18ಕ್ಕೆ ಮದುವೆ, ಮಗು, ವಿಚ್ಚೇದನ ; ದಿನಸಿ ವ್ಯಾಪಾರಿಯಾಗಿದ್ದರಾ ಪವಿತ್ರಾ ಗೌಡ ಮೊದಲ ಪತಿ..?

By ಫಿಲ್ಮಿಬೀಟ್ ಡೆಸ್ಕ್

ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮೀ ದರ್ಶನ್ ನಡುವೆ ನಡೆಯುತ್ತಿರುವ ಸಾಮಾಜಿಕ ಸಮರ, ಇನ್ನೊಂದು ಹಂತಕ್ಕೆ ತಲುಪಿದೆ. ಅಸ್ತಿತ್ವದ ಉಳಿವಿಗಾಗಿ ಇಬ್ಬರು ಎಚ್ಚರಿಕೆಯ ಘಂಟೆಯನ್ನ ಬಾರಿಸುತ್ತಿದ್ದಾರೆ. ಬಾಳೆಂಬ ಬಂಧನದಲ್ಲಿ ಈಜಬೇಕು ಎಂಬ ನಿರ್ಧಾರಕ್ಕೆ ಪವಿತ್ರಾ ಗೌಡ ಬಂದಿದ್ದರೆ, ವಿಜಯ ಲಕ್ಷ್ಮೀ ಅವರದ್ದು ಸಂಸಾರ ಎಂಬ ಸಾಗರದಲ್ಲಿ ತೇಲುವ ಮನಸು.

ಇನ್ನೂ.. ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರ ನಡುವಿನ ಈ ಸಮರದಿಂದ, 'ಕೋಟಿಗೆ ಒಬ್ಬ ಕುಬೇರ.. ನೋಟಕ್ಕೆ ಒಬ್ಬ ಸುಂದರ'.. ಎಂಬ ಮಾತು ಸದ್ಯಕ್ಕೆ ದರ್ಶನ್ ಅವರಿಗೆ ಹೆಚ್ಚು ಸೂಕ್ತವಾಗ್ತಿದೆ ಅನ್ನುವ ಮಾತು ಸಾರ್ವತ್ರಿಕ ವಲಯದಲ್ಲಿ ಕೇಳಿ ಬರ್ತಿದೆ. ಇದರ ನಡುವೆ ತಮ್ಮ ಮೊದಲ ಮದುವೆಯ ವಿಚಾರವನ್ನ ಖುದ್ದು ಪವಿತ್ರಾ ಗೌಡ ಜಗಜ್ಜಾಹೀರು ಮಾಡಿದ್ದಾರೆ. ಮದುವೆ-ಮಗು-ವಿಚ್ಚೇದನದ ಕಥೆಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಖುಷಿ ಗೌಡ, ದರ್ಶನ್ ಶ್ರೀನಿವಾಸರ ಮಗಳೆಂದು ನಾನು ಎಲ್ಲೂ ಹೇಳಿಲ್ಲ ಎಂದು ಖಂಡ ತುಂಡವಾಗಿ ಪವಿತ್ರಾ ಗೌಡ ಹೇಳಿದ್ದಾರೆ.

Did Pavitra gowda tied knot with sanjay singh at the age of 18..?

ಪವಿತ್ರ ಗೌಡ ಹೊರಡಿಸಿದ ಈ ಸಾರ್ವಜನಿಕ ಪ್ರಕಟಣೆಯಿಂದ, ಈಗ ಪವಿತ್ರಾ ಗೌಡ ಮದುವೆಯಾಗಿದ್ದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸವನ್ನ ಸಾಮಾಜಿಕ ಜಾಲತಾಣದ ಪ್ರವೀಣರು ಮಾಡಲು ಆರಂಭ ಮಾಡಿದ್ದಾರೆ. ಈ ಕೆಲಸದ ಫಲಿತಾಂಶ ಎಂಬಂತೆ ಪವಿತ್ರ ಗೌಡ 18ರ ಪ್ರಾಯದಲ್ಲಿಯೇ ಮದುವೆಯಾಗಿದ್ದರು ಎಂಬ ಮಾತು ಕೇಳಿ ಬರ್ತಿದೆ.

