ಅವಧೂತ ವಿನಯ್ ಗುರೂಜಿಯನ್ನು ಅನುಕರಣೆ ಮಾಡಿದರೇ ರಾಜ್ ಬಿ ಶೆಟ್ಟಿ:'ಸು ಫ್ರಮ್ ಸೋ' ನೋಡಿದವರಿಗೆ ಬಂತೇ ಈ ಡೌಟ್?

By ಫಿಲ್ಮಿಬೀಟ್ ಡೆಸ್ಕ್

ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ಸೇರಿ ನಿರ್ಮಿಸಿದ 'ಸು ಫ್ರಮ್ ಸೋ' ಸಿನಿಮಾಗೆ ಕ್ರೇಜಿ ರೆಸ್ಪಾನ್ಸ್ ಸಿಗುತ್ತಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಬಹುತೇಕ ಯುವ ನಟರೇ ಕಾಣಿಸಿಕೊಳ್ಳುವ ಈ ಸಿನಿಮಾ ಕಲೆಕ್ಷನ್ ಯಾವುದೇ ಸೂಪರ್‌ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲ. ಆಮಟ್ಟಿಗೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಹೀಗಾಗಿ ಪರಭಾಷೆಯಲ್ಲಿಯೂ ಈ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ.

ಕರಾವಳಿ ಭಾಗದ ಕಥೆಯೇ ಆಗಿರುವುದರಿಂದ 'ಸು ಫ್ರಮ್ ಸೋ'ನಲ್ಲಿ ನಟಿಸಿರುವವರೆಲ್ಲರೂ ಬಹುತೇಕ ಆ ಭಾಗದವರೇ. ಈ ಹಿಂದೆ ಶೆಟ್ರ ಗ್ಯಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರತಿಭೆಗಳು ಒಟ್ಟಿಗೆ ಸೇರಿ ಈ ಸಿನಿಮಾದಲ್ಲಿ ನಟಿಸಿ ಈಗ ಗೆದ್ದಿದ್ದಾರೆ. ನಿರ್ದೇಶಕ ಜೆಪಿ ತುಮಿನಾಡು ಅವರಿಗೂ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಇನ್ನು ಉಳಿದಂತೆ ಕಲಾವಿದರು ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಚಿಕ್ಕ ಪಾತ್ರಗಳಲ್ಲಿ ಮಿಂಚಿದ್ದರು. ಆದ್ರೀಗ 'ಸು ಫ್ರಮ್ ಸೋ' ಸಿನಿಮಾ ಮೂಲಕ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ.

Did Raj B Shetty imitate Avadhoota Vinay Guruji in the movie Su From So

'ಸು ಫ್ರಮ್ ಸೋ' ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಜನಪ್ರಿಯ ನಟ ರಾಜ್ ಬಿ ಶೆಟ್ಟಿ. ಅದೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರ ಚಿಕ್ಕದಿದ್ದರೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದರಲ್ಲಿ ಇವರು ಹಿಂದೆ ಬಿದ್ದಿಲ್ಲ. ಆದರೆ, ಇವರ ಪಾತ್ರವನ್ನು ನೋಡಿದವರಿಗೆ ರಿಯಲ್ ಲೈಫ್ ಕ್ಯಾರೆಕ್ಟರ್ ಒಬ್ಬರು ಕಣ್ಮುಂದೆ ಬಂದು ಹೋಗುತ್ತಾರೆ. ಸಿನಿಮಾ ನೋಡಿದ ಬಹುತೇಕ ಮಂದಿಗೆ ಒಂದು ಹೆಸರು ಫ್ಲ್ಯಾಶ್ ಆಗಿಯೇ ಆಗುತ್ತೆ. ಹಾಗಿದ್ದರೆ, ರಾಜ್‌ ಬಿ ಶೆಟ್ಟಿ ರಿಯಲ್ ಲೈಫ್ ಕ್ಯಾರೆಕ್ಟರ್‌ ಅನ್ನು ಅನುಕರಣೆ ಮಾಡಿದರೇ?

ಮುಂದೆ ಓದಿ

'ಸು ಫ್ರಮ್ ಸೋ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯ ಪಾತ್ರವೇನು?
ರಾಜ್‌ ಬಿ ಶೆಟ್ಟಿ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ನಟಿಸಿದ್ದಾರೆ?
ಅವಧೂತ ವಿನಯ್ ಗುರೂಜಿಯನ್ನು ಅನುಕರಣೆ ಮಾಡಿದರೇ?
ಈ ಸಿನಿಮಾ ನೋಡಿದ ನಿಮಗೂ ಹಾಗೆ ಅನಿಸುತ್ತಿದೆಯೇ?

