For Quick Alerts
  ALLOW NOTIFICATIONS  
  For Daily Alerts

  ಸಂಜನಾ ಗೆ ಮದುವೆ ಆಗಿದ್ಯಾ? ಯಾರಿದು ವೈದ್ಯ ಅಜೀಜ್?

  |

  ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಬಂಧನವಾದ ಬೆನ್ನಲ್ಲೆ ಸಂಜನಾಗೆ ಮದುವೆ ಆಗಿದೆ ಎಂಬ ವಿಷಯ ಹರಿದಾಡುತ್ತಿದೆ. ನಗರದ ವೈದ್ಯರೊಬ್ಬರ ಜೊತೆ ಸಂಜನಾ ಗೆ ಕೆಲವು ತಿಂಗಳುಗಳ ಹಿಂದೆಯೇ ಮದುವೆ ಆಗಿದೆ ಎನ್ನಲಾಗುತ್ತಿದೆ.

  ಸಂಜನಾ ವಧುವಿನ ಉಡುಗೆಯಲ್ಲಿ ವ್ಯಕ್ತಿಯೊಬ್ಬರ ಪಕ್ಕ ಕೂತಿರುವ ಚಿತ್ರ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ. ಈ ಚಿತ್ರದ ಆಧಾರದಲ್ಲಿಯೇ ಸಂಜನಾ ಗೆ ಮದುವೆ ಆಗಿದೆ ಎನ್ನಲಾಗುತ್ತಿದೆ. ಆದರೆ ಸಂಜನಾ ಗೆ ಮದುವೆ ಆಗಿಲ್ಲ ಬದಲಿಗೆ ನಿಶ್ಚಿತಾರ್ಥವಷ್ಟೆ ಆಗಿದೆ ಎನ್ನುತ್ತಿದ್ದಾರೆ ಸಂಜನಾ ಕುಟುಂಬ ಸದಸ್ಯರು.

  ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ಕನ್ನಡ ನಟರ ಹೆಸರು ಹೇಳಿದ ಸಂಜನಾಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ಕನ್ನಡ ನಟರ ಹೆಸರು ಹೇಳಿದ ಸಂಜನಾ

  ಸಂಜನಾ ಜೊತೆಗೆ ಚಿತ್ರದಲ್ಲಿರುವ ವ್ಯಕ್ತಿಯನ್ನು ಡಾ.ಅಜೀಜ್. ಸಂಜನಾ ತಾಯಿ ಹೇಳಿರುವಂತೆ ಸಂಜನಾ ಗೆ ಮದುವೆಯಾಗಿಲ್ಲ, ಬದಲಿಗೆ ನಿಶ್ಚಿತಾರ್ಥವಾಗಿದೆ.

  ಏಪ್ರಿಲ್ 22 ಕ್ಕೆ ಮದುವೆ ನಿಗದಿಯಾಗಿತ್ತಂತೆ

  ಏಪ್ರಿಲ್ 22 ಕ್ಕೆ ಮದುವೆ ನಿಗದಿಯಾಗಿತ್ತಂತೆ

  ಸಂಜನಾ ತಾಯಿ ಹೇಳಿರುವಂತೆ ಮೂರು ವರ್ಷಗಳ ಹಿಂದೆಯೇ ಸಂಜನಾ ಮದುವೆ ನಿಶ್ಚಯವಾಗಿತ್ತು. ಇದೇ ಏಪ್ರಿಲ್‌ 22 ಕ್ಕೆ ಮದುವೆ ನಿಶ್ಚಯವಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಮದುವೆ ಮುಂದೂಡಲಾಯಿತಂತೆ.

  ಸಂಜನಾರ ಅಪಾರ್ಟ್‌ಮೆಂಟ್‌ನಲ್ಲೇ ಅಜೀಜ್ ವಾಸ?

  ಸಂಜನಾರ ಅಪಾರ್ಟ್‌ಮೆಂಟ್‌ನಲ್ಲೇ ಅಜೀಜ್ ವಾಸ?

