twitter
    For Quick Alerts
    ALLOW NOTIFICATIONS  
    For Daily Alerts

    ಪತ್ರಿಕೋದ್ಯಮ ಒಂಥರಾ ಬಿಟ್ಟರೂ ಬಿಡದ ಮಾಯೆ

    By ರಾಜೇಂದ್ರ ಚಿಂತಾಮಣಿ
    |
    <ul id="pagination-digg"><li class="previous"><a href="/news/tv-is-like-god-for-me-sheethal-shetty-interview-078742.html">« Previous</a>

    13. ಸದ್ಯಕ್ಕೆ ನಿರೂಪಣೆಗೆ ತಾತ್ಕಾಲಿಕವಾಗಿ ಗುಡ್ ಬೈ ಹೇಳಲು ಕಾರಣ?
    ಒಮ್ಮೆಮ್ಮೊ ಅನ್ನಿಸುತ್ತಿತ್ತು ಏನ್ಮಾಡ್ತಿದ್ದೀನಿ, ನನ್ನ ಪಯಣ ಎಲ್ಲಿಗೆ ಸಾಗುತ್ತಿದೆ ಎಂದು ಯೋಚನೆ ಆಗುತ್ತಿತ್ತು. ಸದ್ಯಕ್ಕೆ ನಿರೂಪಣೆಗೆ ಗುಡ್ ಬೈ ಹೇಳಲು ಇದೂ ಒಂದು ಕಾರಣ. ದಿನಕ್ಕೆ ಹತ್ತು ಹನ್ನೊಂದು ಗಂಟೆಗಳ ಕಾಲ ಕೆಲಸದಲ್ಲಿ ಕಳೆದುಹೋಗುತ್ತಿದ್ದೆ. ನನಗಾಗಿ, ನನ್ನ ಆರೋಗ್ಯಕ್ಕಾಗಿ ಏನಾದರೂ ಕಲಿಯಬೇಕು ಅನ್ನುವ ಚಡಪಡಿಕೆ ಬೇರೆ ಇತ್ತು...ಹಾಗೆಯೇ ಯಾವುದಕ್ಕೂ ಟೈಮ್ ಸಿಗುತ್ತಿರಲಿಲ್ಲ. ಯಾವಾಗಲೋ ನಿದ್ದೆ ಇನ್ಯಾವಾಗಲೋ ಊಟ. ಇನ್ನು ಮುಂದೆ ನನಗೆ ಇಷ್ಟವಾಗುವಂತೆ ಜೀವನ ಕಳೆಯಬೇಕೆಂದಿದ್ದೇನೆ. ಮುಂದೆ ಸಂಗೀತ ಕಲಿಯಬೇಕೆಂದಿದ್ದೇನೆ. ನನ್ನ ಆರೋಗ್ಯದ ಕಡೆ, ಫಿಟ್ ನೆಸ್ ಕಡೆ ಗಮನಕೊಡುತ್ತೇನೆ.

    14. ಬರವಣಿಗೆಗೂ ಫುಲ್ ಸ್ಟಾಪ್ ಇಟ್ಟಿದ್ದೀರೋ ಹೇಗೆ?
    ಪತ್ರಿಕೋದ್ಯಮದ ನಂಟು ಬಿಡೋದಕ್ಕೆ ಸಾಧ್ಯವೇ ಇಲ್ಲ. ಅದೊಂದು ತರಹಾ ಬಿಟ್ಟರೂ ಬಿಡದ ಮಾಯೆ. ನನ್ನದೇ ಬ್ಲಾಗ್ ಇದೆ. ಶೀತಲ್ ಅಕ್ಷರ ಎಂದು ಹೆಸರು. ನನ್ನ ಫೇಸ್ ಬುಕ್ ನಲ್ಲೂ ಅದರ ಲಿಂಕ್ ಇದೆ. ಬ್ಲಾಗ್ ನಲ್ಲಿ ನನಗನ್ನಿಸಿದ್ದು, ನನ್ನ ಅನುಭವಗಳನ್ನು ಹಂಚಿಕೊಳ್ಳಬೇಕೆಂದಿದ್ದೇನೆ. ಈಗಾಗಲೆ ಒಂದು ಲೇಖನ ಬರೆದಿದ್ದೇನೆ. ಚಿತ್ರೀಕರಣ ಮುಗಿದ ಮೇಲೆ ಮತ್ತೆ ಬರೆಯುತ್ತೇನೆ.