'ಸು ಫ್ರಮ್ ಸೋ' ಈ ವರ್ಷ ಸಂಚಲನ ಸೃಷ್ಟಿಸಿದ ಕನ್ನಡದ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ. ಸೆಪ್ಪೆಯಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯವನ್ನು ಕೊಟ್ಟಿದ್ದು ರಾಜ್ ಬಿ ಶೆಟ್ಟಿ ಮತ್ತು ಅವರ ತಂಡ. ಸಿನಿಮಾ ರಿಲೀಸ್ ಆಗುವವರೆಗೂ ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೋದು ಗೊತ್ತೇ ಇರಲಿಲ್ಲ. ಆದರೆ, ಥಿಯೇಟರ್‌ಗೆ ಹೋಗಿ ಕೂತವರಿಗೆ ಅರ್ಧ ಸಿನಿಮಾ ಆಗುತ್ತಿದ್ದಂತೆ ಅವಧೂತರಾಗಿ ರಾಜ್ ಬಿ ಶೆಟ್ಟಿ ಎಂಟ್ರಿ ಕೊಡುತ್ತಾರೆ. ಜನರನ್ನು ತನ್ನ ಮ್ಯಾನರಿಸಂನಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ.

ಸಿನಿಮಾ ನೋಡುತ್ತಿರುವವರಿಗೆ ರಾಜ್ ಬಿ ಶೆಟ್ಟಿ ಎಂಟ್ರಿ ಆಗುತ್ತಿದ್ದಂತೆ ಈ ಪಾತ್ರವನ್ನು ರಿಯಲ್ ಲೈಫ್‌ನಲ್ಲಿ ಎಲ್ಲೋ ನೋಡಿದ್ದೇವೆ ಅಂತ ಭಾವವಾಗುವುದಕ್ಕೆ ಶುರುವಾಗುತ್ತೆ. ರಾಜ್ ಬಿ ಶೆಟ್ಟಿಯ ಮ್ಯಾನರಿಸಂ ಹಾಗಿದೆ. ಕೆಲವು ಸನ್ನಿವೇಶಗಳಲ್ಲಿ ಇವರು ಯಾರನ್ನೋ ಅನುಕರಣೆ ಮಾಡುತ್ತಿದ್ದಾರಲ್ಲ ಎಂದು ಅನಿಸಿಬಿಡುತ್ತೆ. ಆಗಲೇ ನೆನಪಿಗೆ ಬರೋದು ಅವಧೂತ ವಿನಯ್ ಗುರೂಜಿ. ರಾಜ್‌ ಬಿ ಶೆಟ್ಟಿಯ ಮೈಮೇಲೆ ಅವಧೂತರು ಬಂದು ಬಿಟ್ಟರೇ? ಎಂದು ಪ್ರಶ್ನೆ ಮೂಡಿ ಮರೆಯಾಗುತ್ತೆ.

Did Raj B Shetty imitate Avadhoota Vinay Guruji in the movie Su From So

ಈಗಾಗಲೇ ಸಿನಿಮಾ ನೋಡಿದ ಬಹುತೇಕ ಮಂದಿಗೆ ರಾಜ್ ಬಿ ಶೆಟ್ಟಿ ಪಾತ್ರದಲ್ಲಿ ವಿನಯ್ ಗುರೂಜಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಹಾವ ಭಾವದಲ್ಲಿ ಮಾತ್ರ. ವೇಷಭೂಷಣದಲ್ಲಿ ಹೋಲಿಕೆ ಆಗುವುದಿಲ್ಲ. ಇನ್ನು ಕೆಲವು ಸನ್ನಿವೇಶಗಳಲ್ಲಿ ಕರ್ನಾಟಕ ಜನಪ್ರಿಯ ಮಠಗಳ ಸ್ವಾಮೀಜಿಗಳನ್ನು ನೆನಪಿಸುವುದೂ ಉಂಟು. ಮೇಜರ್ ಆಗಿ ರಾಜ್ ಬಿ ಶೆಟ್ಟಿ ಪಾತ್ರ ಅವಧೂತ ವಿನಯ್ ಗುರೂಜಿಯನ್ನು ನೆನಪಿಸುತ್ತೆ ಎನ್ನುವ ಅಭಿಪ್ರಾಯವೇ ಇದೆ.

Take a Poll

ಆದರೆ, 'ಸು ಫ್ರಮ್ ಸೋ' ಸಿನಿಮಾದ ನಿರ್ದೇಶಕ ಜೆಪಿ ತುಮಿನಾಡು ಆಗಲಿ, ಸಿನಿಮಾ ತಂಡ ಆಗಿಲಿ. ಇಲ್ಲವೇ ಖುದ್ದಾಗಿ ರಾಜ್ ಬಿ ಶೆಟ್ಟಿಯೇ ಆಗಲಿ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಸಿನಿಮಾ ಬಿಡುಗಡೆವರೆಗೂ ಇಂತಹದ್ದೊಂದು ಪಾತ್ರದಲ್ಲಿ ನಟಿಸುತ್ತಿದ್ದೇನೆ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಯಾರದ್ದೇ ಅನುಕರಣೆ ಮಾಡಿದರೂ, ರಾಜ್ ಬಿ ಶೆಟ್ಟಿ ಪ್ರೇಕ್ಷಕರನ್ನು ನಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

More from Filmibeat

English summary
Did Raj B Shetty imitate Avadhoota Vinay Guruji in the movie Su From So?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X