ಮದುವೆ ಆದ ಮೇಲೆ ನಟಿ ಹರಿಪ್ರಿಯಾಗೆ ಏನಾಯ್ತು ಗೊತ್ತಲ್ವಾ - ಭಾವನಾ ರಾಮಣ್ಣ..!
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ.
ಇದಕ್ಕೆ ಕೈಗನ್ನಡಿ ಎಂಬಂತೆ ಭಾಗ್ಯಶ್ರೀಯಿಂದ ಹಿಡಿದು ಟ್ವಿಂಕಲ್ ಖನ್ನಾವರೆಗೆ.. ಆಯೇಶ್ ಟಾಕೀಯಾ ಅವರಿಂದ ಹಿಡಿದು ಆಸಿನ್‌ವರೆಗೆ.. ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ. ಈ ಸಾಲಿಗೆ ಕನ್ನಡ ಚಿತ್ರರಂಗದ ನಾಯಕಿ ಹರಿಪ್ರಿಯಾ ಕೂಡ ಇದ್ದಾರೆ ಎನ್ನುವುದು ಭಾವನಾ ರಾಮಣ್ಣ ಅವರ ಅಭಿಪ್ರಾಯ.

ಹೌದು, ಭಾವನಾ ಕೇವಲ ನಾಯಕಿ - ನಿರ್ಮಾಪಕಿ ಮಾತ್ರ ಅಲ್ಲ ಬದಲಿಗೆ ಬಹುಮುಖ ಪ್ರತಿಭೆ. ಚಿತ್ರರಂಗದಲ್ಲಿ ನಾಯಕಿಯರು ಹತ್ತು ವರ್ಷ ಪೂರೈಸುವುದೇ ಕಷ್ಟ ಎನ್ನುವ ಕಾಲದಲ್ಲಿ ಭಾವನಾ ಕಳೆದ 29 ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಕೇವಲ ಅಭಿನಯ ಮಾತ್ರವಲ್ಲ ಭರತನಾಟ್ಯದ ಮೂಲಕ ಕೂಡ ಗಮನ ಸೆಳೆದಿದ್ದಾರೆ. ಶಾಸ್ತ್ರೀಯ ಸಂಗೀತದತ್ತ ಒಲವು ಬೆಳೆಸಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಜಕೀಯದಲ್ಲಿ ಕೂಡ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡವರು ಭಾವನಾ.
ಇಂಥಾ ಭಾವನಾ ಇತ್ತೀಚೆಗೆ ತಮ್ಮ ಮನದ ಭಾವನೆಗಳನ್ನು ಹೊರ ಹಾಕಿದ್ದರು. ತಾವು ಗರ್ಭಿಣಿ ಎನ್ನುವ ವಿಚಾರ ಹೇಳಿದರು. ಭಾವನಾ ಅವರು ವ್ಯಕ್ತಪಡಿಸಿದ ಈ ಭಾವನೆ ಕುರಿತು ಸದ್ಯ ಹಲವು ಬಗೆಯಲ್ಲಿ ಚರ್ಚೆಯಾಗುತ್ತಿದೆ. ಹಲವರು ಭಾವನಾ ಅವರ ಈ ಧೈರ್ಯ ಮತ್ತು ನಿರ್ಧಾರವನ್ನು ಮೆಚ್ಚಿಕೊಂಡರೆ ಇನ್ನು ಕೆಲವರು ಸಂಸ್ಕಾರ.. ಸಂಸ್ಕ್ರತಿ.. ಸಂಪ್ರದಾಯ.. ಆಚಾರ.. ವಿಚಾರ.. ಎಂದು ವ್ಯಂಗ್ಯವಾಡುತ್ತಿದ್ದಾರೆ. ಇದರ ಬದಲು ಮದುವೆಯೇ ಆಗಬಹುದಿತ್ತಲ್ಲಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಈ ಪ್ರಶ್ನೆಗೆ ಹಲವು ಸಂದರ್ಶನಗಳಲ್ಲಿ ಭಾವನಾ ಉತ್ತರವನ್ನು ನೀಡಿದ್ದು ಮದುವೆಯಾದ ಮೇಲೆ ಚಿತ್ರರಂಗದವರಿಗೆ ಆಗುವ ಸಮಸ್ಯೆಗಳೇನು ಎನ್ನುವುದರ ಕುರಿತು ಭಾವನಾ ''TV9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
''TV9 ಕನ್ನಡ''ಗೆ ನೀಡಿರುವ ಸಂದರ್ಶನಲ್ಲಿ ಈ ಕುರಿತು ಮಾತನಾಡಿರುವ ಭಾವನಾ, ನಾವು ಚಿತ್ರರಂಗದಲ್ಲಿರುವದರಿಂದ ನಮಗೆ ಎಲ್ಲಾ ಕ್ಷೇತ್ರದವರ ಜೊತೆ ಬಾಂಧವ್ಯ ಇರುತ್ತೆ. ಆಪ್ತತೆ ಇರುತ್ತೆ. ನಾವು ಹೆಸರು ಹಣ ನೋಡಿರುತ್ತೇವೆ. ನಾವು ಹೋದಲ್ಲೆಲ್ಲಾ ನಮಗೆ ಮಹತ್ವವನ್ನು ನೀಡುತ್ತಾರೆ. ನಾವು ಯಾರ ಜೊತೆಯೂ ಮುಚ್ಚು ಮರೆ ಮಾಡುವುದಿಲ್ಲ. ಆಪ್ತರನ್ನು ನಾವು ತಬ್ಬಿಕೊಳ್ಳುತ್ತೇವೆ, ತೆರೆಯ ಮೇಲೆ ಕೆಲ ಒಮ್ಮೆ ಅಂಗಾಂಗ ಪ್ರದರ್ಶನವಾಗುವಂತಹ ಬಟ್ಟೆ ಹಾಕಬೇಕಾಗುತ್ತೆ, ಕೆಲ ಒಮ್ಮೆ ಬೇರೆ ತರಹದ ಪಾತ್ರಗಳನ್ನು ಮಾಡಬೇಕಾಗುತ್ತೆ ಎಂದು ಹೇಳಿರುವ ಭಾವನಾ, ಆದರೆ ಮದುವೆಯಾದ ನಂತರ ನಮ್ಮನ್ನು ಕಟ್ಟಿಕೊಂಡ ಗಂಡನಿಗೆ ನನ್ನ ಪತ್ನಿ ಕಲಾವಿದೆ ಎನ್ನುವುದು ಮರೆತು ಹೋಗಿರುತ್ತೆ ಎಂದು ಹೇಳಿದ್ದಾರೆ.