    anchor Sheethal Shetty

    15. ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೀರಿ?
    ಈ ಮುಂಚೆ ನನಗೆ ಟೈಮ್ ಸಿಗುತ್ತಿರಲಿಲ್ಲ. ಈಗ ಸ್ವಲ್ಪ ಸಮಯ ಸಿಗುತ್ತಿದೆ. ನನ್ನನ್ನು ತಾನು ಈಗ ನೋಡಿಕೊಳ್ಳಬೇಕಾಗಿದೆ. ಹಾಗಾಗಿ ಹೆಚ್ಚಾಗಿ ಫೇಸ್ ಬುಕ್ ನಲ್ಲಿ ಆಕ್ಟೀವ್ ಆಗಿದ್ದೇನೆ. ಪ್ರಮೋಷನ್ಸ್ ಗೆ ಫೇಸ್ ಬುಕ್ ಒಂದು ಒಳ್ಳೆಯ ವೇದಿಕೆ. ಅದನ್ನು ನಾನು ಆದಷ್ಟು ಒಳ್ಳೆಯ ರೀತಿಯಲ್ಲೇ ಬಳಸಿಕೊಳ್ಳಬೇಕೆಂದಿದ್ದೇನೆ. ಟ್ವಿಟ್ಟರ್ ನಲ್ಲೂ ಇದ್ದೇನೆ. ಆದರೆ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಫೇಸ್ ಬುಕ್ ನಲ್ಲಿ ನನಗೆ ಹೆಚ್ಚಾಗಿ ಫ್ಯಾನ್ಸ್ ಇದ್ದಾರೆ. ಟ್ವಿಟ್ಟರ್ ನಲ್ಲಿ ಈಗಷ್ಟೇ ಬಂದಿರುವ ಕಾರಣ ಇನ್ನೂ ಅಲ್ಲಿ ಅಷ್ಟಾಗಿ ಫಾಲೋವರ್ಸ್ ಇಲ್ಲ.

    16. ಇಂದಿನ ಕನ್ನಡ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?
    ಈ ಬಗ್ಗೆ ತೀರಾ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಆದರೂ ಮೊದಲಿನ ರೀತಿಯ ಚಿತ್ರಗಳು ಈಗ ಬರುತ್ತಿಲ್ಲ ಎಂಬ ಕೊರಗು ಇದೆ. ಒಳ್ಳೊಳ್ಳೆ ಪ್ರಯತ್ನಗಳು ನಡೆಯುತ್ತಿವೆ. ಪ್ರಯೋಗಾತ್ಮಕ ಚಿತ್ರಗಳು ಈಗ ಬರುತ್ತಿವೆ. ಲೂಸಿಯಾ, ಜಟ್ಟ ರೀತಿಯ ಚಿತ್ರಗಳು ಬರುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಹೊಸಬರ ಪ್ರಯತ್ನಗಳು ಆಶಾಜನಕವಾಗಿವೆ ಎಂದು ಅನ್ನಿಸುತ್ತಿದೆ.

    17. ಮುಂದೆ ಏನಾದರೂ ಚಿತ್ರ ನಿರ್ದೇಶನ ಮಾಡುವ ಆಲೋಚನೆ ಇದೆಯೇ?
    ಆ ರೀತಿನೂ ಮಾಡಬಹುದಾ! ನೀವು ಹೇಳಿದ ಮೇಲೆ ನನಗೆ ಈ ಐಡಿಯಾ ಹೊಳೆಯುತ್ತಿರುವುದು. ನಾನು ನಿರೂಪಕಿಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಇನ್ನು ನಿರ್ದೇಶನದ ಮಾತು ತುಂಬಾ ದೂರವಾಯಿತು. ಹಿಂದೆ ಕಲಿತಿದ್ದನ್ನು ಯಾವತ್ತೂ ಮರೆಯಲ್ಲ, ಮುಂದೆ ಕಲಿಯುವುದನ್ನೂ ಬಿಡಲ್ಲ. ನಿರ್ದೇಶನದ ಅನ್ನುವುದು ಅಷ್ಟು ಸುಲಭ ಅಲ್ಲ. ಎಲ್ಲರೂ ಡೈರೆಕ್ಷನ್ ಮಾಡಲಿಕ್ಕೆ ಹೋಗ್ತಾರೆ. ಆದರೆ ತಾನಂತೂ ಆ ರೀತಿಯ ವ್ಯರ್ಥ ಪ್ರಯತ್ನ ಮಾಡಲ್ಲ. ನೋಡೋಣ ಮುಂದೇನಾಗುತ್ತದೋ.

    <ul id="pagination-digg"><li class="previous"><a href="/news/tv-is-like-god-for-me-sheethal-shetty-interview-078742.html">« Previous</a>

    English summary
    Tv9 Kannada popular anchor Sheethal Shetty now debuts as actress in the Kannada movie 'Ulidavaru Kandante'. Sheethal shares her thoughts, experience, past, present, future with Oneindia. Here are some highlights of the interview.
    Sunday, March 16, 2014, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X