For Quick Alerts
  ALLOW NOTIFICATIONS  
  For Daily Alerts

  'ಕತ್ತಲು ನನ್ನ ಸ್ವಂತ': ಮುಂದಿನ ಸಿನಿಮಾ ಬಗ್ಗೆ ದೊಡ್ಡ ಸಿಗ್ನಲ್ ಕೊಟ್ರಾ ಯಶ್?

  |

  ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಎಲ್ಲದಕ್ಕೂ ಸಮಯ ಬರುತ್ತೆ ಎಂದು ರಾಕಿಂಗ್ ಸ್ಟಾರ್ ಹೇಳಿದ್ದಾರೆ. ಆ ಸಮಯ ಯಾವಾಗ ಬರುತ್ತೋ ಎಂದು ಅಭಿಮಾನಿಗಳು ಕಾದೂ ಕಾದು ಸುಸ್ತಾಗಿದ್ದಾರೆ. ಸದ್ಯ ಯಶ್ ಸೋಶಿಯಲ್ ಮೀಡಿಯಾದಲ್ಲಿ ಮಾಡಿರೋ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌ನಲ್ಲಿ ಯಶ್ ಒಂದು ಫೋಟೊ ಶೇರ್ ಮಾಡಿದ್ದಾರೆ. ಸೈಮಾ ಅವಾರ್ಡ್ಸ್ ಈವೆಂಟ್ ಈ ಬಾರಿ ಬೆಂಗಳೂರಿನಲ್ಲಿ ನಡೆಯಲು ಯಶ್ ಪ್ರಮುಖ ಕಾರಣ ಎಂದು ಹೇಳಲಾಗ್ತಿದೆ. ಇತ್ತೀಚೆಗೆ ಇದೇ ಕಾಸ್ಟ್ಯೂಮ್‌ನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಸೈಮಾ ಅವಾರ್ಡ್ಸ್ ಈವೆಂಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದರು. ವೈಟ್ ಕಲರ್ ಸೂಟ್‌ನಲ್ಲಿ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅದೇ ಸೂಟ್‌ನಲ್ಲಿ ಕ್ಲಿಕ್ಕಿಸಿರುವ ಫೋಟೊವೊಂದನ್ನು ಇದೀಗ ಶೇರ್ ಮಾಡಿದ್ದಾರೆ. "ಕತ್ತಲು ನನ್ನ ಸ್ವಂತವಾಗಿದೆ. ಬಿಳಿ ಬಣ್ಣದ ಬಟ್ಟೆ ತೊಟ್ಟು ಪೋಸ್ ಕೊಟ್ಟಿದ್ದೇನೆ." ಎಂದು ಬರೆದುಕೊಂಡಿದ್ದಾರೆ.

  ರಾಮ ಮಂದಿರ ನಿರ್ಮಾಣಕ್ಕೆ ರಾಕಿಂಗ್ ಸ್ಟಾರ್ ಯಶ್ 50 ಕೋಟಿ ರೂ. ದೇಣಿಗೆ?ರಾಮ ಮಂದಿರ ನಿರ್ಮಾಣಕ್ಕೆ ರಾಕಿಂಗ್ ಸ್ಟಾರ್ ಯಶ್ 50 ಕೋಟಿ ರೂ. ದೇಣಿಗೆ?

  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ಹಾಗೂ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಲಕ್ಷ ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡು ಸದ್ದು ಮಾಡ್ತಿದೆ. ಇನ್ನು ಕಾಮೆಂಟ್ ಬಾಕ್ಸ್ ತುಂಬಾ ಅಭಿಮಾನಿಗಳು ಮುಂದಿನ ಸಿನಿಮಾ ಅಪ್‌ಡೇಟ್ ಕೊಡಿ ಎಂದು ಕೇಳುತ್ತಿದ್ದಾರೆ.

   ಕ್ರೇಜ್ ಕಾ ಬಾಪ್ ರಾಕಿಂಗ್ ಸ್ಟಾರ್

  ಕ್ರೇಜ್ ಕಾ ಬಾಪ್ ರಾಕಿಂಗ್ ಸ್ಟಾರ್

  ಸದ್ಯ ಯಶ್ ಪೋಸ್ಟ್‌ ಸೋಶಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದೆ. ಕನ್ನಡ ನಟನ ಪೋಸ್ಟ್‌ವೊಂದು ಈ ಪಾಟಿ ಸದ್ದು ಮಾಡಿದ್ದು ಇದೇ ಮೊದಲು. ಇನ್‌ಸ್ಟಾಗ್ರಾಂನಲ್ಲಿ ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್ ಲೈಕ್ಸ್ ಗಿಟ್ಟಿಸಿದೆ. ಇನ್ನು ಟ್ವಿಟ್ಟರ್‌ನಲ್ಲಿ 30 ನಿಮಿಷಕ್ಕೆ 10 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಇನ್ನು ಅದು 5 ಗಂಟೆಗಳಲ್ಲಿ 50 ಸಾವಿರ ದಾಟಿದೆ.

  ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ #Yash54: ಏನಿದು ಟ್ರೆಂಡ್ ಎಂದು ಫ್ಯಾನ್ಸ್ ಕನ್‌ಫ್ಯೂಸ್!ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ #Yash54: ಏನಿದು ಟ್ರೆಂಡ್ ಎಂದು ಫ್ಯಾನ್ಸ್ ಕನ್‌ಫ್ಯೂಸ್!

   ವೆಸ್ಟರ್ನ್ ಔಟ್‌ಫಿಟ್‌ಗೆ ದೇಸಿ ಟಚ್

  ವೆಸ್ಟರ್ನ್ ಔಟ್‌ಫಿಟ್‌ಗೆ ದೇಸಿ ಟಚ್

  ರಾಕಿಂಗ್ ಸ್ಟಾರ್ ಸ್ಟೈಲ್ ಬಗ್ಗೆ ಬಿಡಿಸಿ ಹೇಳೋದೇ ಬೇಕಾಗಿಲ್ಲ. ವೆಸ್ಟರ್ನ್ ಸ್ಟೈಲ್ ವೈಟ್ ಕಲರ್ ಸೂಟ್‌ನಲ್ಲಿ ಯಶ್ ಮಿಂಚಿದ್ದಾರೆ. ಅದಕ್ಕೆ ದೇಶಿ ಟಚ್ ಕೊಟ್ಟಿರೋ ಯಶ್‌ ವೈಟ್ ಕಲರ್ ಕುರ್ತಾ ಮೇಲೆ ಸೂಟ್ ಬ್ಲೇಸರ್ ಧರಿಸಿದ್ದಾರೆ. ಇನ್ನು ಉದ್ದನೆಯ ಗಡ್ಡ ಬಿಟ್ಟು, ತಲೆ ಕೂದಲನ್ನು ಜುಟ್ಟು ಕಟ್ಟಿಕೊಂಡು ಖಡಕ್ ಪೋಸ್ ಕೊಟ್ಟಿದ್ದಾರೆ.

   ಪೋಸ್ಟ್ ಡಿ ಕೋಡ್ ಮಾಡಿದ್ರಾ ಫ್ಯಾನ್ಸ್?

  ಪೋಸ್ಟ್ ಡಿ ಕೋಡ್ ಮಾಡಿದ್ರಾ ಫ್ಯಾನ್ಸ್?

  ಫೋಟೊಗೆ ಯಶ್ ಕೊಟ್ಟಿರುವ ಕ್ಯಾಪ್ಷನ್ ಕೂಡ ಎಲ್ಲರ ಗಮನ ಸೆಳೀತಿದೆ. ಏನಪ್ಪಾ ಇದರ ಅರ್ಥ? ಈ ಪೋಸ್ಟ್‌ನಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಶ್ ಸುಳಿವು ಕೊಟ್ಟಿದ್ದಾರಾ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. KGF ಚಿತ್ರದಲ್ಲಿ ಕತ್ತಲ ಸಾಮ್ರಾಜ್ಯದ ಅಧಿಪತಿಯಾಗಿ ರಾಕಿ ಭಾಯ್ ಬೆಳೆದ ರೋಚಕ ಕಥೆಯನ್ನು ಹೇಳಲಾಗಿತ್ತು. ಯಶ್ ಮುಂದಿನ ಸಿನಿಮಾ ಕೂಡ ಇದೇ ರೀತಿ ಇರುತ್ತಾ ಎನ್ನುವ ಕುತೂಹಲ ಮೂಡಿದೆ.

  ಯಶ್ ಬಾಲಿವುಡ್ ನಂ.1 ಸ್ಟಾರ್ ಎಂದ ಬಾಲಿವುಡ್ ಸ್ಟಾರ್ ನಟ!ಯಶ್ ಬಾಲಿವುಡ್ ನಂ.1 ಸ್ಟಾರ್ ಎಂದ ಬಾಲಿವುಡ್ ಸ್ಟಾರ್ ನಟ!

   ಯಶ್ 19 ಸಿನಿಮಾ ಕಥೆಯೇನು?

  ಯಶ್ 19 ಸಿನಿಮಾ ಕಥೆಯೇನು?

  ಪೋಸ್ಟ್ ನೋಡಿದ ಅಭಿಮಾನಿಗಳು ಮುಂದಿನ ಸಿನಿಮಾದಲ್ಲೂ ಕಾಣಿಸಿಕೊಳ್ತಾರಾ ಡಾನ್ ಆಗಿ ಅಂತ ಊಹಿಸಿಕೊಳ್ಳುತ್ತಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸಬೇಕಿದ್ದ ಸಿನಿಮಾ ನಿಂತು ಹೋಗಿದೆ. ಹಾಗಾಗಿ ಯಶ್ 'KGF ಚಾಪ್ಟರ್- 3' ಸಿನಿಮಾ ಕೈಗೆತ್ತಿಕೊಳ್ಳುತ್ತಾರಾ ಅನ್ನುವ ಅನುಮಾನವೂ ಮೂಡಿದೆ. ಒಟ್ನಲ್ಲಿ ಯಶ್ ಹೊಸ ಫೋಟೊ, ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  English summary
  Did Rocking Star Yash Gave hints About his next Movie in His Latest post. Know More.
  Friday, September 16, 2022, 9:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X