Did Pavitra gowda tied knot with sanjay singh at the age of 18..?

ಇನ್ನೂ ಪವಿತ್ರಾ ಗೌಡ ಹಾಗೂ ಸಂಜಯ್ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್ ಅನ್ನುವುದನ್ನೂ ಕೂಡ ಸಂಶೋಧಿಸಿರುವ ಅನೇಕರು, ಚಾಮರಾಜಪೇಟೆಯಲ್ಲಿ ಈ ಜೋಡಿ ವಾಸವಾಗಿತ್ತು ಅನ್ನುವ ವಿಚಾರವನ್ನೂ ಕೂಡ ಹುಡುಕಿ ತೆಗೆದಿದ್ದಾರೆ. ದಿನಸಿ ಅಂಗಡಿ ವ್ಯಾಪಾರ ಮಾಡ್ತಿದ್ದ ಸಂಜಯ್ ಸಿಂಗ್ ಹಾಗೂ ಪವಿತ್ರಾ ಗೌಡ ಆರಂಭದಲ್ಲಿ ಚೆನ್ನಾಗಿಯೇ ಇದ್ದರು ಆದರೆ ಆ ನಂತರ ದಾಂಪತ್ಯ ಗೀತೆ ಶ್ರುತಿ ತಪ್ಪಿತು ಎಂಬ ಮಾತು ಕೂಡ ರಾಜರಾಜೇಶ್ವರಿ ನಗರದ ಸುತ್ತ ಮುತ್ತ ವ್ಯಾಪಕವಾಗಿ ಕೇಳಿ ಬರ್ತಿದೆ. ಪವಿತ್ರಾ ಗೌಡ ಖುದ್ದು ಹೇಳಿದಂತೆ ಖುಷಿ ಗೌಡ ಇವರಿಬ್ಬರ ಪ್ರೀತಿಯ ಸಂಕೇತ ಅನ್ನುವ ಮಾತನ್ನ ಕೂಡ ಅನೇಕರು ಹೇಳ್ತಿದ್ದಾರೆ.

Did Pavitra gowda tied knot with sanjay singh at the age of 18..?

ಸದ್ಯಕ್ಕೆ ಪವಿತ್ರಾ ಗೌಡ ಸಂಜಯ್ ಸಿಂಗ್ ಅವರಿಂದ ದೂರ ಇದ್ದಾರೆ. ವಿಚ್ಚೇದನ ಪಡೆದು ಪುತ್ರಿ ಜೊತೆ ನೆಮ್ಮದಿಯ ಬದುಕನ್ನ ನಡೆಸುತ್ತಿದ್ದಾರೆ. ಪವಿತ್ರಾ ಗೌಡ ಈ ಮಾತನ್ನ ಖುದ್ದು ಹೇಳಿದ್ದಾರೆ ಕೂಡ. ನಿಜಾ, ಪವಿತ್ರಾ ಗೌಡ ಅವರಿಗೆ ಈ ವಿಚಾರ ದೊಡ್ಡದು ಮಾಡುವ ಮನಸಿಲ್ಲ. ಆದರೂ ಮನಸಿಲ್ಲದಿದ್ದರೂ ವಿಚಾರ ದಿನದಿಂದ ದಿನಕ್ಕೆ ದೊಡ್ಡದಾಗ್ತಿದೆ. ವಿಜಯ ಲಕ್ಷ್ಮೀ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಈ ಸಮರ ಅಂತ್ಯವಾಗುವುದು ಯಾವಾಗ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

More from Filmibeat

English summary
earlier pavitra gowda married sanjay singh who was bussiness man..?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X