ಬಾಲಿವುಡ್ ಡೈರೆಕ್ಟರ್ ರೋಹಿತ್ ಶೆಟ್ಟಿ 'ಆ' ಒಂದು ಮಾತು ಹೇಳಿದ್ದು ನಮ್ಮ ದರ್ಶನ್ ಬಗ್ಗೆನಾ.?

Recommended Video

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಅಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರೋಹಿತ್ ಶೆಟ್ಟಿ | Oneindia Kannada

ನಿಮಗೆಲ್ಲಾ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ದೊಡ್ಡ ಅಭಿಮಾನಿ ಬಳಗ ಇದೆ. ಡಿ-ಕಂಪನಿ, ದರ್ಶನ್ ಸೇನಾ ಸಮಿತಿ, ದರ್ಶನ್ ಟ್ರೆಂಡ್ಸ್, ತೂಗುದೀಪ ಡೈನಾಸ್ಟಿ ಸೇರಿದಂತೆ ಹಲವು ಫ್ಯಾನ್ ಪೇಜ್ ಗಳು ಸೋಷಿಯಲ್ ಮೀಡಿಯಾದಲ್ಲಿವೆ.

ಬರೀ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅಲ್ಲ.. ಕರ್ನಾಟಕದ ಮೂಲೆ ಮೂಲೆಯಲ್ಲೂ 'ದಾಸ' ದರ್ಶನ್ ಗೆ ಅಭಿಮಾನಿಗಳ ದಂಡೇ ಇದೆ. ಭಾರತದ ಹಲವೆಡೆ... ವಿದೇಶಗಳಲ್ಲಿಯೂ ದರ್ಶನ್ ಅಭಿಮಾನಿಗಳ ಸಾಮ್ರಾಜ್ಯ ವಿಸ್ತರಣೆ ಆಗಿದೆ.

ಡಿ ಬಾಸ್ ದರ್ಶನ್ ಜನ್ಮದಿನವನ್ನು ದೊಡ್ಡ ಹಬ್ಬವಾಗಿ ಅಭಿಮಾನಿಗಳು ಆಚರಿಸುತ್ತಾರೆ. ಬರ್ತಡೇ ದಿನದಂದು ಅಭಿಮಾನಿಗಳ ಸಾಗರವೇ ದರ್ಶನ್ ಮನೆ ಮುಂದೆ ಹರಿದು ಬರುತ್ತದೆ. ಮಧ್ಯರಾತ್ರಿ 12ಕ್ಕೆ ಶುರುವಾಗುವ ಹುಟ್ಟುಹಬ್ಬದ ಸಂಭ್ರಮ 24 ಗಂಟೆಗಳು ಕಳೆದರೂ ಮುಗಿಯುವುದಿಲ್ಲ. ಬಹುಶಃ ಇದನ್ನ ನೋಡಿ ನಮ್ಮ ದರ್ಶನ್ ಬಗ್ಗೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ 'ಆ' ಮಾತು ಹೇಳಿದ್ರಾ.? ನಮಗಂತೂ ಗೊತ್ತಿಲ್ಲ.!

ಆದ್ರೆ, ರೋಹಿತ್ ಶೆಟ್ಟಿ ಹಾಗೆ ಹೇಳಿರುವುದು ದರ್ಶನ್ ಬಗ್ಗೆನೇ ಅಂತ ಡಿ ಬಾಸ್ ಹುಡುಗರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋನ ವೈರಲ್ ಮಾಡುತ್ತಿದ್ದಾರೆ. ಮುಂದೆ ಓದಿರಿ...

ಅದು ಹಳೇ ವಿಡಿಯೋ.!

ಅದು ಹಳೇ ವಿಡಿಯೋ.!

'ಬಾಲಿವುಡ್ ಹಂಗಾಮಾ' ವೆಬ್ ಸೈಟ್ ಗಾಗಿ ಎಂಟು ತಿಂಗಳ ಹಿಂದೆ... ಅಂದ್ರೆ ಮಾರ್ಚ್ ನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಒಂದು ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಹಾಗೂ ಅಲ್ಲಿನ ನಟರ ಫ್ಯಾನ್ ಫಾಲೋವಿಂಗ್ ಕುರಿತು ರೋಹಿತ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದರು. ಇದೀಗ ಅದೇ ವಿಡಿಯೋ ಯೂಟ್ಯೂಬ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿದೆ.

ಸಂದರ್ಶನದಲ್ಲಿ ರೋಹಿತ್ ಶೆಟ್ಟಿ ಹೇಳಿದ್ದೇನು.?

