ಪುನೀತ್ ಆ ಚಿತ್ರಕ್ಕೂ 'ಲೈಗರ್'ಗೂ ಇದ್ಯಾ ಲಿಂಕ್? ಸೀನ್ To ಸೀನ್ ಪಕ್ಕಾ ಅದೇನಾ?

ಪ್ರೇಕ್ಷಕರು ಈಗ ಸಿಕ್ಕಾಪಟ್ಟೆ ಜಾಣರಾಗಿದ್ದಾರೆ. ಅವರನ್ನು ಯಾಮಾರಿಸೋದು ಅಷ್ಟು ಸುಲಭ ಅಲ್ಲ. ಟ್ರೈಲರ್ ನೋಡಿ ಸಿನಿಮಾ ಕಥೆ ಏನು ಅಂತ ಹೇಳಿಬಿಡ್ತಾರೆ. ಯಾವ ಸಿನಿಮಾದಿಂದ ಕದ್ದಿದ್ದಾರೆ, ಯಾವ ದೇಶದ ಸಿನಿಮಾದಿಂದ ಇನ್‌ಸ್ಪೈರ್ ಆಗಿದ್ದಾರೆ ಅನ್ನೋದನ್ನು ಹಿಂದು ಮುಂದು ನೋಡದೇ ಮುಖಕ್ಕೆ ಹೊಡೆದಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಬಿಡ್ತಾರೆ. ಇತ್ತೀಚೆಗೆ ರಿಲೀಸ್ ಆದ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಟ್ರೈಲರ್ ಸೂಪರ್ ಹಿಟ್ ಆಗಿದೆ. ಪೂರಿ ಜಗನ್ನಾಥ್ ನಿರ್ದೇಶನ ಹಾಗೂ ವಿಜಯ್ ದೇವರಕೊಂಡ ಆರ್ಭಟವನ್ನು ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಆದರೆ ಈಗ ಸಿನಿಮಾ ಕಥೆ ಏನಿರಬಹುದು ಅನ್ನೋದರ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ನಡೀತಿದೆ. ಟ್ರೈಲರ್ ನೋಡಿದವರು ಈ ಕಥೆಯನ್ನು ಎಲ್ಲೋ ನೋಡಿದ್ದೇವಲ್ಲ ಅಂತ ಯೋಚನೆ ಮಾಡೋಕೆ ಶುರು ಮಾಡಿದ್ದಾರೆ. ಒಂದು ಹಂತಕ್ಕೆ ಉತ್ತರ ಕೂಡ ಕಂಡುಕೊಂಡಿದ್ದಾರೆ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ 'ಲೈಗರ್' ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಕಿಕ್ ಬಾಕ್ಸರ್ ಪಾತ್ರದಲ್ಲಿ ಮಿಂಚಿದ್ದು, ಅನನ್ಯಾ ಪಾಂಡೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ತಾಯಿಯಾಗಿ ಪವರ್‌ಫುಲ್ ರೋಲ್‌ನಲ್ಲಿ ರಮ್ಯಾಕೃಷ್ಣ ಮಿಂಚಿದ್ರೆ, ಖ್ಯಾತ ಕಿಕ್ ಬಾಕ್ಸರ್ ಮೈಕ್ ಟೈಸನ್ ಅತಿಥಿ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸೋಕೆ ರೆಡಿಯಾಗಿದ್ದಾರೆ. 'ಲೈಗರ್' ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದ್ದು, ಟ್ರೈಲರ್ ನೋಡಿದವರು ಪುನೀತ್ ರಾಜ್‌ಕುಮಾರ್ ನಟನೆಯ 'ಮೌರ್ಯ' ಸಿನಿಮಾವನ್ನು ನೆನಪಿಸಿಕೊಳ್ಳುವಂತಾಗಿದೆ. ಆ ಚಿತ್ರದಲ್ಲಿ ಪವರ್ ಸ್ಟಾರ್ ಕೂಡ ಕಿಕ್ ಬಾಕ್ಸರ್ ಪಾತ್ರದಲ್ಲಿ ನಟಿಸಿ ಗೆದ್ದಿದ್ದರು.