ಮುಂದುವರೆದು ಮದುವೆಯ ನಂತರ ನಮ್ಮ ಗಂಡನಿಗೆ ನಮ್ಮ ನಡೆಯಿಂದ ಇರಿಸು ಮುರಿಸು ಆಗಲು ಶುರುವಾಗುತ್ತೆ ಎಂದಿರುವ ಭಾವನಾ ಕಲಾವಿದೆಯನ್ನು ತೆರೆಯ ಮೇಲೆ ನೋಡುವುದಕ್ಕೂ.. ತೆರೆಯ ಹಿಂದೆ ನೋಡುವುದಕ್ಕೂ.. ಮದುವೆಯ ಮುಂಚೆ ಬೇರೆ ಇರುತ್ತೆ ಆದರೆ ಹೆಂಡತಿಯಂತ ಆದಾಗ ಅವರ ನಿರೀಕ್ಷೆಗಳು ಸಹಜವಾಗಿ ಬೇರೆ ಇರುತ್ತವೆ ಎಂದು ಹೇಳಿದ್ದಾರೆ. ಆಗ ನಾವು ಎಲ್ಲದರಿಂದ ದೂರವಾಗಬೇಕಾಗುತ್ತೆ ಎಂದು ಹೇಳುತ್ತಾ ಹರಿಪ್ರಿಯಾ ಅವರ ಉದಾಹರಣೆಯನ್ನು ಭಾವನಾ ನೀಡಿದ್ದಾರೆ.
ಹರಿಪ್ರಿಯಾ ಇನ್ನೂ ಯಂಗ್ ಆಗಿದ್ದರು ಆದರೆ ಅವರು ಮದುವೆ ನಂತರ ಮೇನ್ಸ್ಟ್ರೀಮ್ನಿಂದ ದೂರ ಆಗಿದ್ದಾರೆ ಎಂದು ಹೇಳಿರುವ ಭಾವನಾ, ಎಷ್ಟು ವರ್ಷ ಕಷ್ಟ ಪಟ್ಟು, ಕಷ್ಟ ಪಟ್ಟು ಒಂದು ಹಂತಕ್ಕೆ ಬಂದಿರುತ್ತೇವೆ ಆದರೆ ಮದುವೆಯ ನಂತರ ಮೇನ್ಸ್ಟ್ರೀಮ್ನಿಂದ ದೂರ ಹೋಗಬೇಕಾಗುತ್ತೆ ಭಾವನಾ ತಮ್ಮ ಮನದ ಬೇಸರವನ್ನು ಹೊರ ಹಾಕಿದ್ದಾರೆ.


Click it and Unblock the Notifications