ಸಂದರ್ಶನದಲ್ಲಿ ರೋಹಿತ್ ಶೆಟ್ಟಿ ಹೇಳಿದ್ದೇನು.?

''ದಕ್ಷಿಣ ಭಾರತದಲ್ಲಿ ನಟರ ಫ್ಯಾನ್ ಕ್ಲಬ್ಸ್ ತುಂಬಾ ಸ್ಟ್ರಾಂಗ್ ಆಗಿದೆ. ಅಭಿಮಾನಿಗಳಿಗೆ ಆ ನಟರು ಕೂಡ ಹೆಚ್ಚಿನ ಮನ್ನಣೆ ಕೊಡುತ್ತಾರೆ. ಕನ್ನಡದಲ್ಲಿ ಒಬ್ಬರು ನಟರಿದ್ದಾರೆ. ನನಗೆ ಅವರ ಹೆಸರು ನೆನಪಾಗುತ್ತಿಲ್ಲ. ನಾನೊಂದು ವಿಡಿಯೋ ನೋಡಿದ್ದೆ, ಅದರಲ್ಲಿ ಆ ನಟನ ಹುಟ್ಟುಹಬ್ಬದ ದಿನ ಸಾವಿರಾರು ಜನ ಮನೆ ಮುಂದೆ ನೆರೆದಿದ್ದರು. ಇಡೀ ದಿನ ಪ್ರತಿಯೊಬ್ಬ ಅಭಿಮಾನಿಯನ್ನೂ ಆ ನಟ ಭೇಟಿ ಮಾಡಿದ್ದಾರೆ. ಅವತ್ತು ಬಹುಶಃ ಅವರು ಸಾವಿರಕ್ಕೂ ಹೆಚ್ಚು ಕೇಕ್ ಗಳನ್ನ ಕಟ್ ಮಾಡಿರಬಹುದು. ಇದರಿಂದ ಅವರ ಮೇಲಿನ ಅಭಿಮಾನ ಮತ್ತು ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ'' ಎಂದು ಸಂದರ್ಶನದಲ್ಲಿ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿದ್ದರು.

ಟ್ರೆಂಡ್ ಮಾಡುತ್ತಿರುವ ದರ್ಶನ್ ಫ್ಯಾನ್ಸ್

ಟ್ರೆಂಡ್ ಮಾಡುತ್ತಿರುವ ದರ್ಶನ್ ಫ್ಯಾನ್ಸ್

ಸಂದರ್ಶನದಲ್ಲಿ ಕನ್ನಡ ನಟನ ಹೆಸರನ್ನ ರೋಹಿತ್ ಶೆಟ್ಟಿ ಉಲ್ಲೇಖಿಸಿಲ್ಲ. ಆದರೂ, ರೋಹಿತ್ ಶೆಟ್ಟಿ ಮಾತನಾಡಿರುವುದು ನಮ್ ಡಿ ಬಾಸ್ ದರ್ಶನ್ ಬಗ್ಗೆ ಅಂತ ಅಭಿಮಾನಿಗಳು ಆ ವಿಡಿಯೋನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ.

ಯಾರೀ ರೋಹಿತ್ ಶೆಟ್ಟಿ.?

ಯಾರೀ ರೋಹಿತ್ ಶೆಟ್ಟಿ.?

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ರೋಹಿತ್ ಶೆಟ್ಟಿ ಇಂದು ಬಾಲಿವುಡ್ ನ ಜನಪ್ರಿಯ ನಿರ್ದೇಶಕ. 'ಚೆನ್ನೈ ಎಕ್ಸ್ ಪ್ರೆಸ್', 'ಸಿಂಗಂ ರಿಟರ್ನ್ಸ್', 'ದಿಲ್ವಾಲೆ', 'ಸಿಂಬಾ' ಮುಂತಾದ ಹಿಟ್ ಚಿತ್ರಗಳನ್ನು ರೋಹಿತ್ ಶೆಟ್ಟಿ ನೀಡಿದ್ದಾರೆ. ಫಿಯರ್ ಫ್ಯಾಕ್ಟರ್: ಖತರೋಂಕೆ ಖಿಲಾಡಿ ರಿಯಾಲಿಟಿ ಶೋಗಳ ನಿರೂಪಣೆಯನ್ನೂ ರೋಹಿತ್ ಶೆಟ್ಟಿ ಮಾಡಿದ್ದಾರೆ.

More from Filmibeat

English summary
Did Bollywood Actor Rohit Shetty appreciate Kannada Actor Darshan.?
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X