'ಲೈಗರ್' ಸಿನಿಮಾದಲ್ಲಿರೋ ಕೆಲ ಸನ್ನಿವೇಶಗಳು 'ಮೌರ್ಯ' ಸಿನಿಮಾ ಸನ್ನಿವೇಶಗಳ ರೀತಿ ಇದೆ ಅಂತ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 2004ರಲ್ಲಿ ರಿಲೀಸ್ ಆಗಿದ್ದ 'ಮೌರ್ಯ' ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಮೀರಾ ಜಾಸ್ಮಿನ್ ಮಿಂಚಿದ್ರೆ, ತಾಯಿ ಪಾತ್ರದಲ್ಲಿ ರೋಜಾ ಕಾಣಿಸಿಕೊಂಡಿದ್ದರು. ತಂದೆಯಾಗಿ ಡೈನಾಮಿಕ್ ಸ್ಟಾರ್ ದೇವರಾಜ್ ಖಡಕ್ ಅಭಿನಯ ನೀಡಿದ್ದರು. ಈ 4 ಪಾತ್ರಗಳನ್ನು ಈಗ 'ಲೈಗರ್' ಚಿತ್ರದ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ರಮ್ಯಾಕೃಷ್ಣ ಹಾಗೂ ಮೈಕ್‌ ಟೈಸನ್ ಪಾತ್ರಗಳಿಗೆ ಹೋಲಿಕೆ ಮಾಡಿ ನೋಡಲಾಗುತ್ತಿದೆ. 'ಮೌರ್ಯ' ಸಿನಿಮಾ ಕಥೆಯನ್ನೇ ಕೊಂಚ ಬದಲಿಸಿ ಪೂರಿ ಜಗನ್ನಾಥ್ 'ಲೈಗರ್' ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ ಅನ್ನಿಸುತ್ತಿದೆ. ಕೆಲ ಸನ್ನಿವೇಶಗಳು ಕೂಡ ಮೇಲ್ನೋಟಕ್ಕೆ ಅದೇ ರೀತಿ ಕಾಣುತ್ತಿದೆ.

 'ಸಾಲಾ ಕ್ರಾಸ್‌ ಬ್ರೀಡ್' ಅನ್ನೋದರ ಅರ್ಥವೇನು?

'ಸಾಲಾ ಕ್ರಾಸ್‌ ಬ್ರೀಡ್' ಅನ್ನೋದರ ಅರ್ಥವೇನು?

ಪೂರಿ ಜಗನ್ನಾಥ್ 'ಲೈಗರ್' ಚಿತ್ರಕ್ಕೆ 'ಸಾಲಾ ಕ್ರಾಸ್‌ ಬ್ರೀಡ್' ಅನ್ನುವ ಟ್ಯಾಗ್‌ಲೈನ್ ಕೊಟ್ಟಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ತಾಯಿಯಾಗಿ ರಮ್ಯಾಕೃಷ್ಣ ನಟಿಸಿದ್ದು, ತಂದೆಯಾಗಿ ಮೈಕ್ ಟೈಸನ್ ನಟಿಸಿರುವಂತೆ ಕಾಣುತ್ತಿದೆ. ಕ್ರಾಸ್ ಬ್ರೀಡ್ ಅಂದರೆ ಇಂಡಿಯನ್ ತಾಯಿಗೂ ಫಾರಿನ್ ತಂದೆಗೂ ಹುಟ್ಟಿದ ಮಗನ ಕಥೆನಾ ಅನ್ನೋದು ಸಿನಿಮಾ ರಿಲೀಸ್ ಆದಮೇಲೆ ಗೊತ್ತಾಗಲಿದೆ.

 ಎರಡೂ ಸಿನಿಮಾಗಳಲ್ಲಿ ಕಿಕ್ ಬಾಕ್ಸರ್ ಕಥೆ

ಎರಡೂ ಸಿನಿಮಾಗಳಲ್ಲಿ ಕಿಕ್ ಬಾಕ್ಸರ್ ಕಥೆ

ತಂದೆ ಮೈಕ್ ಟೈಸನ್ ಹಾದಿಯಲ್ಲಿ ಇಂಟರ್‌ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ವಿಜೇತನಾಗುವ 'ಲೈಗರ್' ಕಥೆ ಇದು ಅನ್ನಿಸ್ತಿದೆ. 'ಮೌರ್ಯ' ಚಿತ್ರದಲ್ಲಿ ದೇವರಾಜ್ ಬಾಕ್ಸಿಂಗ್‌ಗಾಗಿ ಪತ್ನಿ ರೋಜಾನ ಬಿಟ್ಟು ಹೋಗುತ್ತಾರೆ. ಇತ್ತ 'ಲೈಗರ್' ಚಿತ್ರದಲ್ಲೂ ರಮ್ಯಾ ಕೃಷ್ಣ ಗಂಡನಿಲ್ಲದೇ ಒಂಟಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದಲ್ಲಿ ಮೈಕ್ ಟೈಸನ್- ರಮ್ಯಾಕೃಷ್ಣ ಗಂಡ-ಹೆಂಡತಿನಾ? ಅನ್ನೋ ಅನುಮಾನ ಮೂಡಿದೆ.

