ಸಂಜನಾ ಗೆ ಮದುವೆ ಆಗಿದ್ಯಾ? ಯಾರಿದು ವೈದ್ಯ ಅಜೀಜ್?
ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಬಂಧನವಾದ ಬೆನ್ನಲ್ಲೆ ಸಂಜನಾಗೆ ಮದುವೆ ಆಗಿದೆ ಎಂಬ ವಿಷಯ ಹರಿದಾಡುತ್ತಿದೆ. ನಗರದ ವೈದ್ಯರೊಬ್ಬರ ಜೊತೆ ಸಂಜನಾ ಗೆ ಕೆಲವು ತಿಂಗಳುಗಳ ಹಿಂದೆಯೇ ಮದುವೆ ಆಗಿದೆ ಎನ್ನಲಾಗುತ್ತಿದೆ.
ಸಂಜನಾ ವಧುವಿನ ಉಡುಗೆಯಲ್ಲಿ ವ್ಯಕ್ತಿಯೊಬ್ಬರ ಪಕ್ಕ ಕೂತಿರುವ ಚಿತ್ರ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ. ಈ ಚಿತ್ರದ ಆಧಾರದಲ್ಲಿಯೇ ಸಂಜನಾ ಗೆ ಮದುವೆ ಆಗಿದೆ ಎನ್ನಲಾಗುತ್ತಿದೆ. ಆದರೆ ಸಂಜನಾ ಗೆ ಮದುವೆ ಆಗಿಲ್ಲ ಬದಲಿಗೆ ನಿಶ್ಚಿತಾರ್ಥವಷ್ಟೆ ಆಗಿದೆ ಎನ್ನುತ್ತಿದ್ದಾರೆ ಸಂಜನಾ ಕುಟುಂಬ ಸದಸ್ಯರು.
ಸಂಜನಾ ಜೊತೆಗೆ ಚಿತ್ರದಲ್ಲಿರುವ ವ್ಯಕ್ತಿಯನ್ನು ಡಾ.ಅಜೀಜ್. ಸಂಜನಾ ತಾಯಿ ಹೇಳಿರುವಂತೆ ಸಂಜನಾ ಗೆ ಮದುವೆಯಾಗಿಲ್ಲ, ಬದಲಿಗೆ ನಿಶ್ಚಿತಾರ್ಥವಾಗಿದೆ.

ಏಪ್ರಿಲ್ 22 ಕ್ಕೆ ಮದುವೆ ನಿಗದಿಯಾಗಿತ್ತಂತೆ
ಸಂಜನಾ ತಾಯಿ ಹೇಳಿರುವಂತೆ ಮೂರು ವರ್ಷಗಳ ಹಿಂದೆಯೇ ಸಂಜನಾ ಮದುವೆ ನಿಶ್ಚಯವಾಗಿತ್ತು. ಇದೇ ಏಪ್ರಿಲ್ 22 ಕ್ಕೆ ಮದುವೆ ನಿಶ್ಚಯವಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಮದುವೆ ಮುಂದೂಡಲಾಯಿತಂತೆ.

ಸಂಜನಾರ ಅಪಾರ್ಟ್‌ಮೆಂಟ್‌ನಲ್ಲೇ ಅಜೀಜ್ ವಾಸ?
ಸಂಜನಾ ಜೊತೆಗೆ ಚಿತ್ರದಲ್ಲಿರುವ ವೈದ್ಯ ಅಜೀಜ್ ಸಹ ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತಾ, 'ನಾನು ಸಂಜನಾ ಫಿಯಾನ್ಸೆ' ಎಂದು ಹೇಳಿದ್ದರು. ಅಜೀಜ್, ಸಂಜನಾ ಕುಟುಂಬ ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿಯೇ ವಾಸಿಸುತ್ತಿದ್ದಾರೆ.

ವೈದ್ಯರೊಬ್ಬರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸಂಜನಾ
ನಟಿ ಸಂಜನಾ, ತೆಲುಗಿನ ಹಾಸ್ಯನಟ ಆಲಿ ನಡೆಸಿಕೊಡುವ ಟಾಕ್ ಶೋ ಒಂದರಲ್ಲಿ ಪ್ರೀತಿ ಪ್ರೇಮದ ವಿಷಯ ಮಾತನಾಡಿದ್ದರು. 'ನಾನು ವೈದ್ಯರೊಬ್ಬರನ್ನು ಪ್ರೀತಿಸುತ್ತಿದ್ದೇನೆ, ಆತ ಜಂಟಲ್‌ಮನ್, ಬಹಳ ಮೃದು ಸ್ವಭಾವದವರು, ಮಣಿಪಾಲ್ ಆಸ್ಪತ್ರೆಯಲ್ಲಿ ಅವರನ್ನು ಮೊದಲು ಭೇಟಿಯಾಗಿದ್ದೆ. ಮೊದಲ ನೋಟದಲ್ಲಿಯೇ ಅವರನ್ನು ಪ್ರೀತಿಸಿದೆ' ಎಂದಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ.
Recommended Video

ಕೊರೊನಾ ಇಲ್ಲದೇ ಹೋಗಿದ್ದರೆ ಸಂಜನಾ ಮದುವೆ ಆಗಿರುತ್ತಿತ್ತು
ನಟಿ ಸಂಜನಾ ತಮ್ಮ ಮದುವೆ ಅಥವಾ ನಿಶ್ಚಿತಾರ್ಥದ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿರಲಿಲ್ಲ. ಕೊರೊನಾ ಲಾಕ್‌ಡೌನ್ ಆಗದೇ ಇದ್ದಿದ್ದರೆ ಈ ವೇಳೆಗೆ ಸಂಜನಾ ಮದುವೆ ಆಗಿರುತ್ತಿತ್ತೇನೋ. ಈಗ ಡ್ರಗ್ಸ್ ಪ್ರಕರಣ ಬೇರೆ ಆಗಿರುವ ಕಾರಣ ಸಂಜನಾ ಮದುವೆ ಇನ್ನೂ ಮುಂದಕ್ಕೆ ಹೋಗುತ್ತದೆಯೋ ಕಾದು ನೋಡಬೇಕಿದೆ.


Click it and Unblock the Notifications











