೂ ಸೇರಿ ಮನೆಗೆ ಕಳುಹಿಸಿದರು. ಆವಾಗ ಕತ್ತಿ, ಮಚ್ಚು ಹಿಡ್ಕೊಂಡವರನ್ನು ನಂ 1, ನಂ 2 ಸ್ಥಾನಕ್ಕೆ ಕೂರಿಸಿದ್ದರು. ನಾನು ಅದೇ ಯೋಚನೆ ಮಾಡಿದೆ. ಬಹುಶ: ಜನರಿಗೆ ಇದೇ ಬೇಕೋ ಏನೋ ಅಂತ. ನನಗೆ ಮೊದಲು ಬುದ್ದಿ ಹೇಳೋದು ನನ್ನ ತಂದೆ ತಾಯಿ ಹೋಗಿ ಕೇಳದೆ. ಅವರು ಅಂದ್ರೆ, ಅಲ್ಲಪ್ಪ ಮನೆಗೆ ಹಾಕುವ ಬಟ್ಟೆ ಮನೆ ಇಟ್ಕೊ. ಹೊರಗಡೆ ಹೋದಾಗ ಅವರಿಗೆ ಹೇಗೆ ಬೇಕೋ ಹಾಗಿರು ಅಂತ. ಆ ತರ ಸಿನಿಮಾ ಮಾಡುವುದಕ್ಕೆ ಹೋಗಿ ಅದರಲ್ಲೂ ಒಂದು ಸಂದೇಶ ಇಟ್ಟಿರುತ್ತೇನೆ. ಒಂದು ಕಲೆ ಇಟ್ಟಿರುತ್ತೇನೆ. ಅದರಲ್ಲೂ ಮಾನವೀಯತೆಯನ್ನು ಇಟ್ಟಿರುತ್ತೇನೆ." ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಟ್ರೈಲರ್ ನೋಡಿ ಬರೀ ಮಚ್ಚು, ರಕ್ತಪಾತ ಇರುತ್ತೆ ಅಂದುಕೊಳ್ಳಬೇಡಿ. ಇದರಲ್ಲಿ ಬೇರೆನೂ ಇರುತ್ತೆ ಎಂದು ಸುದೀಪ್ ಹೇಳಿದ್ದಾರೆ. "ಮಚ್ಚು ನನ್ನ ಕೈಯಲ್ಲಿ ಇದೆ ಅಂತ ಮಾತ್ರಕ್ಕೆ ಟ್ರೈಲರ್ ನೋಡಿ ಯಾಮಾರಬೇಡಿ. ಪಿಕ್ಚರ್ ನೋಡಿ. ಇನ್ನೊಂದು ವಿಷಯ. ಇವತ್ತು ಜನರು ಎಲ್ಲರೂ ಬುದ್ದಿವಂತರು. ಪ್ರಪಂಚದಲ್ಲಿ ಏನೇ ಓಡಲಿ. ನಮಗೆ ಏನು ಬೇಕು ಅಂತ ಗೊತ್ತಿದೆ. ಏನು ತಗೋಬೇಕು ಅನ್ನೋದು ಗೊತ್ತಿದೆ. ಏನು ತಗೋಬೇಕು ಅನ್ನೋದು ಗೊತ್ತಿದೆ. ನಾವು ಅದನ್ನು ಮಾಡಿಕೊಂಡು ಬರುತ್ತೇವೆ. ಸಿನಿಮಾ ಅಂತ ಬಂದಾಗ ಒಂದು ಕಥೆ, ಆ ಕಥೆಗೆ ಏನು ಬೇಕೋ ಅದನ್ನು ಹೇಳಿಕೊಂಡು ಹೋಗುತ್ತೇವೆ." ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಇದೇ ಪ್ರಶ್ನೆಗೆ ಹುಚ್ಚ ಸಿನಿಮಾದ ಪಾತ್ರವನ್ನು ಉದಾಹರಣೆ ಕೊಟ್ಟಿದ್ದಾರೆ. ತನ್ನ ತಲೆಗೆ ಹೊಡೆದವರು ಇನ್ನೂ ಮಾರ್ಕೆಟ್‌ನಲ್ಲಿ ಓಡಾಡಿಕೊಂಡಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. "ರಕ್ತಪಾತನೇ ಸಿನಿಮಾದಲ್ಲಿ ಇಲ್ಲ. ಸಿನಿಮಾದಲ್ಲಿ ಅದೊಂದು ಭಾಗ ಅಷ್ಟೇ. ನನಗೆ ತಾಯಿ ಇದ್ದಾರೆ. ತಾಯಿ ನನಗೆ ಬುದ್ದಿ ಹೇಳುತ್ತಾರೆ. ನಾನು ಯಾರನ್ನೋ ಕಾಪಾಡುತ್ತೇನೆ. ಇನ್ಯಾರೋ ಹೊಟ್ಟೆ ಹಸಿದುಕೊಂಡು ಇರುತ್ತಾರೆ ಅವರಿಗೆ ಊಟ ಹಾಕುತ್ತಿರುತ್ತೇವೆ. ನಾನು ಇಲ್ಲಿವರೆಗೂ ಬರಬೇಕಾದರೆ, ಸ್ಟ್ರೈಟ್ ಆಗಿ ಲಾಂಗು ಮಚ್ಚು ಹಿಡಕೊಂಡು ಬಂದ್ನಾ ಯೋಚನೆ ಮಾಡಿ. ಹುಚ್ಚ ಮಾಡಿದೆ. ಯಾರೋ ಹೊಡೆದರು ಆ ಸಿನಿಮಾದಲ್ಲಿ ಆಸ್ಪತ್ರೆಗೆ ಹೋದೆ. ಏನಾದರೂ ಬೈದ್ನಾ ಆ ಪಿಕ್ಚರ್‌ನಲ್ಲಿ. ಅವರು ಇನ್ನೂ ಮಾರ್ಕೆಟ್‌ನಲ್ಲಿ ಓಡಾಡಿಕೊಂಡೇ ಇದ್ದಾರೆ. ತುಂಬಾ ಒಳ್ಳೆಯವನು ನಾನು. ನಾನು ಅಂತಹದ್ದೆಲ್ಲ ಮಾಡಲ್ಲ." ಎಂದಿದ್ದಾರೆ.
ಶಾಂತಿ ನಿವಾಸ ಯಾಕೆ ಓಡಲಿಲ್ಲ. ಮಾಣಿಕ್ಯ ಯಾಕೆ ಓಡಿತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಮಾಣಿಕ್ಯ ಅಂತ ಒಂದು ಸಿನಿಮಾ ಮಾಡಿದೆ. ಅದು ಇನ್ನೊಂದು ಶಾಂತಿನಿವಾಸ. ಆದರೆ, ಶಾಂತಿನಿವಾಸ ಓಡಲಿಲ್ಲ. ಮಾಣಿಕ್ಯ ಹಂಡ್ರೆಡ್ ಡೇಸ್ ಹೋಯ್ತು. ಯಾಕಂದ್ರೆ ಒಂದು ಚೇಸ್ ಇತ್ತು. ಒಂದು ಫೈಟ್ ಇತ್ತು. ಎರಡು ಹೀರೋಯಿನ್ ಇದ್ದರು. ಅದೆಲ್ಲ ಆಗಿ ಒಂದಿಷ್ಟು ಸಾಂಗ್ಸ್ ಇತ್ತು. ಗ್ಲಾಮರಸ್ ಇತ್ತು. ಹೇಳುವ ರೀತಿ ಹೇಳಿದೆ ಅದು ಓಡ್ತು." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Click it and Unblock the Notifications