 ತಮ್ಮದೇ ಸಿನಿಮಾ ಕಥೆ ಕದ್ರಾ ಪೂರಿ?

ತಮ್ಮದೇ ಸಿನಿಮಾ ಕಥೆ ಕದ್ರಾ ಪೂರಿ?

ಅಸಲಿಗೆ 'ಮೌರ್ಯ' ಪೂರಿ ಜಗನ್ನಾಥ್ ನಿರ್ದೇಶನದ ತೆಲುಗಿನ 'ಅಮ್ಮ ನಾನ್ನ ಓ ತಮಿಳ್ ಅಮ್ಮಾಯಿ' ಸಿನಿಮಾ ರೀಮೇಕ್ ಆಗಿತ್ತು. ರವಿತೇಜಾ, ಆಸಿನ್, ಜಯಸುಧಾ, ಪ್ರಕಾಶ್ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. 2003ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಕಥೆಯನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ಕನ್ನಡಕ್ಕೆ ತಂದಿದ್ದರು. ಹಾಗಾಗಿ ತಮ್ಮದೇ ಸಿನಿಮಾ ಕಥೆಯನ್ನು ಕೊಂಚ ಅಪ್‌ಡೇಟ್ ಮಾಡಿ ಪೂರಿ ಜಗನ್ನಾಥ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಲು ಮುಂದಾಗಿರುವಂತೆ ಕಾಣುತ್ತಿದೆ.

 ಗಾಸಿಪ್ ಬಗ್ಗೆ ಮೌನ ಮುರಿದ ಪೂರಿ ಜಗನ್ನಾಥ್

ಗಾಸಿಪ್ ಬಗ್ಗೆ ಮೌನ ಮುರಿದ ಪೂರಿ ಜಗನ್ನಾಥ್

'ಲೈಗರ್' ಸಿನಿಮಾ ಕಥೆ ಕಾಪಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಈ ವಿಚಾರವಾಗಿ ಮಾತನಾಡಿರುವ ನಿರ್ದೇಶಕ ಪೂರಿ ಜಗನ್ನಾಥ್ 'ಲೈಗರ್' ಸಂಪೂರ್ಣವಾಗಿ ಹೊಸ ಸಿನಿಮಾ. ತಮ್ಮ ಹಿಂದಿನ ಸಿನಿಮಾಗಳ ಯಾವುದೇ ರೆಫರೆನ್ಸ್ ಇದರಲ್ಲಿ ಇರೋದಿಲ್ಲ. 'ಲೈಗರ್' ಸಂಪೂರ್ಣವಾಗಿ ಸ್ಪೋರ್ಟ್ಸ್ ಡ್ರಾಮಾ ಅಲ್ಲ. ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅಂತ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಇಲ್ಲಿ ಒಳ್ಳೆ ಲವ್ ಸ್ಟೋರಿ ಕೂಡ ಇದೆ.

 ಆಗಸ್ಟ್ 25ಕ್ಕೆ 'ಲೈಗರ್' ಸಿನಿಮಾ ಗ್ರ್ಯಾಂಡ್ ರಿಲೀಸ್

ಆಗಸ್ಟ್ 25ಕ್ಕೆ 'ಲೈಗರ್' ಸಿನಿಮಾ ಗ್ರ್ಯಾಂಡ್ ರಿಲೀಸ್

ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ 'ಲೈಗರ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಪೂರಿ ಕನೆಕ್ಟ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಚಿತ್ರಕ್ಕೆ ಕರಣ್ ಜೋಹರ್, ಪೂರಿ ಜಗನ್ನಾಥ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಹಾಗೂ ಹೀರು ಯಶ್ ಜೋಹರ್ ಬಂಡವಾಳ ಹೂಡಿದ್ದಾರೆ. ಆಗಸ್ಟ್ 25ಕ್ಕೆ ವಿಶ್ವದಾದ್ಯಂತ 'ಲೈಗರ್' ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
Did Puri Jagannadh Copy All These Liger Movie Scenes From Puneeth Rajkumar Maurya Movie. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X