  ಸಂಜನಾ ಜೊತೆಗೆ ಚಿತ್ರದಲ್ಲಿರುವ ವೈದ್ಯ ಅಜೀಜ್ ಸಹ ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತಾ, 'ನಾನು ಸಂಜನಾ ಫಿಯಾನ್ಸೆ' ಎಂದು ಹೇಳಿದ್ದರು. ಅಜೀಜ್, ಸಂಜನಾ ಕುಟುಂಬ ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿಯೇ ವಾಸಿಸುತ್ತಿದ್ದಾರೆ.

  ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ 2 ಸಾವಿರ ದಂಡ ಕಟ್ಟಿದ ನಟಿ ಸಂಜನಾಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ 2 ಸಾವಿರ ದಂಡ ಕಟ್ಟಿದ ನಟಿ ಸಂಜನಾ

  ವೈದ್ಯರೊಬ್ಬರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸಂಜನಾ

  ವೈದ್ಯರೊಬ್ಬರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸಂಜನಾ

  ನಟಿ ಸಂಜನಾ, ತೆಲುಗಿನ ಹಾಸ್ಯನಟ ಆಲಿ ನಡೆಸಿಕೊಡುವ ಟಾಕ್‌ ಶೋ ಒಂದರಲ್ಲಿ ಪ್ರೀತಿ ಪ್ರೇಮದ ವಿಷಯ ಮಾತನಾಡಿದ್ದರು. 'ನಾನು ವೈದ್ಯರೊಬ್ಬರನ್ನು ಪ್ರೀತಿಸುತ್ತಿದ್ದೇನೆ, ಆತ ಜಂಟಲ್‌ಮನ್, ಬಹಳ ಮೃದು ಸ್ವಭಾವದವರು, ಮಣಿಪಾಲ್ ಆಸ್ಪತ್ರೆಯಲ್ಲಿ ಅವರನ್ನು ಮೊದಲು ಭೇಟಿಯಾಗಿದ್ದೆ. ಮೊದಲ ನೋಟದಲ್ಲಿಯೇ ಅವರನ್ನು ಪ್ರೀತಿಸಿದೆ' ಎಂದಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ.

  Americaದಲ್ಲಿ ಗುಟ್ಟಾಗಿ ನಡೀತು Sanjjanaa ಮದುವೆ | Oneindia Kannada
  ಕೊರೊನಾ ಇಲ್ಲದೇ ಹೋಗಿದ್ದರೆ ಸಂಜನಾ ಮದುವೆ ಆಗಿರುತ್ತಿತ್ತು

  ಕೊರೊನಾ ಇಲ್ಲದೇ ಹೋಗಿದ್ದರೆ ಸಂಜನಾ ಮದುವೆ ಆಗಿರುತ್ತಿತ್ತು

  ನಟಿ ಸಂಜನಾ ತಮ್ಮ ಮದುವೆ ಅಥವಾ ನಿಶ್ಚಿತಾರ್ಥದ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿರಲಿಲ್ಲ. ಕೊರೊನಾ ಲಾಕ್‌ಡೌನ್ ಆಗದೇ ಇದ್ದಿದ್ದರೆ ಈ ವೇಳೆಗೆ ಸಂಜನಾ ಮದುವೆ ಆಗಿರುತ್ತಿತ್ತೇನೋ. ಈಗ ಡ್ರಗ್ಸ್ ಪ್ರಕರಣ ಬೇರೆ ಆಗಿರುವ ಕಾರಣ ಸಂಜನಾ ಮದುವೆ ಇನ್ನೂ ಮುಂದಕ್ಕೆ ಹೋಗುತ್ತದೆಯೋ ಕಾದು ನೋಡಬೇಕಿದೆ.

  ಸಂಜನಾ ಗಲ್ರಾನಿ ಬಂಧನ: ಸಿಸಿಬಿ ಜಂಟಿ ಆಯುಕ್ತರು ಹೇಳಿದ್ದೇನು?ಸಂಜನಾ ಗಲ್ರಾನಿ ಬಂಧನ: ಸಿಸಿಬಿ ಜಂಟಿ ಆಯುಕ್ತರು ಹೇಳಿದ್ದೇನು?

  English summary
  Who is Doctor Azeez Pasha. Did Sanjjana married Azeez Pasha. A image getting viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X